Get Updates
Get notified of breaking news, exclusive insights, and must-see stories!

Teacher's Day 2023: ರಾಜಕೀಯ ಗಣ್ಯರಿಂದ ಗುರು ವೃಂದದವರಿಗೆ ನಮನ

ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಜೊತೆಗೆ ದೇಶದ ಭವ್ಯ ಭವಿಷ್ಯವನ್ನು ರೂಪಿಸುವ, ಕತ್ತಲೆಯಿಂದ ವಿದ್ಯಾರ್ಥಿಗಳನ್ನು ಬೆಳಕಿನಡೆಗೆ ಕರೆದುಕೊಂಡು ಹೋಗುವ, ಅರಿಯದ ಕಲ್ಲಿಗೆ ಜ್ಞಾನವನ್ನಿತ್ತು ಮೂರ್ತಿ ಮಾಡಿದ ವಿದ್ಯಾ ಚೇತನರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ವಿದ್ಯಾರ್ಥಿಗಳ ಜೀವನ ರೂಪುಗೊಳ್ಳಲು ದುಡಿಯುತ್ತಿರುವ, ಮುಗ್ದ ಮನದಲ್ಲಿ ಅಕ್ಷರವೆಂಬ ಬೀಜ ಬಿತ್ತಿ ಮಕ್ಕಳ ಭವಿಷ್ಯಕ್ಕೆ ಜ್ಞಾನದ ಬೆಳಕನ್ನು ಚೆಲ್ಲಿ ಸುಂದರ ನಾಡ ಕಟ್ಟುವ ಎಲ್ಲಾ ಪ್ರೀತಿಯ ಗುರುಗಳಿಗೆ ಗೌರವ ಸೂಚಿಸಲು ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

Teachers Day 2023: Tribute to Teachers from political elite

ಇಂದು ದೇಶದೆಲ್ಲೆಡೆ ಶಿಕ್ಷಕರ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಂದ ಎಲ್ಲಾ ಗುರುವರ್ಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಿಜೆಪಿ ಕೂಡ ಗುರು ವೃಂದದವರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದೆ. 'ವಿದ್ಯಾರ್ಥಿಗಳ ಆದರ್ಶ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನದ ಸ್ಮರಣೆಗಳು. ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು' ಎಂದು ಬಿಜೆಪಿ x(ಟ್ವೀಟ್) ಮಾಡಿದೆ.

ಕಮಲ್ ಹಾಸನ್

ಎಂಎನ್ಎಂ ಪಕ್ಷ ಸ್ಥಾಪನೆ ಮಾಡಿದ ಕಮಲ್ ಹಾಸನ್ ಗುರು ವೃಂದದವರಿಗೆ ನಮನ ಸಲ್ಲಿಸಿದ್ದಾರೆ. 'ಶಿಕ್ಷಣ ಸಮಾಜದ ದಾರಿದೀಪ. ತಮಿಳು ಸಮುದಾಯದ ಉಗಮ ಮತ್ತು ಏಳಿಗೆಯಲ್ಲಿ ಶಿಕ್ಷಕರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಶಿಕ್ಷಕರ ದಿನದಂದು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗೆ ಗೌರವ ಸಲ್ಲಿಸಲು ನನಗೆ ಸಂತೋಷವಾಗಿದೆ. ಅವರ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ' ಎಂದು ಅವರು x(ಟ್ವೀಟ್)ನಲ್ಲಿ ಬರೆದಿದ್ದಾರೆ.

ನರೇಂದ್ರ ಮೋದಿ

ನಮ್ಮ ಭವಿಷ್ಯವನ್ನು ನಿರ್ಮಿಸುವಲ್ಲಿ ಮತ್ತು ಕನಸುಗಳನ್ನು ಪ್ರೇರೇಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರ ದಿನದಂದು ಅವರ ಅಚಲವಾದ ಸಮರ್ಪಣೆ ಮತ್ತು ಉತ್ತಮ ಪ್ರಭಾವಕ್ಕಾಗಿ ನಾವು ಅವರನ್ನು ವಂದಿಸುತ್ತೇವೆ. ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನದಂದು ಅವರಿಗೆ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಕರಿಗೆ ಶುಭ ಕೋರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ

ಶಿಕ್ಷಕರಿಗೆ ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭ ಕೋರಿದ್ದಾರೆ. 'ಶಿಕ್ಷಕರು ನಿಜವಾದ ರಾಷ್ಟ್ರ ನಿರ್ಮಾತೃಗಳು. ಅವರು ನಮ್ಮ ಮಾರ್ಗದ ದೀಪಗಳು ಮಾತ್ರವಲ್ಲ, ಉತ್ತಮ ಮೌಲ್ಯಗಳ ಧ್ವಜಧಾರಿಗಳು ಮತ್ತು ನಮ್ಮ ನೈತಿಕ ದಿಕ್ಸೂಚಿಯಾಗಿದ್ದಾರೆ. ಶಿಕ್ಷಕರ ದಿನದಂದು, ದೇಶಾದ್ಯಂತ ಇರುವ ಎಲ್ಲಾ ಶಿಕ್ಷಕರಿಗೆ ನಾವು ನಮಸ್ಕರಿಸುತ್ತೇವೆ, ಏಕೆಂದರೆ ಅವರೇ ನಮ್ಮ ಭವಿಷ್ಯದ ಭವಿಷ್ಯವನ್ನು ರೂಪಿಸುತ್ತಾರೆ. ಭಾರತದ ಮಾಜಿ ರಾಷ್ಟ್ರಪತಿ, ಡಾ. ಎಸ್. ರಾಧಾಕೃಷ್ಣನ್ ಅವರಿಗೆ ನಮ್ಮ ನಮ್ರ ನಮನಗಳು. ಅವರು ತತ್ವಜ್ಞಾನಿ ಮತ್ತು ರಾಜನೀತಿಜ್ಞರಾಗಿದ್ದರು ಮತ್ತು ಅವರ ಕೊಡುಗೆ, ಸಮರ್ಪಣೆ ಮತ್ತು ಬುದ್ಧಿವಂತಿಕೆಯು ಪೀಳಿಗೆಯಿಂದ ಪೀಳಿಗೆಗೆ ನಮಗೆ ಸ್ಫೂರ್ತಿ ನೀಡುತ್ತಿದೆ' ಎಂದು ಖರ್ಗೆ ಅವರು x(ಟ್ವೀಟ್)ನಲ್ಲಿ ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+