ಸೊಸೆಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಲ್ಲಿ 15 ತಿಂಗಳ ಮೊಮ್ಮಗಳನ್ನು ಕೊಂದ ಅಜ್ಜಿ

ಚೆನ್ನೈ, ಜುಲೈ. 22: ಅತ್ತೆ- ಸೊಸೆ ಸಂಬಂಧ ಚೆನ್ನಾಗಿರುವುದು ಕೆಲವು ಮನೆಗಳಲ್ಲಿ ಮಾತ್ರ. ಹಲವು ಸಮಯದ ಇಲ್ಲಿ ಜಗಳಗಳೇ ಹೆಚ್ಚಾಗಿರುತ್ತದೆ. ಮನೆಯ ಮೇಲಿನ ತಮ್ಮ ಹಿಡಿತ ತಪ್ಪಬಾರದು ಎಂದು ಬಡಿದಾಡುವ ಅತ್ತೆ.. ಹೊಸ ಮನೆಯ ಮೇಲೆ ಹಿಡಿತ ಸಾಧಿಸಲು ಪರದಾಡುವ ಸೊಸೆಯ ನಡುವೆ ಬರುವ ಜಗಳಗಳು ಸಾಮಾನ್ಯವಾಗಿರುತ್ತದೆ.

ಇದೆ ಸಮಯದಲ್ಲಿ ಈ ಮನಸ್ತಾಪ, ಜಗಳಗಳು ತಾರಕ್ಕಕೆ ಏರುವ ಸಾಧ್ಯತೆಯಿದೆ. ನೆರೆಯ ತಮಿಳುನಾಡಿನಲ್ಲಿ ಇಂತಹ ಜಗಳ ದುರಂತವಾಗಿದ್ದು, 15 ತಿಂಗಳ ಹಸುಳೆಯ ಜೀವವನ್ನು ಬಲಿ ಪಡೆದಿದೆ. ತಮಿಳುನಾಡಿನ ಅರಿಯಲೂರ್ ಜಿಲ್ಲೆಯಲ್ಲಿ 60 ವರ್ಷದ ವೃದ್ಧೆಯೊಬ್ಬಳು ತನ್ನ ಸೊಸೆಗೆ ಅಕ್ರಮ ಸಂಬಂಧವಿದೆ ಎಂದು ಭಾವಿಸಿ ಮೊಮ್ಮಗುವನ್ನು ಕೊಂದಿದ್ದಾಳೆ.

Tamil Nadu woman suspecting daughter-in-law s affair kills 15-month-old granddaughter

ಅಕ್ರಮ ಸಂಬಂಧದಿಂದ ತನ್ನ ಸೊಸೆಗೆ ಮಗು ಜನಿಸಿದೆ ಎಂಬ ಶಂಕೆಯಿಂದ ತನ್ನ 15 ತಿಂಗಳ ಎಳೆ ಮೊಮ್ಮಗಳನ್ನು 60 ವರ್ಷದ ವೃದ್ಧೆ ಕೊಂದಿದ್ದಾಳೆ. ಕೊಲೆ ಮಾಡಿದ ಆರೋಪಿ ವಿರುತಾಂಬಳನನ್ನು ಪೊಲೀಸರು ಬಂಧಿಸಿದ್ದು, ಆಕೆ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆರೋಪಿ ವೃದ್ಧೆಯ ಮಗ ರಾಜಾ ತನ್ನ 21 ವರ್ಷದ ಪತ್ನಿ ಸಂಧ್ಯಾ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದ. ಈ ವೇಳೆ ಸಂಧ್ಯಾ ಕೃತಿಕಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ, ಸಂಧ್ಯಾ ಹೇಳುವ ಪ್ರಕಾರ, ರಾಜಾ ವಿದೇಶದಲ್ಲಿರುವುದರಿಂದ ಮಗು ಅಕ್ರಮ ಸಂಬಂಧದಿಂದ ಹುಟ್ಟಿದೆ ಎಂದು ಆಕೆಯ ಅತ್ತೆ ಆರೋಪಿಸುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ಸಂಧ್ಯಾ ತನ್ನ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸಮೀಪದ ಅಂಗಡಿಗೆ ಹಾಲು ಖರೀದಿಸಲು ಹೋಗಿದ್ದರು. ಅಂಗಡಿಯಿಂದ ಮರಳಿ ಬಂದಾಗ ಸಂಧ್ಯಾ ತನ್ನ ಮಗಳು ಕೃತಿಕಾ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂತು. ನಂತರ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಧ್ಯಾಳ ದೂರಿನ ಆಧಾರದ ಮೇಲೆ ತಮಿಳುನಾಡು ಪೊಲೀಸರು ಆಕೆಯ ಅತ್ತೆ ವಿರುತಾಂಬಳನ್ನು ಬಂಧಿಸಿದ್ದಾರೆ. ಹಲವಾರು ಗಂಟೆಗಳ ವಿಚಾರಣೆಯ ನಂತರ, ವಿರುತಾಂಬ ಬಾಲಕಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗು ಆಟವಾಡುತ್ತಿದ್ದಾಗ ತನ್ನ ಸಹೋದರನ ಮೇಲೆ ಮರಳನ್ನು ಎಸೆದಿದ್ದಾರೆ.

ಇದನ್ನು ನೋಡಿದ ವಿರುತಾಂಬ ಕೋಪದ ಭರದಲ್ಲಿ 15 ತಿಂಗಳ ಮಗುವಿಗೆ ಬಲವಂತವಾಗಿ ಮರಳನ್ನು ತಿನ್ನಿಸಿದ್ದಾರೆ. ಇದರ ಪರಿಣಾಮ ಹಸುಳೆ ಮೃತಪಟ್ಟಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ವಿಚಾರಣೆಯ ನಂತರ ಆಕೆಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸದ್ಯ ಆರೋಪಿ, ನ್ಯಾಯಾಂಗ ಬಂಧನದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+