Tamil Nadu Rain:: ನಿರಂತರ ಮಳೆ: ಶಾಲಾ-ಕಾಲೇಜುಗಳಿಗೆ ರಜೆ- 11 ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ!
ದೇಶದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು, ಶೀತತ ಅಲೆಯ ನಡುವೆ ಕೆಲವೆಡೆ ಮಳೆ ಅರ್ಭಟ ಜೋರಾಗಿದೆ. ತಮಿಳುನಾಡಿನ ಕೆಲ ಪ್ರದೇಶದಲ್ಲಿ ನಿರಂತರ ಮಳೆಯಾಘುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ತಿರುವರೂರ್ ಫೆಬ್ರವರಿ 2: ಚಳಿಗಾಲ ಮುಗಿದು ಬೇಸಿಗೆ ಕಾಲ ಶುರುವಾಗುವ ಸಮಯವಿದು. ಆದರೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ತಮಿಳುನಾಡಿನ ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಈಶಾನ್ಯ ಮತ್ತು ಪಕ್ಕದ ಪೂರ್ವ ಭಾರತವನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ. ವಾಯುವ್ಯ ಭಾರತದಲ್ಲಿ ಶೀತ ಅಲೆ ಕಡಿಮೆಯಾಗುವ ಸಾಧ್ಯತೆ ಇದ್ದು ಫೆಬ್ರವರಿಯಲ್ಲಿ ಸಾಮಾನ್ಯ ಮಳೆ ವೀಕ್ಷಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
#WATCH | Due to the Depression formed over the southwest Bay of Bengal, heavy rain lashes several parts of the Nagapattinam district, Tamil Nadu
— ANI (@ANI) February 2, 2023
Schools and colleges in Nagapattinam, Mayiladuthurai districts closed for today in view of rainfall. pic.twitter.com/JivGL47DH4
ವಾಯುವ್ಯ ಭಾರತದಲ್ಲಿ ಫೆಬ್ರವರಿಯಲ್ಲಿ ಮಳೆ ಹೆಚ್ಚಾಗಿರುತ್ತದೆ. 1971-2020 ರ ಡೇಟಾದ ಆಧಾರದ ಮೇಲೆ ಫೆಬ್ರವರಿಯಲ್ಲಿ ವಾಯುವ್ಯ ಭಾರತದಲ್ಲಿ ದೀರ್ಘಾವಧಿಯ ಮಳೆ ಸರಾಸರಿ 65.0 ಮಿ.ಮೀ ದಾಖಲಾಗಿದೆ. ಹೀಗಾಗಿ ಕೋಲ್ಡ್ ವೇವ್ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಹಾನಿರ್ದೇಶಕ ಎಂ ಮೊಹಾಪಾತ್ರ ಹೇಳಿದ್ದಾರೆ. ಗಾಳಿಯಿಂದ ಮೋಡಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸುವುದರಿಂದ ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆ ಶೀತ ಅಲೆಗಳು ಗಾಳಿಯಲ್ಲಿ ಚದುರಿಹೋಗುತ್ತದೆ. ಜೊತೆಗೆ ಮಳೆ ತರಿಸುವ ಮೋಡಗಳು ಶಾಖದ ಅಲೆಗಳು ಸೃಷ್ಟಿಯಾಗುತ್ತವೆ. ಇದರಿಂದ ಮಳೆಗೂ ಮುನ್ನ ತಾಪಮಾನದಲ್ಲಿ ಹೆಚ್ಚಾಗಬಹುದು ಬಳಿಕ ಕಡಿಮೆಯಾಗುವ ಸಾಧ್ಯತೆ ಇದೆ.
ಇದಲ್ಲದೆ, ಭಾರತೀಯ ಹವಾಮಾನ ಇಲಾಖೆ (IMD) ಸಹ ಯನ್ನು ನೀಡಿದೆ.
ಹಳದಿ ಎಚ್ಚರಿಕೆಯಲ್ಲಿರುವ ಜಿಲ್ಲೆಗಳ ಪಟ್ಟಿ-
ತಂಜಾವೂರು
ನಾಗಪಟ್ಟಣಂ
ತಿರುವರೂರ್
ಮೈಲಾಡುತುರೈ
ಕಡಲೂರು
ತಿರುನೆಲ್ವೇಲಿ
ತೂತುಕುಡಿ
ರಾಮನಾಥಪುರ
ಶಿವಗಂಗಾ
ಪುದುಕ್ಕೋಟೈ

ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ
ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ, ಪೂರ್ವ-ಮಧ್ಯ ಭಾರತ ಮತ್ತು ವಾಯುವ್ಯ ಮತ್ತು ಪಶ್ಚಿಮ-ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವಿದೆ. ಈಶಾನ್ಯ ಮತ್ತು ಪಕ್ಕದ ಪೂರ್ವ ಭಾರತ, ಪಶ್ಚಿಮ ಕರಾವಳಿಯ ಉತ್ತರ ಭಾಗಗಳು ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿರುತ್ತದೆ.
ಪೆಬ್ರವರಿಯಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಪೂರ್ವ-ಮಧ್ಯ ಭಾರತ, ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಸಾಧ್ಯತೆಯಿದೆ ಎಂದು ಮೊಹಾಪಾತ್ರ ಹೇಳಿದರು.

2020ರಲ್ಲಿ ಏಳು ಕೋಲ್ಡ್‌ವೇವ್
ರಾಷ್ಟ್ರೀಯ ರಾಜಧಾನಿಯು ಜನವರಿಯಲ್ಲಿ ಎಂಟು ಕೋಲ್ಡ್ ವೇವ್ ದಿನಗಳನ್ನು ದಾಖಲಿಸಿದೆ. 15 ವರ್ಷಗಳಲ್ಲಿ ಈ ತಿಂಗಳಲ್ಲಿ ಅದು ಅತಿ ಹೆಚ್ಚಾಗಿದೆ. ಇದು ಜನವರಿ 2020ರಲ್ಲಿ ಏಳು ಕೋಲ್ಡ್‌ವೇವ್ ದಿನಗಳನ್ನು ಕಂಡಿತು. ಆದರೆ ಕಳೆದ ವರ್ಷ ಅದು ಅಂತಹ ಯಾವುದೇ ದಿನವನ್ನು ದಾಖಲಿಸಲಿಲ್ಲ.
IMD ದತ್ತಾಂಶದ ಪ್ರಕಾರ, ನಗರದಲ್ಲಿ ಜನವರಿ 5 ರಿಂದ 9 ರವರೆಗೆ ಮತ್ತು ಜನವರಿ 16 ರಿಂದ 18 ರವರೆಗೆ ಎರಡು ತೀವ್ರವಾದ ಶೀತಲ ಅಲೆಗಳು ದಾಖಲಾಗಿವೆ. ದೆಹಲಿಯು ಜನವರಿಯಲ್ಲಿ 50 ಗಂಟೆಗಳ ದಟ್ಟವಾದ ಮಂಜಿನಿಂದ ಕೂಡಿದೆ. ಇದು 2019 ರಿಂದ ಅತಿ ಹೆಚ್ಚು ದಾಖಲಾಗಿದೆ.

ಜನವರಿಯಲ್ಲಿನ ಮಳೆ
ಜನವರಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಇನ್ನೂ ಜನವರಿಯಲ್ಲಿ ಪಶ್ಚಿಮ ಕರಾವಳಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದು IMD ಮುಖ್ಯಸ್ಥರು ತಿಳಿಸಿದ್ದಾರೆ.
"ವಾಯುವ್ಯ ಭಾರತ ಮತ್ತು ಪಕ್ಕದ ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನವು ಅನುಭವವಾಗಿದೆ. ಉತ್ತರ ಮತ್ತು ಪರ್ಯಾಯದ್ವೀಪದ ಭಾರತದಲ್ಲಿ ಸಾಮಾನ್ಯ ಗರಿಷ್ಠ ತಾಪಮಾನದ ಸಂಭವನೀಯತೆಯನ್ನು ಗಮನಿಸಲಾಗಿದೆ" ಎಂದು ಮೊಹಾಪಾತ್ರ ಹೇಳಿದರು.

ಐಎಂಡಿ ಸೂಚನೆ
"ಜನವರಿಯಲ್ಲಿ ಪಶ್ಚಿಮ-ಮಧ್ಯ ಮತ್ತು ಆಂತರಿಕ ಪರ್ಯಾಯ ದ್ವೀಪದ ಹಲವು ಪ್ರದೇಶಗಳಲ್ಲಿ ಮತ್ತು ಈಶಾನ್ಯ ಭಾರತದ ಒಂದು ಪ್ರದೇಶದಲ್ಲಿ ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನವನ್ನು ಅನುಭವಿಸಲಾಗಿದೆ" ಎಂದು IMD ಮುಖ್ಯಸ್ಥರು ಸೇರಿಸಿದ್ದಾರೆ.












Click it and Unblock the Notifications