ತಮಿಳುನಾಡಿನ ರಾಜ್ಯಪಾಲರಿಗೆ ಜೀವ ಬೆದರಿಕೆ, ನಿಂದನೆ: ಪೊಲೀಸರಿಂದ ಯಾವುದೇ ಕ್ರಮ ಇಲ್ಲ
ಚೆನ್ನೈ, ಅಕ್ಟೋಬರ್ 26: ತಮಿಳುನಾಡಿನ ರಾಜ್ಯಪಾಲರಿಗೆ ಜೀವ ಬೆದರಿಕೆ ಇದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ರಾಜಭವನ ಆರೋಪಿಸಿದೆ.
ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರಿಗೆ ಸಾರ್ವಜನಿಕವಾಗಿ ಬೆದರಿಕೆಯೊಡ್ಡಿದ ಘಟನೆಗಳು ನಡೆದಿವೆ. ಆದರೆ, ಈ ವಿಷಯದ ಬಗ್ಗೆ ರಾಜ್ಯ ಪೊಲೀಸರು ಉದಾಸೀನತೆ ತೋರುತ್ತಿದ್ದಾರೆ. ಇದರಿಂದ ಅವರ ಭದ್ರತೆಗೆ ಧಕ್ಕೆಯಾಗಿದೆ ಎಂದು ರಾಜಭವನ ತಿಳಿಸಿದೆ.
ಅಕ್ಟೋಬರ್ 25 ರಂದು ರಾಜಭವನದ ಮೇಲೆ ಬಾಂಬ್ ದಾಳಿ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬ ಮೊಲೊಟೊವ್ ಕಾಕ್ಟೈಲ್ ಅನ್ನು ಎಸೆದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸ್ ಕಮಿಷನರ್‌ಗೆ ರಾಜ್ಯಪಾಲರ ಕಚೇರಿಯು ದೂರಿ ನೀಡಿದೆ. ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ರವಿ ಅವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದನಾತ್ಮಕ ದಾಳಿ ಮಾಡುತ್ತಿದ್ದಾರೆ ಎಂದು ರಾಜಭವನ ತಿಳಿಸಿದೆ. ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
'ಈ ಬೆದರಿಕೆಗಳು ರಾಜ್ಯಪಾಲರಿಗೆ ತೊಂದರೆ ಉಂಟುಮಾಡುತ್ತಿವೆ. ಅವರ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯೊಡ್ಡಿವೆ. ಅವರನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿವೆ. ಆದರೂ, ಪೋಲಿಸರು ನಿಷ್ಕ್ರಿಯತೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ' ಎಂದು ರಾಜಭವನ ತಿಳಿಸಿದೆ.
ಈ ಹಿಂದೆ ಮೈಲಾಡುತುರೈ ಜಿಲ್ಲೆಯ ಧರ್ಮಪುರಂ ಅಧೀನಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರವಿ ಅವರ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ದೈಹಿಕ ಹಲ್ಲೆ ನಡೆಸಲಾಗಿತ್ತು ಎಂದು ರಾಜಭವನ ಆರೋಪಿಸಿದೆ.

ದೂರು ದಾಖಲಾಗಿದ್ದರೂ ಎಫ್‌ಐಆರ್ ದಾಖಲಾಗಿಲ್ಲ. ಇದೇ ರೀತಿಯ ಇತರ ಕೆಲವು ಘಟನೆಗಳು ಸಂಭವಿಸಿವೆ ಎಂದು ಅದು ರಾಜಭವನ ಹೇಳಿಕೊಂಡಿದೆ.
ಇಂತಹ ಗಂಭೀರ ಘಟನೆಗಳನ್ನು ಸಣ್ಣ ಅಪರಾಧಗಳನ್ನಾಗಿ ಪೋಲೀಸರು ಪರಿವರ್ತನೆ ಮಾಡಿದರು. ಯಾವುದೇ ಉಪಯುಕ್ತವಾದ ಕ್ರಮಗಳನ್ನು ಪೊಲೀಸರು ಕೈಗೊಂಡಿಲ್ಲವೆಂದು ಆರೋಪಿಸಲಾಗಿದೆ.
'ರಾಜ್ಯಪಾಲರಿಗೆ ಗಂಭೀರ ಬೆದರಿಕೆಗಳು ಬಂದಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಪೊಲೀಸರು ಈ ವಿಚಾರದಲ್ಲಿ ಉದಾಸೀನತೆ ತೋರಿಸಿದ್ದಾರೆ. ಇದು ರಾಜಭವನದ ಭದ್ರತೆಯನ್ನು ಹಾಳುಮಾಡಿದೆ. ರಾಜಭವನದ ಮೇಲೆ ಇಂದು ನಡೆದ ಭೀಕರ ಬಾಂಬ್ ದಾಳಿಯು ಅದರ ಪರಿಣಾಮವಾಗಿದೆ' ಎಂದು ಹೇಳಿದೆ.
ರಾಜ್ಯಪಾಲರು ನಿರಂತರ ಬೆದರಿಕೆಗಳ ನೆರಳಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ರಾಜ್ಯಪಾಲರ ಉಪ ಕಾರ್ಯದರ್ಶಿ ಡಾ.ಟಿ.ಸೆಂಗೊಟ್ಟಯ್ಯನ್ ಅವರು ದೂರಿನ ಪ್ರತಿಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ರವಾನಿಸಿದ್ದಾರೆ.












Click it and Unblock the Notifications