ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷಗಳ ನಕಲಿ ಸಮೀಕ್ಷೆ, ಭರವಸೆಗಳು ನೆಲಕಚ್ಚಿವೆ: ಅಣ್ಣಮಲೈ

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 8: ಕಳೆದ 27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮುಂದೆ ಪ್ರತಿಪಕ್ಷಗಳ ನಕಲಿ ಚುನಾವಣಾ ಸಮೀಕ್ಷೆಗಳು ಮತ್ತು ನಕಲಿ ಭರವಸೆಗಳು ನೆಲಕಚ್ಚಿವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಮಲೈ ಅವರು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷ ಜಯಶೀಲವಾಗಿದ್ದು ಅದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ಈ ಗೆಲುವು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಜರಾತ್‌ನ ಜನರು ನೀಡಿದ ಬಹುಮಾನವಾಗಿದೆ. ಇದು ಅವರ ಅಭಿವೃದ್ಧಿ ಮಾದರಿಯಾಗಿದೆ.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಗುಜರಾತ್‌ ಬಿಜೆಪಿಗೆ ಅಭಿನಂದನೆಗಳು. ಈ ಬಹುಮುಖ್ಯ ಗೆಲುವಿಗಾಗಿ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರಿಗೆ ಅವರ ಹಿಂದಿನ ದಾಖಲೆಯನ್ನು ಮುರಿದು ಘಟ್ಲೋಡಿಯಾ ಕ್ಷೇತ್ರದಲ್ಲಿ 1.92 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. 2012ರಲ್ಲಿ 47.9% ಮತದಾನವಾಗಿದ್ದು, 2017ರಲ್ಲಿ 50%ಗೆ, ಈಗ ಮತದಾನ 52.6% ಕ್ಕೆ ಏರಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Tamil Nadu BJP President K Annamalai reaction to BJP Victory in Gujarat Election

ಗುಜರಾತ್‌ನಲ್ಲಿ ಸಾಕಷ್ಟು ತಮಿಳು ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರವಾದ ಮಣಿ ನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ 75% ಮತದಾರರು ಮತ ಹಾಕಿದ್ದಾರೆ. ಇದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಚಲವಾದ ಪ್ರೀತಿಯನ್ನು ಸಾಬೀತುಪಡಿಸುತ್ತದೆ. ಗುಜರಾತ್‌ನಲ್ಲಿ ಅಲ್ಪಸಂಖ್ಯಾತ ಜನಸಂಖ್ಯೆಯಿರುವ 14 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ಗೆದ್ದಿದೆ. ಗುಜರಾತ್‌ನ 40 ಮೀಸಲು ಕ್ಷೇತ್ರಗಳಲ್ಲಿ 37 ಅನ್ನು ಗೆಲ್ಲುವ ಹಾದಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

Tamil Nadu BJP President K Annamalai reaction to BJP Victory in Gujarat Election

ಬಿಜೆಪಿ ಅಭ್ಯರ್ಥಿಗಳು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ 45 ಸ್ಥಾನಗಳನ್ನು ಗೆದ್ದು ತಮ್ಮ ಹಿಂದಿನ ದಾಖಲೆಯನ್ನು ದ್ವಿಗುಣಗೊಳಿಸಿದ್ದಾರೆ. ಗುಜರಾತ್‌ನ ಗೆಲುವು 2024ರಲ್ಲಿ ನಿಸ್ಸಂದೇಹವಾಗಿ ಪ್ರತಿಧ್ವನಿಸಲಿದೆ. ಕಮ್ಯುನಿಸ್ಟ್ ಪಕ್ಷಗಳು 0.06% ರಷ್ಟು ಮತಗಳನ್ನು ಗಳಿಸಿವೆ. ಕೆಳಗಿನ ಸಮೀಕ್ಷೆಯು ಹೇಗೆ ತಪ್ಪಾಗಿದೆ ಎಂದು ಎಎಪಿ ಚಿಂತಿಸುತ್ತಿದೆ ಮತ್ತು ರಾಹುಲ್ ಗಾಂಧಿ ಯಾವ ಸನ್‌ಸ್ಕ್ರೀನ್ ಅನ್ನು ಬಳಸಬೇಕೆಂದು ಯೋಚಿಸುವುದರಲ್ಲಿ ನಿರತವಾಗಿದ್ದಾರೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

English summary
Tamil Nadu BJP President K. Annamalai said that The fake election polls and fake promises of the opposition have fallen in front of the BJP government that has been in power for the past 27 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X