ನಾನು ಹೆಡ್ ಮಾಸ್ಟರ್, ಪ್ರತ್ಯೇಕತಾವಾದಿಗಳ ಜೊತೆ ಮಾತನಾಡಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಕಾಶ್ಮೀರ, ಆಗಸ್ಟ್ 29: ಆರ್ಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ್ ಹಾಗೂ ಮುಜಾಫರ್ ವನಿ (ಎನ್ ಕೌಂಟರ್ ನಲ್ಲಿ ಮೃತಪಟ್ಟ್ ಭಯೋತ್ಪಾದಕ ಬುಹ್ರಾನ್ ವನಿ ತಂದೆ) ಮಧ್ಯದ ಭೇಟಿ ಹಲವರ ಹುಬ್ಬೇರುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಜಾರಿಯಲ್ಲಿದ್ದು, ಇನ್ನೊಂದು ದಾರಿಯ ಮೂಲಕ ಸರ್ಕಾರವೇ ನಡೆಸುತ್ತಿರುವ ಶಾಂತಿ ಪ್ರಕ್ರಿಯೆಯೇ ಇದು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಹುರಿಯತ್ ಕಾನ್ಫರೆನ್ಸ್ ಹೇಳಬೇಕು ಎಂದಿರುವ ಅಂಶಗಳನ್ನು ಮುಜಾಫರ್ ವನಿ ಮೂಲಕ ತಿಳಿಸಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ನಮಗೆ ಈ ಭೇಟಿ ವಿಚಾರದಲ್ಲಿ ಹೇಳುವುದಕ್ಕೆ ಏನೂ ಇಲ್ಲ. ನಮಗೆ ತಿಳಿದು ಬಂದ ಮಾಹಿತಿ ಪ್ರಕಾರ ಮುಜಾಫರ್ ವನಿ ಚಿಕಿತ್ಸೆಗಾಗಿ ಆರ್ಟ್ ಆಫ್ ಲಿವಿಂಗ್ ಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಬುಲೆಟ್ ಪ್ರೂಫ್ ವಾಹನ ಶಾಪಿಂಗ್ ಮಾಡಿದ ದಾವೂದ್ ಇಬ್ರಾಹಿಂ!]

ಜಮ್ಮು-ಕಾಶ್ಮೀರದ ತ್ರಾಲ್ ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮುಜಾಫರ್ ವನಿ, 'ಶ್ರೀಶ್ರೀ ಕಾಶ್ಮೀರಕ್ಕೆ ಬರ್ತಾರೆ. ಇಲ್ಲಿನ ಪರಿಸ್ಥಿತಿಯ ಬಗ್ಗೆ ಅವರೇ ಪರಿಶೀಲಿಸುತ್ತಾರೆ. ನಮ್ಮ ಭೇಟಿ ಸಂದರ್ಭದಲ್ಲಿ ಸಿರಿಯಾದ ಯುದ್ಧದ ವಿಡಿಯೋಗಳನ್ನು ಅವರು ತೋರಿಸಿದರು. ಕಾಶ್ಮೀರದ ಪರಿಸ್ಥಿತಿ ಅಷ್ಟು ಕೆಟ್ಟದಾಗಿಲ್ಲ ಅಂತ ನನ್ನ ಮೊಬೈಲ್ ಫೋನ್ ನಲ್ಲಿದ್ದ ವಿಡಿಯೋಗಳನ್ನು ಅವರಿಗೆ ತೋರಿಸಿದೆ' ಎಂದು ಹೇಳಿದರು.

SriSri

ನನ್ನ ಮಗನ ಸಾವಿನ ನಂತರ ಶ್ರೀಶ್ರೀ ಕರೆ ಮಾಡಿ, ಸಂತಾಪ ಸೂಚಿಸಿದರು. ಅವರು ನನ್ನ ಭೇಟಿ ಮಾಡಬೇಕು ಅಂತಲೂ ಹೇಳಿದರು. ಅದಕ್ಕೆ, ನಾನೇ ಚಿಕಿತ್ಸೆಗಾಗಿ ಆಶ್ರಮಕ್ಕೆ ಬರಬೇಕು ಅಂತ ಹೇಳಿದೆ. ಎರಡು ದಿನ ಅಲ್ಲಿದ್ದೆ. ಆ ವೇಳೆ ಕಾಶ್ಮೀರದ ಸಮಸ್ಯೆಗಳ ಬಗ್ಗೆ ವಿವರಿಸಿದೆ ಎಂದರು.[ಕಾಶ್ಮೀರ ಹಿಂಸಾಚಾರಕ್ಕೆ ತುಪ್ಪ ಸುರಿಯುತ್ತಿದೆ ಪಾಕ್: ಮುಫ್ತಿ ಕಿಡಿಕಿಡಿ]

ಕಾಶ್ಮೀರ ಸಮಸ್ಯೆ ಬಗೆಹರಿಯುವುದಕ್ಕೆ ಭಾರತ ಯಾರ ಜತೆಗೆ ಮಾತುಕತೆ ನಡೆಸಬೇಕು ಅಂತ ಅವರು ಕೇಳಿದರು. ಭಾರತ ಯಾವುದೇ ಷರತ್ತುಗಳನ್ನು ಇಡದೆ ಕಾಶ್ಮೀರದ ಪ್ರತಿನಿಧಿಗಳ ಜತೆ ಮಾತನಾಡಬೇಕು. ಗಿಲಾನಿ, ಯಾಸಿನ್ ಮಲಿಕ್, ಶಬೀರ್ ಶಾ, ಮಿರ್ವೈಜ್ ಉಮರ್ ಫಾರೂಕ್ ಜತೆ ಮಾತುಕತೆ ನಡೆಸಬೇಕು ಅಂತ ಹೇಳಿದ್ದೇನೆ ಎಂದು ಮುಜಾಫರ್ ವನಿ ಹೇಳಿದರು.[6 ಸಾವಿರ ಸಂಬಳ, ಬ್ಯಾಂಕ್ ಖಾತೆಯಲ್ಲಿ 18 ಲಕ್ಷ!]

ಶ್ರೀಶ್ರೀ ರವಿಶಂಕರ್ ಸಕಾರಾತ್ಮಕ ಆಲೋಚನೆ ಇರುವ ವ್ಯಕ್ತಿ. ಸರ್ಕಾರದಲ್ಲಿರುವ ಸಚಿವರ ಆಲೋಚನೆಯೂ ಹಾಗೇ ಇರುತ್ತದೆ ಅಂತ ನಾನಂದುಕೊಳ್ತೀನಿ ಎಂದು ಪತ್ರಕರ್ತರಿಗೆ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The meeting between Sri Sri Ravi Shankar and Muzzafar Wani, Burhan Wani's father has created quite a furore on the social media with many questioning whether it was part of the Track II initiative by the government.
Please Wait while comments are loading...