ಗೋ ಸಂರಕ್ಷರ ಹಿಂಸಾಚಾರಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಿ ಸುಪ್ರೀಂ ತಾಕೀತು
ಗೋ ಸಂರಕ್ಷಕರ ಹಿಂಸಾಚಾರ ತಡೆಗೆ ಸುಪ್ರೀಂ ಕೋರ್ಟ್ ತಾಕೀತು. ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದ ಕೋರ್ಟ್.
ನವದೆಹಲಿ, ಸೆಪ್ಟೆಂಬರ್ 6: ಗೋ ಸಂರಕ್ಷಣೆ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಹಿಂಸಾಚಾರಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಗೋ ಸಂರಕ್ಷರ ಹೆಸರಿನಲ್ಲಿ ನಡೆದಿರುವ ದಾಂಧಲೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಳಿಂದ ಪರಿಣಾಮಕಾರಿಯಾದಂಥ ಕ್ರಮಗಳು ಜಾರಿಯಾಗಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಈ ಹಿನ್ನೆಲೆಯಲ್ಲಿ, ತಾನೇ ಕೆಲವಾರು ನಿರ್ದೇಶನಗಳನ್ನು ನೀಡಿತು.

ಅದರಂತೆ, ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಜಿಲ್ಲೆಗೂ ಒಬ್ಬೊಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿ, ಅವರ ಮೂಲಕ ಗೋ ಸಂರಕ್ಷರ ದಾಂಧಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ.
ಏತನ್ಮಧ್ಯೆ, ಗೋ ಸಂರಕ್ಷರ ದಾಂಧಲೆಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ವ್ಯಕ್ತಿಗಳನ್ನೂ ಕೊಂಚ ಝಾಡಿಸಿರುವ ಸುಪ್ರೀಂ ಕೋರ್ಟ್, ಗೋ ಸಂರಕ್ಷರ ವಿರುದ್ಧ ನ್ಯಾಯಾಲಯಕ್ಕೆ ಬರುವವರು ಈ ವಿಚಾರವನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.
ಗೋ ರಕ್ಷಕರು ಮಾಡುವ ಹಿಂಸಾಚಾರವನ್ನು ಪ್ರಶ್ನಿಸುವ ನೀವು ಈದ್ ವೇಳೆ ಅತಿ ಹೆಚ್ಚು ಪ್ರಮಾಣದಲ್ಲಿ ಆಗುವ ಪ್ರಾಣಿಗಳ ಮಾರಣಹೋಮವನ್ನೂ ಪ್ರಶ್ನಿಸಬೇಕು ಎಂದು ತಾಕೀತು ಮಾಡಿದೆ.












Click it and Unblock the Notifications