T20 World Cup: ಭಾರತದ ಜತೆಗಿನ ವಿಶ್ವಕಪ್ ಪಂದ್ಯಾವಳಿ ಬಹಿಷ್ಕರಿಸಿದ ಪಾಕಿಸ್ತಾನ, ಐಸಿಸಿ ದಂಡ ಹೇರಿಕೆ ಸಾಧ್ಯತೆ

ನವದೆಹಲಿ: ಟಿ-20 ವಿಶ್ವಕಪ್ ನಿಂದ ಬಾಂಗ್ಲಾದೇಶವನ್ನು ಹೊರ ಹಾಕಿದ ಬೆನ್ನಲ್ಲೆ ಆ ದೇಶದ ಮೇಲೆ ಪ್ರೀತಿ ಹೆಚ್ಚಾಗಿರುವ ಪಾಕಿಸ್ತಾನವು ಭದ್ರತೆ ಹಾಗೂ ಕೆಲವು ಕಾರಣ ನೀಡಿ ಭಾರತದ ವಿರುದ್ಧದ ಟಿ-20 ವಿಶ್ವಕಪ್ ಆಡದಿರಲು ನಿರ್ಧರಿಸಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನ ಮೇಲೆ ದಂಡ ವಿಧಿಸುವ ಬಗ್ಗೆ ಗಂಭೀರ ಚಿಂತನೆ ಮಾಡಿದೆ.

ಫೆಬ್ರವರಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡವು ಆಡಬೇಕಿತ್ತು. ಇಂಡೋ ಪಾಕ್ ಟಿ 20 ವಿಶ್ವಕಪ್ ಪಂದ್ಯಾವಳಿಯು ಶ್ರೀಲಂಕಾದಲ್ಲಿ ನಡೆಯಲಿದೆ. ಅಲ್ಲಿಗೆ ತಂಡ ಕಳುಹಿಸಲು ಅನುಮತಿ ನೀಡಿದರೂ ಸಹಿತ ಭಾರತದ ವಿರುದ್ಧ ಆಡದಿರಲು ಅಧಿಕೃತವಾಗಿ ಭಾನುವಾರ ಬಹಿಷ್ಕಾರ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಸೂಕ್ತ ಕಾರಣವನ್ನು ಸರ್ಕಾರ ನೀಡಿಲ್ಲ. ಹೀಗೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದಕ್ಕೆ ಗರಂ ಆಗಿರುವ ಐಸಿಸಿಯು ಪಾಕಿಸ್ತಾನ ಮೇಲೆ ದಂಡ ವಿಧಿಸುವ ಚಿಂತನೆ ಮಾಡಿದೆ. ತನ್ನ ನಿರ್ಧಾರದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರಿ ಬೆಲೆ ತೆರಬೇಕಾಗಬಹುದು.

T20 World Cup 2026

ಮೊದಲಿನಿಂದ ಬಾಂಗ್ಲಾದೇಶದೊಂದಿಗೆ ಉತ್ತಮವಾಗಿರುವ ಪಾಕಿಸ್ತಾನವು ಭಾರತ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿತ್ತು. ಭಾರತವು ಸದರಿ ಟೂರ್ನಿಯಲ್ಲಿ ಸುರಕ್ಷತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶವನ್ನು ಹೊರಗಿಟ್ಟಿತ್ತು. ಅದಾದ ಬಳಿ ಪಾಕಿಸ್ತಾನವು ಬಾಂಗ್ಲಾ ಪರವಾಗಿ ತಟಸ್ಥ ಸ್ಥಳದಲ್ಲಿ ಪಂದ್ಯ ಆಡುವಂತೆ ಪರವಾಗಿ ಮಾತನಾಡಿತ್ತು. ಇದೀಗ ಭಾರತ ಟಿ-20 ಬಹಿಷ್ಕರಿಸಿದೆ. ಈ ಬಗ್ಗೆ ಘೋಷಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಿಮ ನಿರ್ಧಾರವನ್ನು ಸರ್ಕಾರವೇ ತಿಳಿಸುತ್ತದೆ ಎಂದಿದೆ.

ಇದೇ ಫೆಬ್ರವರಿ 07ರಂದು ಟೂರ್ನಿ ಶುರುವಾಗಲಿದೆ. ಭಾರತ ಪಾಕ್ ತಂಡಗಳು ಟೂರ್ನಿಯಲ್ಲಿ ಮುಖಾ ಮುಖಿ ಆಗಬೇಕಿತ್ತು. ಟೂರ್ನಿಯಿಂದ ಹೊರ ಹಾಕಿಸಿಕೊಂಡ ಬಾಂಗ್ಲಾ ಪರವಾಗಿ ಭಾರತದ ವಿರುದ್ಧ ಪಾಕಿಸ್ತಾನ ಪ್ರತಿಭಟಿಸಿತ್ತು. ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತ-ಪಾಕಿಸ್ತಾನ ಮಧ್ಯ ಟಿ20 ವಿಶ್ವಕಪ್ ಪಂದ್ಯ ಆಯೋಜನೆಗೊಂಡಿದೆ. ಆದರೆ ಕೊಲಂಬೊದಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯದಂತೆ ಪಿಸಿಬಿ ಸೂಚನೆ ನೀಡಿದೆ. ಪಾಕ್‌ನ ಈ ನಿರ್ಧಾರದಿಂದ ಭಾರತಕ್ಕೆ ಪೂರ್ಣ ಅಂಕಗಳು ದೊರೆಯಲಿವೆ.

ಇನ್ನು ಪಾಕಿಸ್ತಾನ ಫೆಬ್ರವರಿ 7ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್, 10 ರಂದು ಅಮೆರಿಕಾ ಹಾಗೂ 18ರಂದು ನಮೀಬಿಯಾ ವಿರುದ್ಧ ಆಡಲಿದೆ. ಪ್ರತಿ ಬಾರಿ ವಿಶ್ವಕಪ್ ಪಂದ್ಯಾವಳಿ ವೇಳೆ ಭಾರತ-ಪಾಕಿಸ್ತಾನ ಮದ್ಯದ ಪಂದ್ಯ ರೋಚಕವಾಗಿರುತ್ತದೆ. ಈ ಬಾರಿ ಆ ರೋಚಕ ಕ್ಷಣಗಳು ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮರೀಚಿಕೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+