Jammu And Kashmir Elections: ಬಿಜೆಪಿ ಅಭ್ಯರ್ಥಿ ಸೈಯದ್ ಮುಷ್ತಾಕ್ ನಿಧನ

ಶ್ರೀನಗರ, ಅಕ್ಟೋಬರ್‌ 02: ಜಮ್ಮು ಮತ್ತು ಕಾಶ್ಮೀರದ ಪೀರ್ ಪಂಜಲ್ ಪ್ರಾಂತ್ಯದ ಸುರಾನ್ ಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಮುಸ್ತಾಕ್ ಬುಖಾರಿ(75) ಇಂದು ನಿಧನರಾಗಿದ್ದಾರೆ.

ಸೈಯದ್ ಮುಸ್ತಾಕ್ ಬುಖಾರಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಬಿಜೆಪಿಗೆ ಮುನ್ನ ಮುಷ್ತಾಕ್ ಬುಖಾರಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರಾಗಿದ್ದರು, ಚುನಾವಣೆಗೂ ಮುನ್ನ ಸೈಯದ್ ಮುಸ್ತಾಕ್ ಬುಖಾರಿ ಬಿಜೆಪಿ ಸೇರಿದ್ದರು. ಮೆಂಧಾರ್‌ನ ಪಕ್ಷದ ಅಭ್ಯರ್ಥಿ ನದೀಮ್ ರಫೀಕ್ ಹುಸೇನ್ ಸೇರಿದಂತೆ ಹಲವು ಮುಖಂಡರು ಬುಖಾರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Syed Mushtaq Bukhari Death- BJP Candidate Dies in J amp amp K

ನ್ಯಾಷನಲ್ ಕಾನ್ಸರೆನ್ಸ್ ನ ಹಿರಿಯ ನಾಯಕ ಹಾಗೂ ಎರಡು ಬಾರಿಯ ಶಾಸಕರಾಗಿದ್ದ ಸೈಯದ್ ಮುಸ್ತಾಕ್ ಬುಖಾರಿ, ಪಹರಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಕುರಿತು ನ್ಯಾಷನಲ್ ಕಾನ್ಸರೆನ್ಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾರೊಂದಿಗಿನ ಭಿನ್ನಾಭಿಪ್ರಾಯದಿಂದ ನಾಲ್ಕು ದಶಕಗಳ ತಮ್ಮ ನ್ಯಾಷನಲ್ ಕಾನ್ಸರೆನ್ಸ್ ಒಡನಾಟವನ್ನು ಕಡಿದುಕೊಂಡಿದ್ದರು. ನಂತರ, ಕೇಂದ್ರ ಸರಕಾರವು ಪಹರಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಮಂಜೂರು ಮಾಡಿದ ನಂತರ ಫೆಬ್ರವರಿ ತಿಂಗಳಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಬಿಜೆಪಿ ಅಭ್ಯರ್ಥಿ ಸೈಯದ್ ಮುಷ್ತಾಕ್ ಬುಖಾರಿ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಖ್ತಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸೈಯದ್ ಮುಷ್ತಾಕ್ ಬುಖಾರಿ ಸಾಹಬ್ ಅವರ ನಿಧನದ ವಿಷಯ ತಿಳಿದು ದುಃಖವಾಯಿತು ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಅಲ್ಲಾಹನು ಅವರಿಗೆ ಸ್ವರ್ಗವನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ರಾಜ್ಯದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಕೂಡ Instagram ನಲ್ಲಿ ಪೋಸ್ಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಬಿಜೆಪಿಯ ಹಿರಿಯ ನಾಯಕ ಮುಷ್ತಾಕ್ ಬುಖಾರಿ ಅವರ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಅವರ ನಿಧನವು ಅವರ ಪಕ್ಷಕ್ಕೆ ಮತ್ತು ಅವರ ಹಿತಾಸಕ್ತಿಗಳನ್ನು ಪ್ರತಿಪಾದಿಸಿದ ಗುಡ್ಡಗಾಡು ಜನರಿಗೆ ನಷ್ಟವಾಗಿದೆ. ಅಲ್ಲಾ ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ-ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ. ಸೈಯದ್ ಮುಸ್ತಾಕ್ ಬುಖಾರಿ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್‌ ರೈನಾ ಸಂತಾಪ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+