Swiggy Delivery: ಸ್ವಿಗ್ಗಿ ಡೆಲಿವರಿ ಮೂಲಕ 53 ಲಕ್ಷ ರೂ. ಆದಾಯ ಗಳಿಸಿದ ಯುವಕ, ಸ್ಫೂರ್ತಿದಾಯಕ ಪಯಣದ ಸ್ಟೋರಿ ಇಲ್ಲಿದೆ!

Swiggy Delivery: ಸ್ವಿಗ್ಗಿ ಸೇರಿದಂತೆ ವಿವಿಧ ಫುಡ್ ಡೆಲಿವರಿ ಮಾಡುವ ಮೂಲಕ ಯುವಕರು, ಡೆಲಿವರಿ ಮಾಡುವುದರಿಂದಲೇ ಹೊಸ ಬದುಕು ಕಟ್ಟುಕೊಂಡಿದ್ದಾರೆ. ಹಲವರಿಗೆ ಇದು ಹೆಚ್ಚುವರಿ ಆದಾಯ ಹಾಗೂ ಕಾಲೇಜು ಶುಲ್ಕ ಸೇರಿದಂತೆ ಜೀವನ ಕಟ್ಟಿಕೊಳ್ಳುವುದಕ್ಕೆ ಲಕ್ಷಾಂತರ ಜನ ಡೆಲಿವರಿ ಬಾಯ್‌ಗಳು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಡೆಲಿವರಿ ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು ಎಂದು ಚೆನ್ನೈನ ಡೆಲಿವರಿ ಬಾಯ್‌ವೊಬ್ಬರು ಸಾಬೀತು ಮಾಡಿದ್ದಾರೆ. ಈ ಸ್ಫೂರ್ತಿದಾಯಕ ಪಯಣವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಚೆನ್ನೈನ ಶಂಕರ್ ಅವರು ಪರಿಶ್ರಮ ಮತ್ತು ಸರಿಯಾದ ಯೋಜನೆಯಿಂದ ಯಾವುದೇ ಕ್ಷೇತ್ರ, ಸಣ್ಣ ಕೆಲಸವಾದರೂ ಸಾಧನೆ ಮಾಡಬಹುದು. ಹೆಚ್ಚು ದುಡ್ಡು ಮಾಡಬಹುದು ಎನ್ನುವುದನ್ನು ಸಾಬೀತುಪಡಿಸುತ್ತಿದ್ದಾರೆ. ಆಹಾರ ವಿತರಣಾ ವೇದಿಕೆ (Food Delivery Platform) ಸ್ವಿಗ್ಗಿಗೆ ವಿತರಣಾ ಪಾಲುದಾರರಾಗಿ ಕಳೆದ 8 ವರ್ಷಗಳಲ್ಲಿ ಬರೋಬ್ಬರಿ 53 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಸ್ವಿಗ್ಗಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಸ್ವಿಗ್ಗಿ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಶಂಕರ್ ಸ್ಫೂರ್ತಿದಾಯಕ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಗಿಗ್ ಆರ್ಥಿಕತೆ, ಸ್ಥಿರ ಆದಾಯ ಮತ್ತು ಯುವಕರಿಗೆ ಉದ್ಯೋಗಾವಕಾಶಗಳ ಕುರಿತು ಹೆಚ್ಚು ಚರ್ಚೆಗೆ ಕಾರಣವಾಗಿದೆ.

Swiggy Delivery Chennai Man s Inspiring Journey to Earning 53 Lakh 8 Years Inspiring story

Swiggy Delivery: ಸ್ವಿಗ್ಗಿ ಡೆಲಿವರಿ ಮೂಲಕ ಶಂಕರ್ ಭಾರೀ ಆದಾಯ ಗಳಿಸಿದ್ದು ಹೇಗೆ

ಸ್ವಿಗ್ಗಿ ಡೆಲಿವರಿ ಮೂಲಕ ಶಂಕರ್ ಅವರು ಕಳೆದ ಎಂಟು ವರ್ಷಗಳಲ್ಲಿ ಬರೋಬ್ಬರಿ 53 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಈ ಅಂಕಿ - ಅಂಶಗಳನ್ನು ವಿಶ್ಲೇಷಿಸಿದಾಗ, ಅವರ ಗಳಿಕೆ ಸ್ಥಿರವಾಗಿದೆ. ಶಂಕರ್ ವರ್ಷಕ್ಕೆ ಸರಾಸರಿ 6.62 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಅಂದರೆ ತಿಂಗಳಿಗೆ ಸುಮಾರು 55,208 ರೂ. ದಿನಕ್ಕೆ ಸುಮಾರು 1,815 ರೂ. ಗಳಿಸಿದ್ದಾರೆ. ಶಂಕರ್ ಅವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಲು ಸಾಧ್ಯವಾಯಿತು ಅಂತ ಶಂಕರ್ ಅವರು ಹೇಳಿಕೊಂಡಿದ್ದಾರೆ.

Swiggy Delivery: ಶಂಕರ್ ಸಕ್ಸಸ್ ಸ್ಟೋರಿ ಹಿಂದಿನ ಕಥೆ

ಸ್ವಿಗ್ಗಿಯಲ್ಲಿ ತಾಸುಗಟ್ಟಲೆ ಕೆಲಸ ಮಾಡುವ ಬದಲು ಶಂಕರ್ ಅವರು ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಅವರು ಪೀಕ್ ಅವರ್, ಮಧ್ಯಾಹ್ನ (ಬೆಳಿಗ್ಗೆ 11 ರಿಂದ ಮಧ್ಯಾಹ್ನ 3) ಮತ್ತು ರಾತ್ರಿಯ ಊಟದ ಸಮಯದಲ್ಲಿ (ಸಂಜೆ 6 ರಿಂದ ರಾತ್ರಿ 10) ಮಾತ್ರ ಲಾಗಿನ್ ಆಗುತ್ತಿದ್ದರು, ಈ ಸಮಯದಲ್ಲಿ ಆರ್ಡರ್‌ಗಳು ಹೆಚ್ಚಾಗಿತ್ತು. ಇದು ಅವರಿಗೆ ಹೆಚ್ಚಿನ ಆರ್ಡರ್‌ಗಳು, ಸರ್ಜ್ ಪ್ರೈಸಿಂಗ್ ಮತ್ತು ದೈನಂದಿನ ಪಾಯಿಂಟ್ಸ್‌ಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ತಮ್ಮದೇ ವೇಗದಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುವುದು ಕೆಲಸ ಮತ್ತು ಕುಟುಂಬ ಜೀವನವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವುದಕ್ಕೆ ಸಹಾಯವಾಯಿತು ಎಂದೂ ಅವರು ಹೇಳಿಕೊಂಡಿದ್ದಾರೆ.

Swiggy Delivery: ಶಂಕರ್ ಆದಾಯದ ಬಗ್ಗೆ ಆಸಕ್ತಿದಾಯಕ ಚರ್ಚೆ

ಅನೇಕ ನೆಟ್ಟಿಗರು ಶಂಕರ್ ಅವರು ಕೆಲಸದಲ್ಲಿ ಹಾಕಿದ ಶ್ರಮ ಹಾಗೂ ಆದಾಯ ಹೆಚ್ಚಿಸಿಕೊಳ್ಳಲು ಕಂಡುಕೊಂಡ ಮಾರ್ಗದ ಬಗ್ಗೆ ಮೆಚ್ಚಿಕೊಂಡಿದ್ದಾರೆ. ತಿಂಗಳಿಗೆ ಸುಮಾರು 55,000 ರೂ. ಒಟ್ಟು ಆದಾಯ ಬರುತ್ತದೆ. ಆದರೆ ಪೆಟ್ರೋಲ್ ವೆಚ್ಚ, ವಾಹನ ವಿಮೆ ಹಾಗೂ ಬೈಕ್ ನಿರ್ವಹಣೆ ವೆಚ್ಚ ಹೋದ ಬಳಿಕ ನಿವ್ವಳ ಆದಾಯ ಇನ್ನಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಗಿಗ್ ಕೆಲಸಗಾರರು ಕಾರ್ಪೊರೇಟ್ ಉದ್ಯೋಗಿಗಳಂತೆ ಭವಿಷ್ಯ ನಿಧಿ (ಪಿಎಫ್), ವಾರ್ಷಿಕ ವೇತನ ಏರಿಕೆ ಮತ್ತು ವೇತನ ರಜೆಯಂತಹ ಪ್ರಯೋಜನಗಳಿಗೆ ಅರ್ಹರಲ್ಲ, ಆದ್ದರಿಂದ ಅವರು ತಮ್ಮ ಗಳಿಕೆಯ ಒಂದು ಭಾಗವನ್ನು ಉಳಿತಾಯ ಮತ್ತು ತುರ್ತು ನಿಧಿಗಳಿಗಾಗಿ ಮೀಸಲಿಡುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+