ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಾಯಹಸ್ತ ಚಾಚುವಲ್ಲಿ ಸುಷ್ಮಾರನ್ನು ಮೀರಿಸುವವರೇ ಇಲ್ಲ!

ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರೂ, ಹೊರ ದೇಶದಲ್ಲಿರುವ ಭಾರತೀಯರಿಗೆ ಮತ್ತು ಇಲ್ಲಿಂದ ಬೇರೆ ದೇಶಕ್ಕೆ ಪ್ರಯಾಣಿಸುವ ಭಾರತೀಯರ ಹಲವು ವಿಧದ ಸಮಸ್ಯೆಗಳಿಗೆ ಸುಷ್ಮಾ ಸ್ವರಾಜ್ ಕೂತಲ್ಲೇ ಪರಿಹಾರ ನೀಡಿದ್ದಾರೆ.

|
Google Oneindia Kannada News

ಪಕ್ಷಾತೀತವಾಗಿ ದೇಶದ ಎಲ್ಲಾ ರಾಜಕೀಯ ಮುಖಂಡರು ಮೆಚ್ಚಿಕೊಳ್ಳುವ ಮತ್ತು ಒಪ್ಪಿಕೊಳ್ಳುವ ವ್ಯಕ್ತಿತ್ವ ಎಂದರೆ ಅದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರದ್ದು.

ನನ್ನ ದೇಶ ಮತ್ತು ನನ್ನ ದೇಶದ ಪ್ರಜೆಗಳು ನನಗೆ ಮೊದಲ ಆದ್ಯತೆ ಎನ್ನುವ ದೃಢ ನಿರ್ಧಾರದಿಂದ ಸುಷ್ಮಾ ಸ್ವಪಕ್ಷೀಯರನ್ನೇ ಕೆಲವೊಮ್ಮೆ ಎದುರು ಹಾಕಿಕೊಂಡಿದ್ದು ಉಂಟು. (ಸುಷ್ಮಾ ಸ್ವರಾಜ್ ಮತ್ತು ಮುಸ್ಲಿಂ ವೀಸಾ)

ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರೂ, ಹೊರ ದೇಶದಲ್ಲಿರುವ ಭಾರತೀಯರಿಗೆ ಮತ್ತು ಇಲ್ಲಿಂದ ಬೇರೆ ದೇಶಕ್ಕೆ ಪ್ರಯಾಣಿಸುವ ಭಾರತೀಯರ ಹಲವು ವಿಧದ ಸಮಸ್ಯೆಗಳಿಗೆ ಸುಷ್ಮಾ ಕೂತಲ್ಲೇ ಪರಿಹಾರ ನೀಡಿದ ಉದಾಹರಣೆಗಳು ಲೆಕ್ಕಕ್ಕಿಲ್ಲದಷ್ಟು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸುಷ್ಮಾ ಅವರನ್ನು ಟ್ಯಾಗ್ ಮಾಡಿ ಸಮಸ್ಯೆ ತೋಡಿಕೊಂಡರೆ ಪರಿಹಾರ ಸಿಕ್ಕಿರುವ ಉದಾಹರಣೆಗಳೇ ಹೆಚ್ಚು.

ಸುಷ್ಮಾ ಸ್ವರಾಜ್ ಅವರನ್ನು ಎನ್ಡಿಎ ಸರಕಾರದ ಹಿಲರಿ ಕ್ಲಿಂಟನ್ ಎಂದು ಹೊಗಳುತ್ತಿದ್ದದ್ದುಂಟು, ಜೊತೆಗೆ ಸಿವೋಟರ್ ನಡೆಸಿದ್ದ ಸಮೀಕ್ಷೆಯಲ್ಲಿ ಸುಷ್ಮಾ ಸ್ವರಾಜ್, ಮೋದಿ ಸರಕಾರದ ಬೆಸ್ಟ್ ಮಿನಿಸ್ಟರ್ ಎನ್ನುವ ಫಲಿತಾಂಶ ಹೊರಬಿದ್ದಿತ್ತು.

ಟ್ವಿಟ್ಟರ್ ಮೂಲಕ ಸುಷ್ಮಾ ಸ್ಪಂಧಿಸಿದ ಕೆಲವೊಂದು ಸ್ಯಾಂಪಲ್, ಮುಂದೆ ಓದಿ..

 ಸೌದಿ ಅರೆಬಿಯಾದಲ್ಲಿರುವ ವ್ಯಕ್ತಿಗೆ ಸುಷ್ಮಾ ಸ್ಪಂಧಿಸಿದ್ದು

ಸೌದಿ ಅರೆಬಿಯಾದಲ್ಲಿರುವ ವ್ಯಕ್ತಿಗೆ ಸುಷ್ಮಾ ಸ್ಪಂಧಿಸಿದ್ದು

ಸೌದಿ ಅರೆಬಿಯಾದ ನಜ್ರಾನ್ ಎನ್ನುವ ನಗರದಲ್ಲಿ ಕೆಲಸ ಮಾಡುತ್ತಿದ ಅತುಲ್ ಎನ್ನುವ ವ್ಯಕ್ತಿಗೆ ಮಾಲೀಕ ಪಾಸ್ಪೋರ್ಟ್ ಹಿಂದಿರುಗಿಸುತ್ತಿರಲಿಲ್ಲ. ಸುಷ್ಮಾ ಅವರ ಹ್ಯಾಂಡಲ್ ಹಾಕಿ ಅತುಲ್ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ, ಇದಕ್ಕೆ ಭಾರತದ ದೂತಾವಾಸ ಕಚೇರಿ ಸಂಪರ್ಕಿಸಿ ಎಂದು ಟ್ವೀಟಿಗೆ ಪ್ರತಿಕ್ರಿಯೆ ನೀಡಿ, ಸಮಸ್ಯೆಗೆ ಪರಿಹಾರ ನೀಡಿದ್ದರು.

 ಟರ್ಕಿಯಲ್ಲಿ ಸಮಸ್ಯೆಯಾದಾಗ

ಟರ್ಕಿಯಲ್ಲಿ ಸಮಸ್ಯೆಯಾದಾಗ

ನೇಹಾ ಅಗರವಾಲ್ ಪರೀಖ್ ಅವರ ಪೋಷಕರು ಟರ್ಕಿ ದೇಶದಿಂದ ಹೊರಬರಲಾರದೇ ಒದ್ದಾಡುತ್ತಿದ್ದರು. ಟರ್ಕಿಯ ಇಸ್ತಾಂಬುಲ್ ನಲ್ಲಿ ಪರೀಖ್ ತಾಯಿ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಸುಷ್ಮಾ ಕೂಡಲೇ ಸ್ಪಂದಿಸಿ ಸಮಸ್ಯೆ ಪರಿಹರಿಸಿದ್ದರು.

 ಗೃಹಬಂಧನದಲ್ಲಿದ್ದ ಮಹಿಳೆ

ಗೃಹಬಂಧನದಲ್ಲಿದ್ದ ಮಹಿಳೆ

ಭಾರತೀಯ ಮೂಲದ ಮಹಿಳೆಯೊಬ್ಬಳು ಗೃಹಬಂಧನಲ್ಲಿದ್ದಾರೆಂದು ಗೋಪಾಲ್ ಕೇಸ್ರಿ ಎನ್ನುವವರು ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದರು. ಕೂಡಲೇ ಸ್ಪಂಧಿಸಿದ್ದ ಸುಷ್ಮಾ, ಜೋಹಾನ್ಸ್ ಬರ್ಗನಲ್ಲಿರುವ ಭಾರತೀಯ ದೂತಾವಾಸ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ್ದರು.

 ಬಾಲಿಯಲ್ಲಿ ಭಾರತದ ವಿಮೆ ತಿರಸ್ಕಾರಗೊಂಡಾಗ

ಬಾಲಿಯಲ್ಲಿ ಭಾರತದ ವಿಮೆ ತಿರಸ್ಕಾರಗೊಂಡಾಗ

ಇಂಡೋನೇಷ್ಯಾದ ಬಾಲಿಯಲ್ಲಿ ಪ್ರವಾಸದಲ್ಲಿದ್ದ ಮಹಿಳೆಯೊಬ್ಬರು ಅಪಘಾತಕ್ಕೀಡಾಗಿದ್ದರು. ಆದರೆ ಅಲ್ಲಿನ ಆಸ್ಪತ್ರೆ ಭಾರತದ ಇನ್ಸೂರೆನ್ಸ್ ತೆಗೆದುಕೊಳ್ಳಲು ಒಪ್ಪಿರಲಿಲ್ಲ. ಆ ಸಮಯದಲ್ಲಿ ಮೀರಾ ಶರ್ಮಾ ಎನ್ನುವವರಿಗೂ ಸುಷ್ಮಾ ಸಹಾಯಹಸ್ತ ಚಾಚಿದ್ದರು.

 ಪಾಸ್ಪೋರ್ಟ್ ಮತ್ತು ಹಣ ಕಳೆದುಕೊಂಡ ಮಹಿಳೆ

ಪಾಸ್ಪೋರ್ಟ್ ಮತ್ತು ಹಣ ಕಳೆದುಕೊಂಡ ಮಹಿಳೆ

ಜರ್ಮನಿಯ ಬರ್ಲಿನ್ ನಲ್ಲಿ ಮಹಿಳೆಯೊಬ್ಬಳು ಪಾಸ್ಪೋರ್ಟ್ ಮತ್ತು ಹಣ ಕಳೆದುಕೊಂಡಿದ್ದಳು. ಆ ಸಮಯದಲ್ಲಿ ಸುಷ್ಮಾ ಆಕೆಗೆ ಸಹಾಯ ಮಾಡಿದ್ದರು.

English summary
The External Affairs Minister Sushma Swaraj has been winning hearts since the time she took over, by helping many Indians in times of trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X