• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

How is the Josh? ಹೈ ಸರ್! How is the Jaish? ಡೆಡ್ ಸರ್!

|

ನವದೆಹಲಿ, ಫೆಬ್ರವರಿ 26: ಪುಲ್ವಾಮಾ ದಾಳಿಗೆ ಪ್ರತೀಕಾರ ಎಂಬಂತೆ ಪಾಕಿಸ್ತಾನದ ಉಗ್ರನೆಲೆ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. ಪಾಕ್ ಗೆ ಭಾರತ ನೀಡಿದ ಪ್ರತ್ಯುತ್ತರವನ್ನು ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಇದು ಅರ್ಪಣೆ ಎನ್ನುತ್ತಿದ್ದಾರೆ.

ಈ ನಡುವೆ ಟ್ವಿಟ್ಟರ್ ನಲ್ಲಿ ಈಗಾಗಲೇ ಸರ್ಜಿಕಲ್ ಸ್ಟ್ರೈಕ್ 2 ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಈ ಘಟನೆಯ ಮೂಲಕ ಟ್ರೋಲ್ ಹೈಕ್ಳು ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ.

ಉಗ್ರರ ಮೂರು ನೆಲೆಗಳ ಮೇಲೆ ಕರಾರುವಾಕ್ ದಾಳಿ ನಡೆದಿದ್ದು ಹೇಗೆ?

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆದಿಲ್ ದಾರ್ ಎಂಬ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿ, ಭಾರತದ 44 ಯೋಧರ ಹತ್ಯೆಗೈದಿದ್ದ. ಅದಕ್ಕೆ ಪ್ರತೀಕಾರ ಎಂಬಂತೆ, ಆ ಘಟನೆ ನಡೆದ 12 ದಿನಗಳಲ್ಲಿ ಜೈಷ್ ಉಗ್ರನೆಲೆಯನ್ನೇ ಭಾರತ ಧ್ವಂಸಗೊಳಿಸಿದೆ.

ಸರ್ಜಿಕಲ್ ಸ್ಟ್ರೈಕ್ ಭಾಗ 2 ಎನ್ನಲಾಗುತ್ತಿರುವ ಈ ಘಟನೆಯ ಕುರಿತು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳು ಇಲ್ಲಿವೆ.

ಹೌ ಇಸ್ ದ ಜೈಷ್!

How's the Josh?

ಹೈ ಸರ್

How's the Jaish

ಡೆಡ್ ಸರ್

ಸಿಲೇಬಸ್ ನಲ್ಲಿ ಏರ್ ಸ್ಟ್ರೈಕ್!

ಪಾಕಿಸ್ತಾನ ಸಿದ್ಧತೆ ನಡೆಸಿದ್ದು, ಭೂ ದಾಳಿಗೆ. ಆದರೆ ಸಿಲೇಬಸ್ ನಲ್ಲಿದ್ದಿದ್ದು ಏರ್ ಸ್ಟ್ರೈಕ್!

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್

ಯಲಹಂಕದಿಂದ ಪಾಕಿಸ್ತಾನಕ್ಕೆ!

ಏರ್ ಶೋ ಬೆಂಗಳೂರಿನ ಯಲಹಂಕ ವಾಯನೆಲೆಯಿಂದ ಪಾಕಿಸ್ತಾನಕ್ಕೆಸ್ಥಳಾಂತರವಾಯ್ತಾ? ಹೌ ಇಸ್ ದ ಜೋಷ್ !

ಇಮ್ರಾನ್ ಖಾನ್ ಗೆ ಹೈ ಬಿಪಿ!

ಈ ನಡುವೆ ಪಾಕಿಸ್ತಾನದಲ್ಲಿ.... ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಕ್ತದೊತ್ತಡ ಪರೀಕ್ಷಿಕೊಳ್ಳುತ್ತಿರುವ ಚಿತ್ರವನ್ನು ಟ್ವೀಟ್ ಮಾಡಲಾಗಿದೆ!

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್

English summary
After surgical Strike like attack on Pakistan's terror camps, twitterians trolling terror organisation and Pakistan. How is the Jaish?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X