Breaking: ಆಗಸ್ಟ್ 25ರಂದು ಕಾರ್ತಿ ಚಿದಂಬರಂ ವಿರುದ್ಧದ ತೀರ್ಪು ಮರುಪರಿಶೀಲನೆ
ನವದೆಹಲಿ, ಆಗಸ್ಟ್ 24: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಿಎಂಎಲ್‌ಎ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಆಗಸ್ಟ್ 25ರಂದು ಮರುಪರಿಶೀಲನೆ ನಡೆಸಲಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಬ್ಯಾಚ್‌ನಲ್ಲಿ ಸುಪ್ರೀಂ ಕೋರ್ಟ್ ಜುಲೈ 27ರಂದು ತೀರ್ಪು ನೀಡಿತ್ತು. ಕಾರ್ತಿ ಚಿದಂಬರಂ ಅನ್ನು ಬಂಧಿಸಿ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡುವ ಬಗ್ಗೆ ಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಗುರುವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ತೀರ್ಪು ಗಂಭೀರ ದೋಷದ ಆಧಾರದ ಮೇಲೆ ಪರಿಶೀಲಿಸಲು ಅರ್ಹವಾಗಿದೆ. ಈ ಹಿಂದಿನ ತೀರ್ಪುಗಳು ಮತ್ತು ಸಂವಿಧಾನದ ನಿಬಂಧನೆಗಳಿಗೆ ವ್ಯತಿರಿಕ್ತವಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.

ಚಿದಂಬರಂ ವಾದವೇನು?
ಈ ಹಿಂದಿನ ಆದೇಶವು ಸಂವಿಧಾನದ ಅನುಚ್ಛೇದ 20 ಮತ್ತು 21ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಕ್ರಿಮಿನಲ್ ನ್ಯಾಯಶಾಸ್ತ್ರದ ತತ್ವಗಳನ್ನು ಇತ್ಯರ್ಥಗೊಳಿಸಿದೆ. ಹೀಗಾಗಿ ಅದು ನ್ಯಾಯಾಲಯದ ಮರುಪರಿಶೀಲನೆಗೆ ಅರ್ಹವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
ಪಿಎಂಎಲ್‌ಎಯ ಸೆಕ್ಷನ್ 45 ರ ಅಡಿಯಲ್ಲಿ ಅವಳಿ ಜಾಮೀನು ಷರತ್ತುಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರು ನ್ಯಾಯಾಲಯದ ತೀರ್ಮಾನವನ್ನು ಪ್ರಶ್ನಿಸಿದ್ದಾರೆ. "ಜಾಮೀನು ನಿಯಮವಾಗಿದ್ದು, ಜಾಮೀನು ನಿರಾಕರಣೆಯು ಅಪವಾದವಾಗಿದೆ," ಎಂಬ ಕಾನೂನಿನ ಸುಸಜ್ಜಿತ ತತ್ವವನ್ನು ಶ್ಲಾಘಿಸದೆ ತೀರ್ಪು ತಪ್ಪಾಗಿದೆ ಎಂದು ಹೇಳಿದರು.












Click it and Unblock the Notifications