
ಆರ್ಥಿಕವಾಗಿ ದುರ್ಬಲವಾಗಿ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕೇಳುವ ಹಕ್ಕು, ತೀರ್ಪು ಕಾಯ್ದಿರಿಸಿದ ಸುಪ್ರೀಂ
ಕೇಂದ್ರ ಸರ್ಕಾರವು 103ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ 2019ರಂದು ಜನವರಿಯಲ್ಲಿ ಇಡಬ್ಲ್ಯೂಎಸ್ (EWS ಆರ್ಥಿಕವಾಗಿ ದುರ್ಬಲ ವಿಭಾಗ) ಈ 10% ಮೀಸಲಾತಿಯ ಕೋಟಾ ಜಾರಿಗೆ ತರಲಾಗಿತ್ತು. ಇದೀಗ ಇದರ ಅಡಿಯಲ್ಲಿ ಸಾಮಾನ್ಯ ವರ್ಗವು ಉದ್ಯೋಗ ಮತ್ತು ಶಿಕ್ಷಣದಲ್ಲಿ 10%ರಷ್ಟು ಮೀಸಲಾತಿಯ ಲಾಭವನ್ನು ಪಡೆಯುತ್ತದೆ. ಈ ಕಾನೂನನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಸುಪ್ರೀಂನ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸುತ್ತಿದೆ.
ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿಯನ್ನು ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಕುರಿತ ವಿಚಾರಣೆಯನ್ನು ಸತತ 7ನೇ ದಿನವೂ ಸುಪ್ರೀಂಕೋರ್ಟ್ ಆಲಿಸಿತು. 103ನೇ ತಿದ್ದುಪಡಿ ಕಾಯಿದೆ, 2019ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್‌ನ್ನು ಆಲಿಸಿದ ನಂತರ, ನ್ಯಾಯಾಲಯವು ಈ ವಿಷಯದ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ರಾಜ್ಯದಲ್ಲಿ ಎಸ್‌ಸಿ,ಎಸ್ಟಿ, ಒಬಿಸಿ ಮೀಸಲು ಪರಿಶೀಲಿಸಲು ಹೈಕೋರ್ಟ್ ಆದೇಶ
ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್, ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪಂಚಸದಸ್ಯ ಪೀಠವು ವಿಚಾರಣೆ ನಡೆಸಿತು. ವಿಚಾರಣೆಯ ಕೊನೆಯ ದಿನವಾದ ಇಂದು ಅರ್ಜಿದಾರರ ಪರ ವಕೀಲರು ಕೇಂದ್ರ ಸರ್ಕಾರದ ಅಹವಾಲುಗಳಿಗೆ ಪ್ರತಿಕ್ರಿಯಿಸಿದರು.

ಏನಿದು 103ನೇ ಈ ತಿದ್ದುಪಡಿ?
ಸಂವಿಧಾನದಲ್ಲಿ ನೀಡಿರುವ ಯಾವುದೇ ಕಾನೂನಿನಲ್ಲಿ ಬದಲಾವಣೆಯಾದಾಗ, ಹೊಸ ವಿಷಯವನ್ನು ಸೇರಿಸಿದಾಗ ಅಥವಾ ಸಂಪೂರ್ಣ ಹೊಸ ಕರಡನ್ನು ಸಿದ್ಧಪಡಿಸಿ ಮತ್ತು ಕಾನೂನನ್ನು ರಚಿಸಿದಾಗ ಅದನ್ನು ಸಾಂವಿಧಾನಿಕ ತಿದ್ದುಪಡಿ ಎಂದು ಕರೆಯಲಾಗುತ್ತದೆ. ಸಂಸತ್ತು ಈ ಕೆಲಸವನ್ನು ಮಾಡುತ್ತದೆ. 103ನೇ ತಿದ್ದುಪಡಿಯೊಂದಿಗೆ, 15 (6) ಮತ್ತು 16 (6)ನೇ ವಿಧಿಗಳನ್ನು ಸಂವಿಧಾನದಲ್ಲಿ ಸೇರಿಸಲಾಯಿತು, ಇದರಿಂದಾಗಿ EWS ಅಂದರೆ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ 10 ಪ್ರತಿಶತ ಮೀಸಲಾತಿಯನ್ನು ಪಡೆಯಲಿದೆ.
ಕೇಂದ್ರ ಸರ್ಕಾರವು 103ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ ಜನವರಿ 2019ರಲ್ಲಿ EWS ಕೋಟಾವನ್ನು ಜಾರಿಗೆ ತಂದಿತು. ಇದರ ಅಡಿಯಲ್ಲಿ ಸಾಮಾನ್ಯ ವರ್ಗವು ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ 10 ಪ್ರತಿಶತದಷ್ಟು ಮೀಸಲಾತಿಯ ಲಾಭವನ್ನು ಪಡೆಯುತ್ತದೆ. ಈ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸುತ್ತಿದೆ.

ಒಂದೊಂದೇ ಪ್ರಶ್ನೆಗಳಿಗೆ ಬರುತ್ತಿದೆ
*103ನೇ ಸಾಂವಿಧಾನಿಕ ತಿದ್ದುಪಡಿಯಿಂದ ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯೇ?
*ಈ ಮೀಸಲಾತಿಯ ಆಧಾರವೂ ಸಾಮಾಜಿಕವೇ? ಆದರೆ, ಹಾಗಾಗಿ ಸಾಮಾಜಿಕವಾಗಿ ದಲಿತ-ಹಿಂದುಳಿದವರಿಗೆ ಮಾತ್ರ ಮೀಸಲಾತಿ ಸಿಗಬೇಕು ಎಂಬುದುವುದು ವಾದ.
*ಎರಡನೆಯ ಪ್ರಶ್ನೆಯೆಂದರೆ, ಮೀಸಲಾತಿಯ ಮೇಲಿನ ಮಿತಿಯು ಸುಪ್ರೀಂಕೋರ್ಟ್‌ನಿಂದ 50% ಆಗಿತ್ತು, ಈ ತಿದ್ದುಪಡಿಯ ನಂತರ ಇದೀಗ 60% ಆಗುತ್ತದೆ. ನ್ಯಾಯಾಲಯವು ಸಂವಿಧಾನದ ಮೂಲ ರಚನೆಯಲ್ಲಿ 50%ನ್ನು ಸೇರಿಸಿರುವುದರಿಂದ, ಮಿತಿಯನ್ನು 60%ಗೆ ಹೆಚ್ಚಿಸುವುದು ಈ ರಚನೆಯನ್ನು ಉಲ್ಲಂಘಿಸುತ್ತದೆ.
*103ನೇ ಸಾಂವಿಧಾನಿಕ ತಿದ್ದುಪಡಿಯಿಂದ ಖಾಸಗಿ ಶಾಲೆ/ಕಾಲೇಜುಗಳಲ್ಲಿನ ಮೀಸಲಾತಿಯು ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಿದೆಯೇ?
*ಈ ಬಗ್ಗೆ ಖಾಸಗಿ ಸಂಸ್ಥೆಯ ಮೇಲೆ ಸರ್ಕಾರ ತನ್ನ ಅವ್ಯವಹಾರ ಏಕೆ ಹೇರುತ್ತಿದೆ ಎಂಬ ಬಲವಾದ ವಾದವಿದೆ.
*ನ್ಯಾಯಾಲಯ ನಿಗದಿಪಡಿಸಿದ ಶೇ.50 ಮಿತಿಯನ್ನು ಹೆಚ್ಚಿಸಿರುವ ನೀವು ಯಾವ ವಾದದ ಅಡಿಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕೇಳುತ್ತಿರುವ ಜಾತಿಗಳನ್ನು ನಿರಾಕರಿಸುತ್ತೀರಿ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

50% ಮೀಸಲಾತಿ ಮಿತಿಯ ರಚನೆಯ ಉಲ್ಲಂಘನೆ?
ಅರ್ಜಿದಾರರು ಎಸಿ ಎಸ್ಟಿ ಮತ್ತು ಒಬಿಸಿಯಲ್ಲೂ ಬಡವರಿದ್ದಾರೆ, ಆದರೆ ಈ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದ ಜನರಿಗೆ ಮಾತ್ರ ಏಕೆ ಪ್ರಯೋಜನವನ್ನು ನೀಡಲಾಗುತ್ತದೆ ಎಂದು ವಾದಿಸುತ್ತಾರೆ. ಇದರೊಂದಿಗೆ ಈ ಮೀಸಲಾತಿಯು ಶೇ.50ರ ಮೀಸಲಾತಿ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ವಾದದಲ್ಲಿ ಹೇಳಲಾಗಿದೆ. ಈ ಪ್ರಕರಣದ ವಿಚಾರಣೆ ವೇಳೆ ಹಿರಿಯ ವಕೀಲ ಪ್ರೊಫೆಸರ್ ರವಿ ವರ್ಮ ಕುಮಾರ್ ವಾದ ಮಂಡಿಸಿ, 'ಮೀಸಲು ಮತ್ತು ಬಡತನದ' ನಡುವಿನ ಸಂಬಂಧವನ್ನು ಕೇಂದ್ರ ಸರ್ಕಾರ ಇನ್ನೂ ವಿವರಿಸಿಲ್ಲ ಅಥವಾ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಬದಲು ಇತರ ಸೌಲಭ್ಯಗಳನ್ನು ಏಕೆ ನೀಡುತ್ತಿಲ್ಲ. ಈ ವಿಚಾರವಾಗಿ ಹಿರಿಯ ವಕೀಲ ಗೋಪಾಲ್ ಶಂಕರ್ ನಾರಾಯಣ್ ಅವರು, ಇದು ಶೇ.50 ಮೀಸಲಾತಿಯ ಮಿತಿಯ ರಚನೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು ಜೊತೆಗೆ ಈ ಬಗ್ಗೆ ಅವರು ತಮ್ಮ ವರದಿಯನ್ನು ಸಹ ಸಲ್ಲಿಸಿದ್ದಾರೆ.

ಇಡಬ್ಲ್ಯೂಎಸ್ ಕೋಟಾದಲ್ಲಿ ಕೇಳುವ ಹಕ್ಕಿದೆ ಎಂದ ಕೇಂದ್ರ
ಈ ವಿಷಯದ ಬಗ್ಗೆ ಅರ್ಜಿದಾರರ ಪರವಾಗಿ ವಾದಗಳನ್ನು ಸಲ್ಲಿಸಲಾಯಿತು, ನಂತರ ಐವರು ನ್ಯಾಯಾಧೀಶರ ಪೀಠವು ವಕೀಲ ಶಾದನ್ ಫರಾಸತ್ ಮತ್ತು ವಕೀಲ ಕನು ಅಗರ್ವಾಲ್ ಅವರನ್ನು 2-3 ದಿನಗಳಲ್ಲಿ ಎಲ್ಲಾ ವಾದ ಮತ್ತು ವರದಿಗಳೊಂದಿಗೆ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಕೋರಿತು. ಎಸ್‌ಸಿ/ಎಸ್‌ಟಿಯ ಜನರು ಈಗಾಗಲೇ ಮೀಸಲಾತಿಯ ಅನೇಕ ಪ್ರಯೋಜನಗಳನ್ನು ಪಡೆಯುತ್ತಿರುವ ಕಾರಣ ಸಾಮಾನ್ಯ ವರ್ಗದವರಿಗೆ ಇಡಬ್ಲ್ಯೂಎಸ್ ಕೋಟಾದಲ್ಲಿ ಕೇಳುವುದು ಹಕ್ಕಿದೆ ಎಂದು ಕಳೆದ ವಿಚಾರಣೆಯ ಸಮಯದಲ್ಲಿ ಕೇಂದ್ರ ಸರ್ಕಾರವು ನ್ಯಾಯಾಲಯದಲ್ಲಿ ವಾದಿಸಿದೆ.
ಜನವರಿ 2019ರಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 103ನೇ ಸಾಂವಿಧಾನಿಕ ತಿದ್ದುಪಡಿ ನಿರ್ಣಯವನ್ನು ಅಂಗೀಕರಿಸಿತು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ 10 ಪ್ರತಿಶತ ಮೀಸಲಾತಿಯನ್ನು ಘೋಷಿಸಿತು. ಇದಾದ ನಂತರ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗಸ್ಟ್ 5, 2019ರಂದು ಸಾಮಾನ್ಯ ವರ್ಗದ ಬಡವರಿಗೆ 10 ಪ್ರತಿಶತ ಮೀಸಲಾತಿ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಸಂವಿಧಾನ ಪೀಠಕ್ಕೆ ಹಸ್ತಾಂತರಿಸಿತ್ತು.