₹2000 ನೋಟ್: ಸುಪ್ರೀಂಕೋರ್ಟ್ ಮಹತ್ವದ ಆದೇಶ!
ನವದೆಹಲಿ: ₹2000 ಮುಖಬೆಲೆ ನೋಟ್‌ಗಳ ವಿನಿಮಯ ವಿಚಾರ ದಿನಕ್ಕೊಂದು ತಿರುವನ್ನ ಪಡೆಯುತ್ತಿದೆ. ₹2000 ನೋಟ್ ವಾಪಸ್ ಪಡೆಯುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಆರ್‌ಬಿಐ. ಹೀಗೆ RBI ಆದೇಶ ನೀಡಿದ ದಿನದಿಂದಲೂ ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಸುಪ್ರೀಂ ಮೆಟ್ಟಿಲು ಏರಿದೆ ₹2000 ನೋಟ್ ವಾಪಸ್ ವಿಚಾರ.
ಅಂದಹಾಗೆ ಯಾವುದೇ ಅರ್ಜಿ ಅಥವಾ ಗುರುತಿನ ಚೀಟಿ ಇಲ್ಲದೆ ₹2000 ಮುಖಬೆಲೆ ನೋಟನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಕಾರಣಕ್ಕೆ ಅರ್ಜಿ ಸಲ್ಲಿಸಿ, ಕೋರ್ಟ್ ಮೆಟ್ಟಿಲು ಏರಿದ್ದಾರೆ ಕೆಲವರು. ಹೀಗೆ ಆರ್‌ಬಿಐ ನಿರ್ಧಾರವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿತ್ತು. ಯಾವುದೇ ಅರ್ಜಿ ಅಥವಾ ಗುರುತಿನ ಚೀಟಿ ಇಲ್ಲದೆ ₹2000 ಮುಖಬೆಲೆ ನೋಟನ್ನು ವಿನಿಮಯ ಮಾಡಿಕೊಳ್ಳುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಕೋರಲಾಗಿತ್ತು. ಆದರೆ ಈ ಮನವಿಗೆ ಸುಪ್ರೀಂ ಒಪ್ಪಿಲ್ಲ.

ಸುಪ್ರೀಂಕೋರ್ಟ್ ಹೇಳಿದ್ದು ಏನು?
ಅಷ್ಟಕ್ಕೂ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ರಾಜೇಶ್ ಬಿಂದಲ್ ಅವರಿದ್ದ ನ್ಯಾಯಪೀಠ ಮಹತ್ವದ ಆದೇಶ ನೀಡಿದೆ. ಬೇಸಿಗೆ ರಜೆ ಮುಗಿದ ನಂತರ, ಈ ವಿಷಯವನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಲ್ಲಿ ಮಂಡಿಸುವಂತೆ ಸೂಚನೆ ನೀಡಿದೆ. ಈ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ನಂತರ ಸುಪ್ರೀಂಕೋರ್ಟ್ ಈ ವಿಚಾರವನ್ನ ಸ್ಪಷ್ಟಪಡಿಸಿದೆ. ಇನ್ನು ಅರ್ಜಿ ತುರ್ತು ವಿಚಾರಣೆ ನಡೆಸುವಂತೆ ಅರ್ಜಿದಾರರೂ ಆದ ವಕೀಲ ಅಶ್ವಿನಿ ಉಪಾಧ್ಯಾಯ ಮನವಿಯನ್ನ ಸಲ್ಲಿಸಿದ್ದರು.
ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ವಜಾ
ಇನ್ನು ₹2,000 ನೋಟು ಬದಲಾವಣೆಗೆ ಅನುಸರಿಸುತ್ತಿರುವ ನಿಯಮದ ವಿರುದ್ಧವಾಗಿ ದೆಹಲಿ ಹೈಕೋರ್ಟ್‌ನಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸುಪ್ರೀಂ ತುರ್ತು ವಿಚಾರಣೆ ನಿರಾಕರಿಸಿದೆ. ಈ ಮೂಲಕ ₹2000 ನೋಟು ವಿನಿಮಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಈಗ ಮಹತ್ವದ ಆದೇಶ ನೀಡಿದಂತಾಗಿದೆ. ಹಾಗಾದರೆ ₹2000 ನೋಟು ವಿನಿಮಯಕ್ಕೆ ಇನ್ನೂ ಎಷ್ಟು ದಿನ ಕಾಲಾವಕಾಶ ಇದೆ? ಆ ಬಗ್ಗೆ ಮಾಹಿತಿ ಇಲ್ಲಿದೆ.
4 ತಿಂಗಳು ಅವಕಾಶ ನೀಡಿದ RBI!
2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್‌ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ 2000 ನೋಟ್‌ಗಳ ಚಲಾವಣೆ ಸಂಪೂರ್ಣ ಬ್ಯಾನ್ ಮಾಡಲಾಗುತ್ತೆ ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಟೆನ್ಷನ್ ಮಾಡಿಕೊಳ್ಳದೆ ನಿಮ್ಮ ಹತ್ತಿರ ಇರುವ ಬ್ಯಾಂಕ್‌ಗಳಲ್ಲಿ 2000 ರೂ. ಮುಖಬೆಲೆ ನೋಟ್‌ಗಳನ್ನ ಎಕ್ಸ್‌ಚೇಂಜ್ ಮಾಡಿಕೊಳ್ಳಿ.
ಒಟ್ನಲ್ಲಿ 2016ರಲ್ಲಿ 500, 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ಮುಖಬೆಲೆಯ ನೋಟ್ ಚಲಾವಣೆಗೆ ಬಂತು. ಆದ್ರೆ ಈಗ ಆರ್‌ಬಿಐ ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟ್ ಚಲಾವಣೆ ಸ್ಥಗಿತಗೊಳಿಸಿದೆ (2000 Note). ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಈ ಪ್ರಕ್ರಿಯೆ ಮುಗಿಸೋದಕ್ಕೆ ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ಮತ್ತೊಂದ್ಕಡೆ ಪದೇ ಪದೆ ಇದೇ ವಿಚಾರವಾಗಿ ಭಾರಿ ಚರ್ಚೆ ಕೂಡ ನಡೆಯುತ್ತಿರುವುದು ವಿಶೇಷ. ಪ್ರಮುಖವಾಗಿ ಈಗ ಸುಪ್ರೀಂಕೋರ್ಟ್ ತುರ್ತು ಅರ್ಜಿ ವಿಚಾರಣೆ ನಿರಾಕರಿಸಿ ಮಹತ್ವದ ಆದೇಶ ನೀಡಿದೆ.












Click it and Unblock the Notifications