• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯ ಚುನಾವಣಾ ಆಯುಕ್ತರ ಕಡಿಮೆ ಅಧಿಕಾರವಧಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

|
Google Oneindia Kannada News

ದೆಹಲಿ, ನವೆಂಬರ್ 23: ಮುಖ್ಯ ಚುನಾವಣಾ ಆಯುಕ್ತರ ಕಡಿಮೆ ಅಧಿಕಾರವಧಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಚುನಾವಣಾ ಆಯುಕ್ತರ ಸ್ವಾತಂತ್ರ್ಯಕ್ಕೆ ಸರ್ಕಾರ ಅಡ್ಡಿಯನ್ನುಂಟು ಮಾಡಿದೆ, ಜೊತೆಗೆ ಅವರ ಅಧಿಕಾರವಧಿ ಪೂರ್ಣಗೊಳಿಸುವ ಮುನ್ನವೇ ವರ್ಗಾವಣೆ ಮಾಡುವುದು ಹಾಗೂ ಬೇಕಾದವರನ್ನು ನೇಮಿಸಿಕೊಳ್ಳುವುದು ನಡೆದಿದೆ ಎಂದು ಸುಪ್ರೀಂ ಕೋರ್ಟ್ ದೂರಿದೆ.

2004ರಿಂದ ಮುಖ್ಯ ಚುನಾವಣಾ ಆಯುಕ್ತರುಗಳನ್ನು ಬದಲಾಯಿಸಲಾಗಿರುವುದನ್ನು ಕೋರ್ಟ್ ಗಮನಿಸಿದೆ. ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡುವುದು ಅಥವಾ ಬೇರೆಯವರನ್ನು ನೇಮಿಸಿಕೊಳ್ಳುವುದು ಹಾಗೂ 65 ವರ್ಷ ಪೂರ್ಣಗೊಳ್ಳಲು ಕೆಲ ವರ್ಷ ಬಾಕಿ ಇರುವಾಗ ಬೇರೆಯವರನ್ನು ನೇಮಿಸಿಕೊಳ್ಳಲಾದ ಹೆಚ್ಚು ಘಟನೆಗಳು ನಡೆದಿವೆ ಎಂದು ಕೋರ್ಟ್ ಆರೋಪಿಸಿದೆ. ಕಳೆದ ಎಂಟು ವರ್ಷಗಳಿಂದ ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಅಧಿಕಾರಾವಧಿ ಪೂರ್ಣಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

Breaking; ಬೆಂಗಳೂರಿಗೆ ಕೇಂದ್ರ ಚುನಾವಣಾ ಆಯೋಗ ತಂಡ ಆಗಮನ Breaking; ಬೆಂಗಳೂರಿಗೆ ಕೇಂದ್ರ ಚುನಾವಣಾ ಆಯೋಗ ತಂಡ ಆಗಮನ

ಹಿಂದಿನ ಯುಪಿಎ ಸರ್ಕಾರ ಕೇವಲ ಎಂಟು ವರ್ಷಗಳಲ್ಲಿ ಆರು ಸಿಇಸಿಗಳನ್ನು ಹೊಂದಿತ್ತು ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ. "ಈಗಿನ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ, 2015 ರಿಂದ 2022 ರವರೆಗೆ, ಏಳು ವರ್ಷಗಳ ಅವಧಿಯಲ್ಲಿ ಎಂಟು ಸಿಇಸಿಗಳನ್ನು ಹೊಂದಿದ್ದೇವೆ' ಎಂದು ತಿಳಿಸಿದ್ದಾರೆ.

ಐವರು ನ್ಯಾಯಾಧೀಶರ ಪೀಠದ ನೇತೃತ್ವ ವಹಿಸಿಕೊಂಡಿರುವ ನ್ಯಾಯಮೂರ್ತಿ ಜೋಸೆಫ್ ಅವರು, ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ವಿಶೇಷವಾಗಿ 2004 ರ ನಂತರ, ಚುನಾವಣಾ ಆಯೋಗದ (ಚುನಾವಣಾ ಆಯುಕ್ತರ ಸೇವೆಯ ನಿಯಮಗಳು ಮತ್ತು ವ್ಯವಹಾರದ ವಹಿವಾಟು) ಕಾಯಿದೆಯಡಿಯಲ್ಲಿ ಸೂಚಿಸಲಾದ ಆರು ವರ್ಷಗಳ ಪೂರ್ಣ ಅವಧಿಯನ್ನು ಯಾವುದೇ ಮುಖ್ಯ ಚುನಾವಣಾ ಆಯುಕ್ತರು ಪೂರೈಸಿಲ್ಲ ಎಂದು ಜಸ್ಟಿಸ್ ಜೋಸೆಫ್ ತಿಳಿಸಿದ್ದಾರೆ.

1991 ಕಾಯಿದೆಯ ಸೆಕ್ಷನ್ 4ರಡಿ ಸಿಇಸಿ ಮತ್ತು ಚುನಾವಣಾ ಆಯುಕ್ತರ ಅವಧಿಯು ಆರು ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಈ ಅವಧಿಯನ್ನು ಪೂರ್ಣಗೊಳಿಸಲು ಬಿಟ್ಟಿಲ್ಲ. ಇದರಿಂದ ಚುನಾವಣಾಧಿಕಾರಿಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ನೀವು ಅವಧಿಯನ್ನು ಹೊಂದಿದ್ದು ಕೇವಲ 188 ದಿನಗಳು ಅಥವಾ 160 ದಿನಗಳ ಅವಧಿಯನ್ನು ಮಾತ್ರ ಪೂರ್ಣಗೊಳಿಸುವುದಾದರೆ ಪ್ರಯೋಜನವೇನು? ಸಂವಿಧಾನದ ಅಡಿಯಲ್ಲಿ ಮಾತ್ರ ಸಿಇಸಿಗಳು ಪೂರ್ಣಾವಧಿಯನ್ನು ಹೊಂದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದು ಪೂರ್ಣಗೊಂಡಲ್ಲಿ ಮಾತ್ರ ಎಲ್ಲಾ ರಕ್ಷಣೆಗಳನ್ನು ನೀವು ಪಡೆದುಕೊಳ್ಳಬಹುದು ಎಂದು ನ್ಯಾಯಮೂರ್ತಿ ಜೋಸಫ್ ದೂರಿದರು.

Supreme Court hits out at Center over short tenure of Chief Election Commissioner

ಎಂಟು ವರ್ಷ ಮತ್ತು 273 ದಿನಗಳು ಸೇವೆ ಸಲ್ಲಿಸಿದ ಮೊದಲ ಸಿಇಸಿ ಸುಕುಮಾರ್ ಸೇನ್ ರಿಂದ 24 ನೇ ಸಿಇಸಿ ಸುಶೀಲ್ ಚಂದ್ರ ಅವರ ಅಧಿಕಾರಾವಧಿಯು ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಅವಧಿಯವರೆಗೆ ಎಲ್ಲಾ ಸಿಇಸಿಗಳ ಅಧಿಕಾರಾವಧಿಯನ್ನು ವೈಯಕ್ತಿಕವಾಗಿ ಸಂಶೋಧಿಸಿದ್ದೇನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನ್ಯಾಯಮೂರ್ತಿ ಜೋಸೆಫ್ ಅವರು ತಮ್ಮ ಸಂಶೋಧನೆಗಳನ್ನು ಪೀಠದ ಇತರ ನ್ಯಾಯಾಧೀಶರಾದ ಶ್ರೀ ವೆಂಕಟರಮಣಿ ಮತ್ತು ಅರ್ಜಿದಾರರ ವಕೀಲರು, ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರಿಗೆ ರವಾನಿಸಿದರು.

ಈ ವಿಚಾರದಲ್ಲಿ ಸರ್ಕಾರ ಪ್ರತಿಕ್ರಿಯಿಸಬೇಕಾಗಿದೆ ಎಂದು ನ್ಯಾಯಾಧೀಶರು ಹೇಳಿದರು. "ನಾವು ಇತರ ದೇಶಗಳಿಗಿಂತ ಹಿಂದೆ ಉಳಿಯಬೇಕೆಂದು ನೀವು ಬಯಸುತ್ತೀರಾ? ಎಂದು ನ್ಯಾಯಮೂರ್ತಿ ಜೋಸೆಫ್ ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿದರು. ಸಂವಿಧಾನ ಪೀಠ ಚುನಾವಣಾ ಆಯುಕ್ತರಿಗೆ ಕ್ರಿಯಾತ್ಮಕ ಸ್ವಾತಂತ್ರ್ಯವನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ಸರಣಿಯನ್ನು ವಿಚಾರಣೆ ನಡೆಸುತ್ತಿದೆ. "ನಾವು ಅದರ ಬಗ್ಗೆ ಜಾಗೃತರಾಗಿರಬೇಕು" ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.

English summary
Supreme Court has taken issue with the short tenure of the Chief Election Commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X