ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯವಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ದೇಶದ ಸರ್ವೋಚ್ಚ ನ್ಯಾಯಾಲಯ ಎಂದು ಕರೆಯುವ ಸುಪ್ರೀಂ ಕೋರ್ಟ್‌ ಮೀಸಲಾತಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ತೀರ್ಪನ್ನ ಪ್ರಕಟಿಸಿದೆ. ಹಿಂದೂ ಧರ್ಮದ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯೊಬ್ಬರು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ, ತಮ್ಮ ಹಿಂದಿನ ಜಾತಿಯ ಆಧಾರದ ಮೇಲೆ ಯಾವುದೇ ಮತಾಂತರಿಗಳಿಗೆ ಮೀಸಲಾತಿ ಸೌಲಭ್ಯಗಳನ್ನ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಮದ್ರಾಸ್ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನೇ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದ್ದು, ಈ ವಿಚಾರವಾಗಿ ಇದ್ದ ಹಲವು ಗೊಂದಲಗಳಿಗೆ ತೆರೆ ಎಳೆದಿದೆ.

Supreme Court Historic Verdict No Backward Class Reservation for Converts to Islam Read Article Here

ಈ ಹಿಂದೆ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರು ಇಸ್ಲಾಂಗೆ ಮತಾಂತರವಾದ ನಂತರ ಮೀಸಲಾತಿ ಸೌಲಭ್ಯ ಪಡೆಯುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನ ಪ್ರಶ್ನಿಸಿ ತಮಿಳುನಾಡು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನ ಒಳಗೊಂಡ ದ್ವಿಸದಸ್ಯ ಪೀಠವು, ತಮಿಳುನಾಡು ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.

ಅಲ್ಲದೆ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನ ಹೊರತುಪಡಿಸಿ, ಅನ್ಯ ಧರ್ಮವನ್ನ ಪಾಲಿಸುವ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಯ ಸದಸ್ಯರೆಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪುನರುಚ್ಚರಿಸಿದೆ.

ಸಂವಿಧಾನದ 16(4)ನೇ ವಿಧಿಯ ನಿಯಮಗಳೇನು?

ಸಂವಿಧಾನದ 16(4)ನೇ ವಿಧಿಯನ್ನ ಉಲ್ಲೇಖಿಸಿರುವ ನ್ಯಾಯಪೀಠ, ಮತಾಂತರದ ನಂತರ ಸಾಮಾಜಿಕ ಸ್ಥಾನಮಾನದ ಬದಲಾವಣೆಯ ಬಗ್ಗೆ ವಿವರಿಸಿದೆ. ಬೇರೆ ಧರ್ಮಕ್ಕೆ ಮತಾಂತರಗೊಂಡಾಗ, ಆ ವ್ಯಕ್ತಿಯು ತನ್ನ ಮೂಲ ಜಾತಿಯೊಂದಿಗೆ ಹೊಂದಿದ್ದ ಪರಿಶಿಷ್ಟ ಜಾತಿ ಸ್ಥಾನಮಾನವನ್ನ ಕಳೆದುಕೊಳ್ಳುತ್ತಾನೆ.

ಸಂವಿಧಾನದ 16(4)ನೇ ವಿಧಿಯಡಿ ನೀಡಲಾಗುವ ವಿಶೇಷ ಸೌಲಭ್ಯಗಳು, ವ್ಯಕ್ತಿಯು ಪರಿಶಿಷ್ಟ ಜಾತಿಗೆ ಸೇರಿರುವುದರ ಮೇಲೆ ಆಧಾರಿತವಾಗಿರುತ್ತವೆ. ಹೀಗಾಗಿ, ಕೇವಲ ಮತಾಂತರಗೊಂಡ ಕಾರಣಕ್ಕೆ, ಆತನ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆಯನ್ನ ಹೊಸ ಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಅನ್ವಯಿಸಲು ಬರುವುದಿಲ್ಲ.

ಆತನ ಮೂಲ ಜಾತಿಯ ಸ್ಥಾನಮಾನವನ್ನ ಮುಸ್ಲಿಂ ಹಿಂದುಳಿದ ವರ್ಗಗಳ ಪಟ್ಟಿಗೆ ಸ್ವಯಂಚಾಲಿತವಾಗಿ ವರ್ಗಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.

ಘರ್ ವಾಪಸಿ ಬಗ್ಗೆ ಕೋರ್ಟ್ ಸ್ಪಷ್ಟನೆ

ಇದೇ ವೇಳೆಯಲ್ಲಿ, ಮತಾಂತರಗೊಂಡ ವ್ಯಕ್ತಿಯೊಬ್ಬರು ಮರಳಿ ಹಿಂದೂ ಧರ್ಮಕ್ಕೆ (ಘರ್ ವಾಪಸಿ) ಮರಳಿದರೆ ಅವರ ಮೀಸಲಾತಿ ಹಕ್ಕುಗಳೇನು ಎಂಬ ಬಗ್ಗೆಯೂ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.

ಹಿಂದೂಯೇತರ ಸಾಮಾಜಿಕ ವ್ಯವಸ್ಥೆಯಿಂದ ಮರಳಿ ಹಿಂದೂ ಧರ್ಮಕ್ಕೆ ಮರಳಿದ ತಕ್ಷಣ, ಸಂವಿಧಾನದ 16(4)ನೇ ವಿಧಿಯಡಿ ಹಳೆಯ ಮೀಸಲಾತಿ ಹಕ್ಕುಗಳು ತಾನಾಗಿಯೇ ಮರುಸ್ಥಾಪನೆಯಾಗುವುದಿಲ್ಲ. ಅಂತಹ ವ್ಯಕ್ತಿಯು ತನ್ನ ಮೂಲ ಜಾತಿಯನ್ನ ಮತ್ತೆ ಒಪ್ಪಿಕೊಂಡಿದ್ದಾನೆಯೇ ಮತ್ತು ಆ ಸಮುದಾಯವು ಆತನನ್ನ ಮರಳಿ ಸ್ವೀಕರಿಸಿದೆಯೇ ಎಂಬುದರ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

ಕೇವಲ ಹಿಂದಿನ ಸ್ಥಿತಿಯನ್ನ ಆಧರಿಸಿ ಮೀಸಲಾತಿ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ರಾಜಕೀಯ ಪ್ರತಿಕ್ರಿಯೆ: ಕೋರ್ಟ್‌ನ ಈ ನಿರ್ಧಾರವನ್ನಾ ಸ್ವಾಗತಿಸಿದ ಬಿಜೆಪಿ

ಸುಪ್ರೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪನ್ನ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಕ್ತಕಂಠದಿಂದ ಹೊಗಳಿದೆ. ಇದೊಂದು ಐತಿಹಾಸಿಕ ತೀರ್ಪು ಎಂದು ಹೇಳಿರುವ ಬಿಜೆಪಿ ನಾಯಕರು, "ಈ ತೀರ್ಪು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ದಶಕಗಳಿಂದ ಅನುಸರಿಸುತ್ತಿರುವ ತುಷ್ಟೀಕರಣ ರಾಜಕಾರಣಕ್ಕೆ ಬಿದ್ದಿರುವ ಬಹುದೊಡ್ಡ ಹೊಡೆತವಾಗಿದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+