ಎಲ್ಲೇ ಇರಿ, ಚಂದ್ರ ಗ್ರಹಣವನ್ನು ನಾಸಾ ಲೈವ್ ನಲ್ಲಿ ಕಣ್ತುಂಬಿಕೊಳ್ಳಿ
ವಾಷಿಂಗ್ಟನ್, ಜನವರಿ 31: ಇಂದು ವಿಶ್ವದಾದ್ಯಂತ ಚಂದ್ರ ತನ್ನ ವಿಶಿಷ್ಟ ದರ್ಶನವನ್ನು ನೀಡಲಿದ್ದಾನೆ. ಸಂಪೂರ್ಣ ಚಂದ್ರ ಗ್ರಹಣದ ಖಗೋಳ ಕೌತುಕ 'ಸೂಪರ್ ಬ್ಲ್ಯೂ ಬ್ಲಡ್ ಮೂನ್' ನೋಡಲು ವಿಶ್ವದಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ.
ಅಂತರಾಷ್ಟ್ರೀಯ ಸ್ಟಾಂಡರ್ಡ್ ಸಮಯದ ಪ್ರಕಾರ ಮುಂಜಾನೆ 5.30ಕ್ಕೆ ಭೂಮಿಯ ನೆರಳು ಚಂದ್ರನನ್ನು ಆವರಿಸಿಕೊಳ್ಳಲಿದೆ. ಪೂರ್ಣ ಚಂದ್ರ ಗ್ರಹಣ ಅಮೆರಿಕಾ, ಅಲಾಸ್ಕ, ಹವಾಯಿ ದ್ವೀಪದ ಜನರಿಗೆ ಕಾಣಸಿಗಲಿದೆ. ಉಳಿದವರು ಅರ್ಧ ಚಂದ್ರ ಗ್ರಹಣವನ್ನು ವೀಕ್ಷಿಸಬಹುದು.
ಹೀಗಾಗಿ ಪೂರ್ಣ ಚಂದ್ರ ಗ್ರಹಣವನ್ನು ಮಿಸ್ ಮಾಡಿಕೊಳ್ಳುವವರಿಗಾಗಿ ನಾಸಾ ನೇರ ಪ್ರಸಾರದ ವ್ಯವಸ್ಥೆ ಮಾಡಿದೆ. ನಾಸಾ ಟಿವಿ NASA.gov/live ನಲ್ಲಿ ಚಂದ್ರ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು.

ಬೇರೆ ಬೇರೆ ದೂರದರ್ಶಕಗಳ ಮೂಲಕ ಕಲೆ ಹಾಕುವ ದೃಶ್ಯಗಳನ್ನು ನಾಸಾ ಜನರಿಗೆ ನೀಡಲಿದೆ. ಹೀಗಾಗಿ ಬೇರೆ ಬೇರೆ ಕೋನಗಳಲ್ಲಿ ಜನರಿಗೆ ಚಂದ್ರ ಗ್ರಹಣದ ದರ್ಶನ ಸಿಗಲಿದೆ.











Click it and Unblock the Notifications