ಸುಖ್ ಧೂಲ್ ಸಿಂಗ್ ಹತ್ಯೆ ಮಾಡಿದ್ದು ನಾವೇ- ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಮತ್ತು ವಾಂಟೆಡ್ ಗ್ಯಾಂಗ್‌ಸ್ಟಾರ್ ಸುಖ್ ಧೂಲ್ ಸಿಂಗ್ ಅಲಿಯಾನ್ ಸುಖಾ ದುನೆಕೆ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ವಹಿಸಿಕೊಂಡಿದೆ. ಇಂದು ಮುಂಜಾನೆ ಸುಖಾ ದುನೆಕೆ ಅವರ ಹತ್ಯೆಯಾಗಿದ್ದು ಸುಮಾರು ಒಂದು ಗಂಟೆಯ ನಂತರ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಹೊತ್ತುಕೊಂಡಿದೆ.
ಆರು ವರ್ಷಗಳ ಹಿಂದೆ ಪಂಜಾಬ್‌ನ ಮೋಗಾ ಜಿಲ್ಲೆಯಿಂದ ಕೆನಡಾಕ್ಕೆ ಪರಾರಿಯಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಮತ್ತು ವಾಂಟೆಡ್ ಗ್ಯಾಂಗ್‌ಸ್ಟರ್ ಸುಖ್ ಧೂಲ್ ಸಿಂಗ್ ಅಲಿಯಾಸ್ ಸುಖಾ ದುನೆಕೆ ಇಂದು ಮುಂಜಾನೆ ಶೂಟೌಟ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಅವರ ವಿರುದ್ಧ ಕನಿಷ್ಠ 15-16 ಪ್ರಕರಣಗಳು ದಾಖಲಾಗಿವೆ. ಈತ ದೆಹಲಿಯಿಂದ 11,000 ಕಿಮೀ ದೂರದಲ್ಲಿರುವ ಪ್ರದೇಶವನ್ನು ತಲುಪಲು ಆತ ನಕಲಿ ದಾಖಲೆಗಳನ್ನು ತಯಾರಿಸಿದ್ದ ಎಂದು ವರದಿಗಳು ಹೇಳಿವೆ.

ಪೋಸ್ಟ್ ವಾಂಟೆಂಡ್ ಭಯೋತ್ಪಾದಕನಾಗಿದ್ದ ಸುಖ್ದೂಲ್ ಸಿಂಗ್ ಹತ್ಯೆಯಾಗಿದ್ದಾನೆ. ಈತನ ಸಾವಿನ ಬಗ್ಗೆ ಅವರ ಚಿಕ್ಕಪ್ಪ ಮತ್ತು ಅವರ ಮಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಎಂದು ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ಎಸ್‌ಎಸ್‌ಪಿ ಮೊಗಾ ಜೆ ಎಲಾಂಚೆಜಿಯನ್ ಹೇಳಿದ್ದಾರೆ.
BIG ⚡️Lawrence Bishnoi gang claims responsibility for K-terrorist Sukhdool Singh's killing in Canada pic.twitter.com/6ZN1T30pb4
— Megh Updates 🚨™ (@MeghUpdates) September 21, 2023
ಲಾರೆನ್ಸ್ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?
ಸುಖ್ ಧೂಲ್ ಸಿಂಗ್ ಮಾದಕ ವ್ಯಸನಿಯಾಗಿದ್ದು, ಅವರ ಗ್ಯಾಂಗ್‌ನಲ್ಲಿದ್ದ ಹಲವಾರು ಜನರ ಮನೆಗಳನ್ನು ನಾಶಪಡಿಸಿದ್ದಾನೆ. ವಿವಿಧ ಗ್ಯಾಂಗ್‌ಗಳಿಗೆ ಸಂಬಂಧಿಸಿದ ಹಲವಾರು ಜನರ ಹತ್ಯೆ ಮಾಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಪೋಸ್ಟ್ ಹೇಳಿಕೊಂಡಿದೆ.
NIA INTENSIFIES CRACKDOWN ON KHALISTANI TERRORISTS OPERATING IN INDIA
— NIA India (@NIA_India) September 20, 2023
ANNOUNCES CASH REWARD FOR INFO ON BKI TERRORISTS RINDA, LANDA & 3 OTHERS pic.twitter.com/nPWflc2j4s
ಯುವ ಅಕಾಲಿದಳದ ನಾಯಕ ವಿಕ್ರಮಜಿತ್ ಸಿಂಗ್, ಅಕಾ ವಿಕ್ಕಿ ಮಿದ್ದುಖೇರಾ, 33 ರ ಸುಖ್ದೂಲ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅದು ಹೇಳಿಕೊಂಡಿದೆ. ಗಮನಾರ್ಹವೆಂದರೆ, ಆಗಸ್ಟ್ 7, 2021 ರಂದು ಮೊಹಾಲಿಯ ಸೆಕ್ಟರ್ 71 ರಲ್ಲಿ ಹಗಲು ಹೊತ್ತಿನಲ್ಲಿ ಮಿದ್ದುಖೇರಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮಾತ್ರವಲ್ಲದೆ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ, ಸಂದೀಪ್ ನಂಗಲ್ ಹತ್ಯೆಯಲ್ಲಿ ಸುಖಾ ಭಾಗಿಯಾಗಿದ್ದಾನೆ ಎಂದು ಅದು ಹೇಳಿದೆ.
ಎನ್‌ಐಎ ವಾಂಟೆಡ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ನಂತರ ಹತ್ಯೆ
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಾರತದಲ್ಲಿ ನೆಲೆಸಿರುವ ಅಥವಾ ಪಲಾಯನ ಮಾಡಿರುವ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ 24 ಗಂಟೆಗಳ ನಂತರ ಅವರ ಹತ್ಯೆಯ ವರದಿಯಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications