• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಾಂಗಿ-ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್

|

ಮುಂಬೈ, ಡಿಸೆಂಬರ್ 02: ಸಬ್ ಲೆಫ್ಟಿನೆಂಟ್ ಶಿವಾಂಗಿ ಅವರನ್ನು ಭಾರತೀಯ ನೌಕಾಪಡೆಯ ಪೈಲಟ್ ಆಗಿ ನೇಮಿಸಲಾಗಿದೆ ಎಂದು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಶಿವಾಂಗಿ ಕಾರ್ಯನಿರ್ವಹಿಸಲಿದ್ದಾರೆ.

ಬಿಹಾರದ ಮುಜಾಫರ್ ಪುರ್ ನಲ್ಲಿ ಜನಿಸಿರುವ ಶಿವಾಂಗಿ 2018ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದರು. ಸೋಮವಾರದಂದು ಕೊಚ್ಚಿಯ ನೌಕಾ ನೆಲೆಗೆ ಶಿವಾಂಗಿ ನವಾಲ್ ಡೊರ್ನಿಯರ್ ಏರ್ ಕ್ರಾಫ್ಟ್ ಪೈಲಟ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

''ನನಗೆ ಇದೊಂದು ತುಂಬಾ ಹೆಮ್ಮೆಯ ವಿಚಾರವಾಗಿದೆ. ನನ್ನ ಪೋಷಕರಿಗೆ ತುಂಬಾ ಖುಷಿಕೊಟ್ಟಿದೆ. ನನ್ನ ದೀರ್ಘಕಾಲದ ಕನಸು ಕೊನೆಗೂ ನನಸಾಗಿದೆ. ನಾನೀಗ ಮೊದಲ ಮಹಿಳಾ ಪೈಲಟ್ ಎಂಬುದು ದೊಡ್ಡ ಹೆಮ್ಮೆಯ ವಿಚಾರವಾಗಿದೆ. ಇದೇ ಮೊದಲ ಬಾರಿಗೆ ಕಾಕ್ ಪಿಟ್ ನಲ್ಲಿ ಮಹಿಳೆ ಇರುವಂತಾಗಿದೆ. ಇದರಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಬೇರೆ ಮಹಿಳೆಯರಿಗೂ ಹೆಚ್ಚಿನ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ'' ಎಂದು ಶಿವಾಂಗಿ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಮಗಳೂರಿನ ಬೆಡಗಿ ಮೇಘನಾ ಯುದ್ಧ ವಿಮಾನದ ಪೈಲಟ್

ವಿಶ್ವದಲ್ಲಿ ಬ್ರಿಟನ್, ಅಮೆರಿಕ, ಇಸ್ರೇಲ್ ಮತ್ತು ಪಾಕಿಸ್ತಾನವನ್ನು ಬಿಟ್ಟರೆ ಭಾರತದಲ್ಲಿ ಮಾತ್ರವೇ ಮಹಿಳಾ ಫೈಟರ್ ಪೈಲೆಟ್ ಗಳಿರುವುದು!.

ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿ

2016 ರ ಜೂನ್ ನಲ್ಲಿ ಭಾರತೀಯ ವಾಯುಸೇನೆ ಗೆ ಆಯ್ಕೆಯಾದ ಭಾವನಾ ಕಾಂತ್, ಮೋಹನಾ ಸಿಂಗ್ ಸೇರಿದಂತೆ ಮೂವರು ಮಹಿಳಾ ಯುದ್ಧ ವಿಮಾನ ಪೈಲೆಟ್ ಗಳ ಪೈಕಿ ಮೊದಲ ಬಾರಿಗೆ ಅವನಿ ಯುದ್ಧ ವಿಮಾನ ನಡೆಸಿದ ಕೀರ್ತಿ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sub Lieutenant Shivangi on Monday joined the Indian Navy as its first woman pilot on completion of operational training here, a Defence spokesman said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more