Student Visa Day: ಅಮೇರಿಕ ರಾಯಭಾರ ಕಚೇರಿ-ಭಾರತ ಉನ್ನತ ಶಿಕ್ಷಣ ಸಹಯೋಗದ ಸಂಭ್ರಮಾಚರಣೆ
ನವದೆಹಲಿ, ಜೂನ್, 07: ಭಾರತದಲ್ಲಿನ ಅಮೇರಿಕ ರಾಯಭಾರ ಕಚೇರಿಯು 2023ರ ಬೇಸಿಗೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿ ವೀಸಾ ಅರ್ಜಿಗಳಿಗೆ ಸಜ್ಜಾಗಿದೆ. ಭಾರತದಲ್ಲಿನ ಅಮೇರಿಕ ರಾಯಭಾರ ಕಚೇರಿಯು ತನ್ನ ಏಳನೆಯ ವಿದ್ಯಾರ್ಥಿ ವೀಸಾ ದಿನವನ್ನು ದೇಶಾದ್ಯಂತ ನಡೆಸಿದೆ. ನವದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತಾ ಮತ್ತು ಮುಂಬೈ ದೂತಾವಾಸ ಕಚೇರಿಗಳಲ್ಲಿ ವೀಸಾ ದಿನವನ್ನು ನಡೆಸಿದ್ದು, ಸುಮಾರು 3,500 ಭಾರತೀಯ ವಿದ್ಯಾರ್ಥಿ ವೀಸಾ ಅರ್ಜಿದಾರರ ಸಂದರ್ಶನ ನಡೆಸಿತು.
ವಿಶ್ವದಲ್ಲೆ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿರುವ ಅಮೆರಿಕವನ್ನು ಉನ್ನತ ವಿದ್ಯಾಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡು, ವೀಸಾ ಪಡೆದು ಬೆಳವಣಿಗೆ ಹೊಂದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಾಲಿಗೆ ಸೇರಲು ಅಣಿಯಾದ ವಿದ್ಯಾರ್ಥಿಗಳನ್ನು ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಭಾರತದಾದ್ಯಂತ ಕಾನ್ಸುಲ್ ಜನರಲ್ಗಳು ಅಭಿನಂದಿಸಿದರು.

ನಾನು ಮೊದಲಿಗೆ ಯುವ ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದೆ ಮತ್ತು ಈ ಅನುಭವಗಳು ಹೇಗೆ ಪರಿವರ್ತನೆ ತರುತ್ತವೆ ಎನ್ನುವುದನ್ನು ನನ್ನದೇ ಜೀವನದಲ್ಲಿ ನಾನು ಕಂಡಿದ್ದೇನೆ ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು.
2022 ರಲ್ಲಿ ಎಚ್1ಬಿ ವೀಸಾ ಪಡೆದುಕೊಂಡವರಲ್ಲಿ ಭಾರತೀಯರಿಗೆ ಆಗ್ರಸ್ಥಾನ
"ನಾನು ಮೊದಲಿಗೆ ಯುವ ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದೆ. ಮತ್ತು ಈ ಅನುಭವಗಳು ಹೇಗೆ ಪರಿವರ್ತನೆ ತರುತ್ತವೆ ಎನ್ನುವುದನ್ನು ನನ್ನದೇ ಜೀವನದಲ್ಲಿ ಕಂಡಿದ್ದೇನೆ" ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು.
ಅಲ್ಲದೆ "ವಿದ್ಯಾರ್ಥಿ ವಿನಿಮಯವು ಅಮೇರಿಕ- ಭಾರತ ಬಾಂಧವ್ಯದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮತ್ತು ಉತ್ತಮ ಕಾರಣವೂ ಇದೆ. ಅಮೇರಿಕ ಶಿಕ್ಷಣವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಲ್ಲದೆ, ಜ್ಞಾನದ ಜಾಗತಿಕ ಜಾಲಕ್ಕೆ ಲಭ್ಯತೆ ನೀಡುತ್ತದೆ. ಮತ್ತು ಜೀವನಪೂರ್ತಿ ಅರ್ಥ ಮಾಡಿಕೊಳ್ಳಲು ತಳಹದಿ ರೂಪಿಸುತ್ತದೆ. ಆದ್ದರಿಂದಲೇ ಈ ಅವಕಾಶಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ನಾವು ಇಲ್ಲಿದ್ದೇವೆ" ಎಂದರು.
ಉನ್ನತ ಶೈಕ್ಷಣಿಕ ಸಹಯೋಗಗಳ ಸುದೀರ್ಘ ಬಾಂಧವ್ಯ
ವಿದ್ಯಾರ್ಥಿ ವೀಸಾ ದಿನವು ಅಮೇರಿಕ ಮತ್ತು ಭಾರತದ ನಡುವೆ ಉನ್ನತ ಶೈಕ್ಷಣಿಕ ಸಹಯೋಗಗಳ ಸುದೀರ್ಘ ಬಾಂಧವ್ಯವನ್ನು ಸಂಭ್ರಮಿಸುತ್ತದೆ. ಈ ವರ್ಷ 2,00,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೇರಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ ಅಮೇರಿಕದಲ್ಲಿರುವ 20 ಪ್ರತಿಶತದಷ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಿದರು.
125,000 ಭಾರತೀಯರಿಗೆ ವಿದ್ಯಾರ್ಥಿ ವೀಸಾ
"ಅದೇ ರೀತಿ ಕಳೆದ ವರ್ಷ ದಾಖಲೆಯ ಸಂಖ್ಯೆಯಲ್ಲಿ 125,000 ಭಾರತೀಯರಿಗೆ ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿದೆ. ಇದು ರೆ ದೇಶಗಳ ಪೌರರಿಗಿಂತ ಹೆಚ್ಚಾಗಿದೆ. ಕಳೆದ ವರ್ಷ ಪ್ರತಿ 5 ವಿದ್ಯಾರ್ಥಿ ವೀಸಾಗಳಲ್ಲಿ ಒಂದನ್ನು ಭಾರತಕ್ಕೆ ನೀಡಲಾಗಿದೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುತ್ತೇವೆ" ಎಂದು ಭಾರತದ ಕಾನ್ಸುಲರ್ ಅಫೇರ್ಸ್ನ ಪ್ರಭಾರ ಮಿನಿಸ್ಟರ್ ಕೌನ್ಸೆಲ್ಲರ್ ಬ್ರೆಂಡೆನ್ ಮುಲ್ಲಾರ್ಕೀ ತಿಳಿಸಿದರು.
ಅಮೇರಿಕ ರಾಯಭಾರ ಕಚೇರಿ
ಅಮೇರಿಕ ರಾಯಭಾರ ಕಚೇರಿಯು ಅಮೇರಿಕದಲ್ಲಿ ಅಧ್ಯಯನ ಮಾಡಲು ಆಸಕ್ತಿ ಇರುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಮತ್ತು ವೀಸಾ ಪ್ರಕ್ರಿಯೆಗಳಿಗೆ ವಿಶ್ವಾಸಾರ್ಹ ಮತ್ತು ಸಮಗ್ರ ಮಾಹಿತಿಯೊಂದಿಗೆ ನೆರವಾಗಲು ಅಮೇರಿಕ ಸರ್ಕಾರದ ಪ್ರಾಯೋಜಿತ ಸಲಹಾ ಸೇವೆ ಎಜುಕೇಷನ್ ಯು.ಎಸ್.ಎ. ಸಂಪರ್ಕಿಸಲು ಪ್ರೋತ್ಸಾಹಿಸುತ್ತದೆ.
ಭಾರತದಾದ್ಯಂತ 8 ಸಲಹಾ ಕೇಂದ್ರ
ಎಜುಕೇಷನ್ ಯುಎಸ್ಎ ಮಾನ್ಯತೆ ಪಡೆದ ಅಮೇರಿಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುತ್ತಿದ್ದು, ಭಾರತದಾದ್ಯಂತ 8 ಸಲಹಾ ಕೇಂದ್ರಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿ ವಿದ್ಯಾರ್ಥಿಗಳು educationusa.state.gov ಭೇಟಿ ನೀಡಬಹುದಾಗಿದೆ. ಅಥವಾ ಇನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ @educationUSAIndia ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.












Click it and Unblock the Notifications