ರಾಷ್ಟ್ರಧ್ವಜದ ಗೌರವ ರಕ್ಷಣೆಗಾಗಿ ಪ್ರಾಣವಿತ್ತ ಅಸ್ಸಾಮಿನ ವೀರವನಿತೆಯರು

By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ರಾಷ್ಟ್ರಧ್ವಜದ ಗೌರವ ರಕ್ಷಣೆಗಾಗಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದ ಅಸ್ಸಾಮಿನ ವೀರವನಿತೆಯರು ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ.

ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರದ ಭೂಪಟ, ವಂದೇಮಾತರಂ ಎಲ್ಲವೂ ದೇಶಾಭಿಮಾನದ ಅಭಿವ್ಯಕ್ತಿಯ ಸಂಕೇತಗಳಾದರೂ ಅವು ನಮ್ಮಲ್ಲಿ ಸೃಷ್ಟಿಸುವ ಭಾವ ವರ್ಣನಾತೀತ. ಸೈನಿಕನೊಬ್ಬ ಯುದ್ಧ ಗೆ ದ್ದಾಗ, ಕ್ರೀಡಾಳುವೊಬ್ಬ ಆಟದಲ್ಲಿ ಗೆದ್ದಾಗ ತ್ರಿವರ್ಣ ಧ್ವಜ ಹಿಡಿದು ಕುಣಿದು ಕುಪ್ಪಳಿಸುವುದು ಕಾಣುತ್ತೇವೆ.

ಕಳ್ಳರ ಹಿಡಿದ ಮಿತ್ತಲ್ ಸಾಹಸದ ಬಗ್ಗೆ ತಿಳಿಯಲೇಬೇಕು

ಯುದ್ಧಕ್ಕೆ ಹೋರಾಟ ಯೋಧನೊಬ್ಬ ಗೆದ್ದರೆ ಧ್ವಜ ಹಿಡಿದುಬರುವೆ, ಸತ್ತರೆ ತ್ರಿವರ್ಣಧ್ವಜ ವನ್ನು ಸುತ್ತಿಕೊಂಡು ಬರುವೆ ಎಂದು ಹೇಳಿದ್ದು ಈ ಎಲ್ಲ ಸಂಕೇತಗಳ ಕುರಿತು ನಮಗಿರುವ ಹೆಮ್ಮೆ ಅಭಿಮಾನದ ಪ್ರತೀಕ. ರಾಷ್ಟ್ರಧ್ವಜವೆಂದರೆ ಕೇವಲ ಅದು ಬಟ್ಟೆಯಲ್ಲ. ಅದು ನಮ್ಮ ಹೆಮ್ಮೆ, ದೇಶದ ಕುರಿತ ಪ್ರೀತಿಯ ಸಂಕೇತ, ಅದು ನಮ್ಮ ಆತ್ಮಾಭಿಮಾನದ ಸಂಕೇತ.

Story of 2 patriotic women of Aassam who lost their life to save honour of national flag

ರಾಷ್ಟ್ರಧ್ವಜದ ಪೂಜ್ಯತೆ ಹಾಗೂ ಗೌರವದ ರಕ್ಷಣೆಗಾಗಿ 17 ರ ತರುಣಿಕನಕಲತಾರಿಂದ ಹಿಡಿದು 73 ರ ವೃದ್ಧೆ ಮಾತಂಗಿನಿ ಹಜ್ರಾರವರೆಗೆ ಸ್ವಾತಂತ್ರ್ಯ ಸಮರದ ಉದ್ದಕ್ಕೂ ಸಾವಿರಾರು ಮಂದಿ ಬಲಿದಾನಮಾಡಿದ್ದಾರೆ. 1942 - ಭಾರತ ಬಿಟ್ಟು ತೊಲಗಿ ಚಳುವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ.

ಅಸ್ಸಾಂ ರಾಜ್ಯ ಕೂಡಾ ಚಳುವಳಿಯ ಅಗ್ನಿಕುಂಡವಾಗಿತ್ತು. ಮಹಿಳೆ ಮಕ್ಕಳೆನ್ನದೆ ಸಾವಿರಾರು ಜನ ಸ್ವಯಂಪ್ರೇರಿತರಾಗಿ ಬ್ರಿಟಿಷರನ್ನುಓಡಿಸಲು ಬೀದಿಗಿಳಿದಿದ್ದರು. 1942 ರ ಸೆಪ್ಟೆ೦ಬರ್ 20 ರ೦ದು ಅಸ್ಸಾಮಿನ ಗೋಪ್ವಾರದ ಪೊಲೀಸ್ ಠಾಣೆಯ ಮೇಲೆ ತ್ರಿವಣ೯ಧ್ವಜ ನೆಡುವ ನಿರ್ಧಾರವನ್ನು ಹೋರಾಟಗಾರರು ಮಾಡಿದರು. 17ರ ಬಾಲೆ ಕನಕಲತಾ ಬಹುದೊಡ್ಡ ಗು೦ಪಿನೊ೦ದಿಗೆ ಎಲ್ಲರಿಗಿ೦ತ ಮು೦ಭಾಗದಲ್ಲಿ ತ್ರಿವಣ೯ ಧ್ವಜವನ್ನು ಹಿಡಿದುಮುನ್ನುಗ್ಗುತ್ತಿದ್ದಳು. ಗು೦ಪನ್ನು ಚದುರಿಸಲು ಪೊಲೀಸರು ನೀಡಿದ ಎಚ್ಚರಿಕೆಗೆ ಕವಡೆ ಕಾಸಿನ ಬೆಲೆಯನ್ನೂ ನೀಡದೆ ಸಾವಿಗೂ ಅ೦ಜದೆ ಧ್ವಜಧಾರಿಗಳು ಮು೦ದುವರಿದರು.

ಕನ್ನಡ ನೆಲದ ಕ್ರಾಂತಿಯ ಕಿಡಿಗಳು: ವಿದುರಾಶ್ವತ್ಥದ ಬಲಿದಾನಿಗಳು

ಪೊಲೀಸರು ಗು೦ಡು ಹಾರಿಸಿದರು. ಕನಕಲತಾದೇಶಪ್ರೇಮಿಗಳು ನಿಶ್ಚಯಿಸಿದ್ದ 'ಮೃತ್ಯುವಾಹಿನಿ'ಯ ತಂಡದಲ್ಲಿದ್ದಳು, ಅದೇನೇ ಬಂದರೂ ಧ್ವಜ ಹಾರಿಸಲೇಬೇಕೆಂಬ ನಿಶ್ಚಯ ಅವರದಾಗಿತ್ತು. ಪೋಲೀಸರಗುಂಡಿಗೆ ಎದೆಯೊಡ್ಡಿದ ಕನಕಲತಾ ಗು೦ಡೇಟು ತಿ೦ದು ಕೆಳಗೆ ಬಿದ್ದರೂ ಧ್ವಜನೆಲಕ್ಕೆ ಬೀಳದ೦ತೆ ಆ ತೀವ್ರ ನೋವಿನಲ್ಲೂ ನಿಲ್ಲಿಸಿ ಹಿಡಿದಿದ್ದಳು. ಕೆಲ ಹೊತ್ತಿನ ನ೦ತರ ಮುಕು೦ದ ಕಾಕತಿ ಎ೦ಬ ತರುಣ ಮು೦ದೆ ಬ೦ದು ಆಕೆಯಿ೦ದ ಧ್ವಜವನ್ನೆತ್ತಿಕೊ೦ಡಾಗಲೇ ಆಕೆ ನಿರಾಳವಾಗಿ ಪ್ರಾಣ ತ್ಯಜಿಸಿದ್ದು.

ಮುಂದೆ ಮುಕುಂದ ಕಾಕತಿ ಕೂಡಾ ಬಲಿದಾನ ಮಾಡಿದ. ಸಾವನ್ನೂ ಲೆಕ್ಕಿಸದೆ ಈ ತರುಣಪಡೆ ನಿರ್ಧರಿಸಿದಂತೆ ಪೊಲೀಸ್ ಠಾಣೆಯ ಮೇಲೆ ಧ್ವಜ ಹಾರಿಸುವಲ್ಲಿಯಶಸ್ವಿಯಾಯಿತು. ಈ ವೀರತರುಣಿ ಕನಕಲತಾ ಧ್ವಜದ ರಕ್ಷಣೆಗಾಗಿ ಜೀವನೀಡಿದಳು. ಅದೇ ದಿನ ನಾಗಾಂವ್ ಜಿಲ್ಲೆಯ ಬರ್ಹಾಮಪುರದಲ್ಲಿ ಮತ್ತೊಬ್ಬ ವೀರನಾರಿ ಭೋಗೇಶ್ವರಿ ಫು೦ಖನಾನಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಫಿನಿಷ್ ನ ಮೇಲೆ ನುಗ್ಗಿ ದಾಳಿಮಾಡಿ ಧ್ವಜವನ್ನು ಎತ್ತಿಹಿಡಿದು ಪೊಲೀಸ್ ಗುಂಡಿಗೆ ಎದೆಯೊಡ್ಡಿ ಹುತಾತ್ಮಳಾದಳು.

Tallest Tricolor Hosted At Wagah Border

ಇಂತಹವೀರನಾರಿಯರ ಸ್ಮರಣೆ ಈ ದೇಶಕ್ಕೆ ಸದಾ ಶಕ್ತಿ ಸ್ಫೂರ್ತಿ ತುಂಬುವಂಥದ್ದು. ಈ ಹುತಾತ್ಮರ, ಅಪ್ರತಿಮ ದೇಶಭಕ್ತರ ಸ್ಮರಣೆ ನಮ್ಮನ್ನು ಮತ್ತಷ್ಟು ದೇಶವನ್ನು ಪ್ರೀತಿಸುವಂತೆ ಮಾಡಲಿ. ದೇಶಾಭಿಮಾನಿಗಳನ್ನಾಗಿ ಮಾಡಲಿ. ನಮಗೆ ಸಿಕ್ಕ ಸ್ವಾತಂತ್ರ್ಯ ಅದೆಷ್ಟು ಅಮೂಲ್ಯವಾದುದು, ಅದರ ಹಿಂದೆ ಅದೆಂತಹ ತ್ಯಾಗ ಬಲಿದಾನಗಳ ಕಥೆಯಿದೆ ಎಂಬುದು ನಮಗೆ ಅರಿವಾಗಲಿ. ಸುಮ್ಮನೇ ಬರಲಿಲ್ಲ ಸ್ವಾತಂತ್ರ್ಯ ಎಂಬುದು ನಮಗೆ ಅರ್ಥವಾಗಲಿ. (ಕೃಪೆ: ದೇಶಾಭಿಮಾನಿ ಬ್ಲಾಗ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is a story of Kanakalatha Baruva and Bhogeshwari Phunkhanani, two patriotic women from Assam, who sacrificed their life to protect honour of nationl flag of India.
Please Wait while comments are loading...