Holiday: ಹೂಡಿಕೆದಾರಿಗೆ ಗುಡ್ ನ್ಯೂಸ್: ಷೇರು ಮಾರುಕಟ್ಟೆ ರಜೆ ದಿನಗಳ ಪಟ್ಟಿ, ವಿವರ
Stock market holidays 2025: ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿ ಹಣ ದುಪಟ್ಟು ಪಡೆದವರಿದ್ದಾರೆ. ಹಣ ಕಳೆದುಕೊಂಡ ಸಂಖ್ಯೆ ಅಸಂಖ್ಯಾತ ಇದೆ. ಹೂಡಿಕೆದಾರರು ನಿತ್ಯವು ಮಾರುಕಟ್ಟೆಯನ್ನು ಗಮನಿಸುತ್ತಿರುತ್ತಾರೆ. ಅವರಿಗೆಲ್ಲ ಖುಷಿ ಸುದ್ದಿಯೊಂದು ಸಿಕ್ಕಿದೆ. ಪ್ರತಿ ಭಾನುವಾರ ಹಾಗೂ ಶನಿವಾರ ರಜೆ ಇರುತ್ತದೆ. ಹಾಗಾದ್ರೆ ಜುಲೈ ತಿಂಗಳಲ್ಲಿ ಸಾಮಾನ್ಯ ಹೊರತುಪಡಿಸಿ ಎಷ್ಟು ರಜೆಗಳು ಇವೆ ಎಂಬ ಮಾಹಿತಿ ಇಲ್ಲಿದೆ.
ಬಾಂಬೆ ಷೇರು ವಿನಿಮಯ ಕೇಂದ್ರ (BSE) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಎರಡೂ ಷೇರು ಮಾರುಕಟ್ಟೆ ವಿನಿಮಯ ಕೇಂದ್ರಗಳಿಗೆ ಜುಲೈ 2025 ರಲ್ಲಿ ಯಾವುದೇ ರಜೆ ಇರುವುದಿಲ್ಲ. ಪ್ರತಿ ಭಾನುವಾರ, ಶನಿವಾರ ಸೇರಿ ಜುಲೈ ನಲ್ಲಿ ಒಟ್ಟು ಎಂಟು ದಿನ ಮಾತ್ರ ಷೇರುಪೇಟೆಗೆ ರಜೆ ಇರುತ್ತದೆ.

NSE ಯ ವ್ಯಾಪಾರ ರಜೆಯ ಕ್ಯಾಲೆಂಡರ್ ಪ್ರಕಾರ ನೊಡುವುದಾದರೆ, ಜುಲೈ ನಂತರದ ಆಗಸ್ಟ್ ತಿಂಗಳಲ್ಲಿ ಷೇರು ಮುಂದಿನ ಮಾರುಕಟ್ಟೆಯು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಮತ್ತು ಆಗಸ್ಟ್ 27 ರಂದು ಗಣೇಶ ಚತುರ್ಥಿ ದಿನದಂದು ರಜೆ ಇರುತ್ತದೆ.
2025 ರಲ್ಲಿ ಷೇರು ಮಾರುಕಟ್ಟೆ ರಜಾ ಪಟ್ಟಿ
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 27: ಗಣೇಶ ಚತುರ್ಥಿ
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ/ದಸರಾ
ಅಕ್ಟೋಬರ್ 21: ದೀಪಾವಳಿ ಹಬ್ಬದ (ಲಕ್ಷ್ಮೀ ಪೂಜೆ)
ಅಕ್ಟೋಬರ್ 22: ಬಲಿಪ್ರತಿಪದ
ನವೆಂಬರ್ 5 : ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್ ಜಯಂತಿ
ಡಿಸೆಂಬರ್ 25 - ಕ್ರಿಸ್‌ಮಸ್ ಹಬ್ಬ
ಇಂದು ಜುಲೈ ಕೊನೆ ದಿನ: ಷೇರುಪೇಟೆ ಸ್ಥಿತಿ ಹೇಗಿದೆ?
ಷೇರುಪೇಟೆಯು ಅಂತಾರಾಷ್ಟ್ರೀಯ ಯುದ್ಧ ಪರಿಸ್ಥಿತಿಯಿಂದಾಗಿ ನೆಗಟಿವ್ ಟ್ರೆಂಡ್ ಮುಂದುವರಿದಿತ್ತು. ನಿರಂತರವಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದ ನಿಫ್ಟ್, ಸನ್ಸೆಕ್ಸ್ ಇದೀಗ ಹಸಿರಾಗುತ್ತಿದೆ. ಪಾಸಿಟಿವ್ ಟ್ರೆಂಡ್ ನಲ್ಲಿವೆ. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದವರು, ಸ್ಟಾಕ್ ಮಾರುಕಟ್ಟೆಗಳಲ್ಲಿ ಷೇರು ಖರೀದಿಸಿದವರ ಮೊಗದಲ್ಲಿ ಕೊಂಚ ಹರ್ಷ ಮೂಡಿಸಿದೆ. ಇಂದು ಸೋಮವಾರ (ಜೂನ್ 30) ಭಾರತೀಯ ಮಾನದಂಡ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ. ಹಣಕಾಸು ಮತ್ತು ಆಟೋ ವಲಯಗಳಲ್ಲಿ ನಷ್ಟ ಉಂಟಾಗಿದೆ. ವಿದೇಶಿ ಬಂಡವಾಳ ಒಳಹರಿವಿನ ಮಧ್ಯೆಯು ಕುಸಿತ ಸಂಭವಿಸಿದೆ.
ಬಿಎಸ್‌ಇ ಸೆನ್ಸೆಕ್ಸ್ 321 ಪಾಯಿಂಟ್‌ಗಳಿಗೆ ಕುಸಿದು 83,737 ಕ್ಕೆ ತಲುಪಿತು. ಎನ್‌ಎಸ್‌ಇ ನಿಫ್ಟಿ 82 ಪಾಯಿಂಟ್‌ಗೆ ಕುಸಿದು 25,600 ಅಂಕಗಳಿಗೆ ಇಳಿಯಿತು ಎಂದು ಮಾರುಕಟ್ಟೆ ಮೂಲಗಳು ವರದಿ ಮಾಡಿವೆ.












Click it and Unblock the Notifications