• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ನಡುಗಿಸಿದ್ದ ಸರ್ಜಿಕಲ್ ಸ್ಟ್ರೈಕ್ ವಿರೋಧಿಸಿದ್ದು ಯಾರ್ಯಾರು?

|
Google Oneindia Kannada News

Recommended Video

   ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಧ್ವನಿ ಎತ್ತಿ ಬಿಜೆಪಿಗೆ ಸಾಕ್ಷಿ ಕೇಳಿದ ಕಾಂಗ್ರೆಸ್ ನಾಯಕರು | Oneindia Kannada

   ನವದೆಹಲಿ, ಜೂನ್ 28: ಸರ್ಜಿಕಲ್ ಸ್ಟ್ರೈಕ್... ಸದ್ಯಕ್ಕೆ ಎಲ್ಲೆಲ್ಲೂ ಅದರದ್ದೇ ಸುದ್ದಿ. 2016 ರ ಸೆಪ್ಟೆಂಬರ್ 27-28 ರಂದು ಭಾರತ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಉರಿಯ ಸೈನಿಕರ ಶಿಬಿರದ ಮೇಲೆ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾದ 20 ಸೈನಿಕರಿಗೆ ಭಾರತ ನೀಡಿದ ಉಡುಗೊರೆ ಇದು! ಪಾಪಿ ಪಾಕಿಸ್ತಾನದ ಸೊಕ್ಕಿಗೆ ಅಷ್ಟೇ ಧೈರ್ಯದಿಂದ ಪ್ರತೀಕಾರ ತೀರಿಸಿಕೊಂಡಿತ್ತು ಭಾರತ.

   ಆದರೆ ಈ ಸರ್ಜಿಕಲ್ ಸ್ಟ್ರೈಕ್ ನಿಜಕ್ಕೂ ನಡೆದಿದೆಯಾ? ಹೌದು ಎಂದಾರೆ ಅದಕ್ಕೆ ಸಾಕ್ಷಿ ಏನು ಎಂದು ವಿಪಕ್ಷಗಳು ಸರ್ಕಾರವನ್ನು ಕೇಳಿದ್ದವು. ಎಲ್ಲಿ ಈ ಸರ್ಜಿಕಲ್ ಸ್ಟ್ರೈಕ್ ಅನ್ನು ಮೋದಿ ಸರ್ಕಾರ ತನ್ನ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತದೋ ಎಂಬ ಭಯ ಕಾಂಗ್ರೆಸ್ಸಿಗೆ ಇಲ್ಲದಿರಲಿಲ್ಲ. ಎನ್ ಡಿಎ ಸರ್ಕಾರವನ್ನೂ ಸರ್ಜಿಕಲ್ ಸ್ಟ್ರೈಕ್ ಅನ್ನು ತನ್ನ ಸಾಧನೆಯ ಮೈಲಿಗಲ್ಲು ಎಂದಿತ್ತು.

   ಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ

   ಸರ್ಜಿಕಲ್ ಸ್ಟ್ರೈಕ್ ಫೇಕ್ ಅಲ್ಲ, ಸತ್ಯ ಎನ್ನುವುದಕ್ಕೆ ಪೂರಕವಾಗುವಂಥ ವಿಡಿಯೋವನ್ನು ಕೆಲವು ಮಾಧ್ಯಮಗಳು ಇದೀಗ ಬಿಡುಗಡೆ ಮಾಡಿದ್ದು, ಅದನ್ನು ಸುಳ್ಳು ಎಂದವರಿಗೆ ಮುಖಭಂಗವಾಗಿದೆ. 2016 ರ ಸೆಪ್ಟೆಂಬರ್ ನಲ್ಲಿ ನಡೆದ ಈ ಸೇನಾ ಕಾರ್ಯಾಚರಣೆಗೆ ಅಂದು ವಿರುದ್ಧದ ಪ್ರತಿಕ್ರಿಯೆ ನೀಡಿದ್ದವರೆಲ್ಲ ಇಂದು ಏನಂತಾರೆ?

   ಎಚ್ ಡಿ ದೇವೇಗೌಡ

   ಎಚ್ ಡಿ ದೇವೇಗೌಡ

   'ಸರ್ಜಿಕಲ್ ಸ್ಟ್ರೈಕ್ ಏನು ದೊಡ್ಡ ಸಾಧನೆಯಲ್ಲ. ಪಾಕ್ ಆಕ್ರಮಿಕತ ಕಾಶ್ಮೀರದ ಭಾಗಕ್ಕೇನು ನಮ್ಮ ಸೈನಿಕರು ಹೋಗಿ ದಾಳಿ ನಡೆಸಿಲ್ಲ. ನಮ್ಮ ಯೋಧರು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಕೇಂದ್ರದ ಮೋದಿ ಸರ್ಕಾರ ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಖಂಡಿತ ತಪ್ಪು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದರು.

   ಪಿ ಚಿದಂಬರಂ

   ಪಿ ಚಿದಂಬರಂ

   ಸರ್ಜಿಕಲ್ ಸ್ಟ್ರೈಕ್ ಹಿಂದೆಯೂ ನಡೆದಿತ್ತು. ಉಗ್ರರ ಹುಟ್ಟಡಗಿಸಲು ಇಂಥ ದಾಳಿಗಳು ನಡೆಯುತ್ತಿರುತ್ತವೆ ಎಂದು ಜನರಲ್ ಬಿಕ್ರಂ ಸಿಂಗ್ ಸಹ ಖಚಿತ ಪಡಿಸಿದ್ದಾರೆ. ಆದರೆ ನಮಗೆ ಇದನ್ನು ನಂಬುವುದು ಕಷ್ಟ. ಬಿಜೆಪಿ ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳದೆ, ವಿಡಿಯೋ ಬಿಡುಗಡೆ ಮಾಡಲಿ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದರು.

   ಸರ್ಜಿಕಲ್ ಸ್ಟ್ರೈಕ್ ವಿಡಿಯೋ: ಬಿಜೆಪಿಗೆ ಕಾಂಗ್ರೆಸ್ ತಪರಾಕಿಸರ್ಜಿಕಲ್ ಸ್ಟ್ರೈಕ್ ವಿಡಿಯೋ: ಬಿಜೆಪಿಗೆ ಕಾಂಗ್ರೆಸ್ ತಪರಾಕಿ

   ಆನಂದ್ ಶರ್ಮಾ

   ಆನಂದ್ ಶರ್ಮಾ

   ಪಾಕಿಸ್ತಾನದ ಗಡಿಯೊಳಗೆ ಹೊಕ್ಕು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಇದೇ ಮೊದಲು ಎಮದು ಬಿಜೆಪಿ ಹೇಳುತ್ತಿದೆ. ಈ ಮೂಲಕ ಸೇನೆಯ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಈ ಹಿಂದೆಯೂ ಹಲವು ಬಾರಿ ಇಂಥ ಕಾರ್ಯಾಚರಣೆಗಳು ನಡೆದಿದೆ. ಇದೇ ಮೊದಲು ಎಂದು ಬಿಜೆಪಿ ಲಾಭ ಪಡೆಯುವುದು ಸರಿಯಲ್ಲ. ನಮಗೆ ಸಾಕಶ್ಹಿ ನೀಡಿ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಹೇಳಿದ್ದರು.

   ಸಂಜಯ್ ನಿರುಪಮ್

   ಸಂಜಯ್ ನಿರುಪಮ್

   ಸರ್ಜಿಕಲ್ ಸ್ಟ್ರೈಕ್ ನ ನಂತರ ಸಾಕ್ಷಿ ಕೊಡಿ ಎಂದು ಕೇಳುವ ಮೂಲಕ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ವಿವಾದ ಸೃಷ್ಟಿಸಿದ್ದರು. ನಂತರ ತಮ್ಮ ಮಾತನ್ನು ತಾವೇ ತಿರುಚಿ, ನಾನು ವಿಡಿಯೋ ಕೇಳಿಲ್ಲ, ದೇಶದ ಭದ್ರತೆಯ ದೃಷ್ಟಿಯಿಂದ ವಿಡಿಯೋ ಇಡುಗಡೆ ಮಾಡುವುದು ಸರಿಯಲ್ಲ ಎಂಬುದು ನನಗೆ ಗೊತ್ತು. ಆದರೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂಬುದಕ್ಕೆ ಏನಾದರೂ ಸಾಕ್ಷಿ ನೀಡಿ. ಇಲ್ಲವೆಂದರೆ ನಂಬುವುದು ಕಷ್ಟ ಎಂದಿದ್ದರು.

   ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅರುಣ್ ಶೌರಿ ಅಚ್ಚರಿಯ ಹೇಳಿಕೆಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅರುಣ್ ಶೌರಿ ಅಚ್ಚರಿಯ ಹೇಳಿಕೆ

   ಸರ್ಜಿಕಲ್ ಸ್ಟ್ರೈಕ್ ಸುಳ್ಳು

   ಸರ್ಜಿಕಲ್ ಸ್ಟ್ರೈಕ್ ಸುಳ್ಳು

   ಸರ್ಜಿಕಲ್ ಸ್ತ್ರೈಕ್ ನಡೆದಿದ್ದೇ ಸುಳ್ಳು. ಬಿಜೆಪಿ ಇದನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಅಕಸ್ಮಾತ್ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಆದರೆ ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಬೇಕಿತ್ತು, ಆದರೆ ಅಲ್ಲಿ ಇಂದಿಗೂ ಉಗ್ರರ ಚಟುವಟಿಕೆ ಹಿಂಸಾಚಾರ ನಡೆಯುತ್ತಲೇ ಇದೆ ಎಂದು ಬಿಜೆಪಿಯ ಮಾಜಿ ನಾಯಕ ಅರುಣ್ ಶೌರಿ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದಾರೆ.

   English summary
   Surgical strike by India against Pakistan took place on September 2016. Many leaders opposes this and said, Surgical strike is not tru, NDA government is using this for vote gain.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X