ಕರ್ನಾಟಕ ಮಾದರಿ ಕುಟುಂಬದ ಯಜಮಾನಿಗೆ ಮಾಸಿಕ 1,000 ಆರ್ಥಿಕ ನೆರವು ನೀಡುವ ಯೋಜನೆ ಆರಂಭಿಸಿದ ಸ್ಟಾಲಿನ್
ಚೆನ್ನೈ, ಸೆಪ್ಟೆಂಬರ್ 15: ಕರ್ನಾಕದಂತೆ ಡಿಎಂಕೆ ಸರ್ಕಾರದ ಮಹತ್ವಕಾಂಕ್ಷಿ ಮಹಿಳೆಯರಿಗೆ ಮಾಸಿಕ 1,000 ರೂ. ಆರ್ಥಿಕ ನೆರವು ಯೋಜನೆಯನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ದ್ರಾವಿಡ ಐಕಾನ್ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನದಂದು ಶುಕ್ರವಾರ ಚಾಲನೆ ನೀಡಿದರು.
ಇದು ಮಹಿಳೆಯರ ಶ್ರಮಕ್ಕೆ ನೀಡುವ ಮನ್ನಣೆಯಾಗಿದೆ. ಹಲವಾರು ಫಲಾನುಭವಿಗಳಿಗೆ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳನ್ನು ವಿತರಿಸಿದರು. ರಾಜಧಾನಿ ಚೆನ್ನೈ ಮಾತ್ರವಲ್ಲದೆ ರಾಜ್ಯ ಸಚಿವರು ತಮ್ಮ ಜಿಲ್ಲೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಣ್ಣಾ ಅವರ ಜನ್ಮದಿನದಂದು ಮತ್ತು ಕರುಣಾನಿಧಿ ಅವರ ಶತಮಾನೋತ್ಸವ (2023-24) ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೂಲ ಆದಾಯ ಕಾರ್ಯಕ್ರಮ ಇದಾಗಿದ್ದು, ಇದನ್ನು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಹೆಸರನ್ನು ಇಡಲಾಗಿದೆ. ರಾಜ್ಯ ಸರ್ಕಾರವು ನೀಡುವ ಈ ನೆರವನ್ನು ಮಹಿಳೆಯರ ಹಕ್ಕು ಎಂದು ಸಿಎಂ ಎಂಕೆ ಸ್ಟಾಲಿನ್ ಹೇಳಿದರು.
ಯೋಜನೆ ಅಡಿಯಲ್ಲಿ 1.06 ಕೋಟಿ ಮಹಿಳೆಯರನ್ನು (1,06,50,000) ಫಲಾನುಭವಿಗಳೆಂದು ಸರ್ಕಾರ ಗುರುತಿಸಿದೆ ಮತ್ತು 1,000 ರೂ ಸಹಾಯವನ್ನು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.
ಈ ಯೋಜನೆಯು 'ಕಲೈಗ್ನರ್ ಮಗಳಿರ್ ಉರಿಮೈ ತಿಟ್ಟಂ,' ಮಹಿಳೆಯರ ಹಕ್ಕಿಗಾಗಿ ಕಲೈಂಜರ್ ಯೋಜನೆಯಾಗಿದೆ. ಡಿಎಂಕೆಯ ದಿವಂಗತ ಕುಲಪತಿ ಕರುಣಾನಿಧಿ (1924-2018) ಅವರನ್ನು ಕಲೈಗ್ನರ್ ಎಂದು ಕರೆಯಲಾಗುತ್ತದೆ, ಅಂದರೆ ಶ್ರೇಷ್ಠ ಕಲಾವಿದ ಎಂದರ್ಥ. 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಡಿಎಂಕೆಯ ಪ್ರಣಾಳಿಕೆಯ ಪ್ರಮುಖ ಲಕ್ಷಣವಾಗಿರುವ ಈ ಯೋಜನೆಯನ್ನು ಅಣ್ಣಾದೊರೈ ಅವರ ಜನ್ಮದಿನದಂದು ಸೆಪ್ಟೆಂಬರ್ 15 ರಂದು ಪ್ರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರವು ತಿಂಗಳ ಹಿಂದೆ ಘೋಷಿಸಿತ್ತು.
ಕಾಂಚೀಪುರಂ ಅಣ್ಣಾದೊರೈ ಅವರ ತವರು ಪಟ್ಟಣವಾಗಿದ್ದು, ಅವರು 1967 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ತನ್ನ ಮೊದಲ ಮಹಾ ವಿಜಯವನ್ನು ಸಾಧಿಸಿದರು. ಅವರು 1967 ಮತ್ತು 1969 ರ ನಡುವೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಅಣ್ಣಾದೊರೈ 1949 ರಲ್ಲಿ ಡಿಎಂಕೆ ಸ್ಥಾಪಿಸಿದ್ದರು.
ಜುಲೈನಲ್ಲಿ, ಸ್ಟಾಲಿನ್ ಅವರು 1,000 ಮಾಸಿಕ ಸಹಾಯವನ್ನು ಪಡೆಯಲು ಮಹಿಳೆಯರಿಂದ ಅರ್ಜಿಗಳನ್ನು ನೋಂದಾಯಿಸಲು ಅನುಕೂಲವಾಗುವಂತೆ ಧರ್ಮಪುರಿಯಲ್ಲಿ ಶಿಬಿರವನ್ನು ಉದ್ಘಾಟಿಸಿದ್ದರು. ಕೋಟ್ಯಂತರ ಮಹಿಳೆಯರ ಜೀವನದಲ್ಲಿ ಹೊಸ ನವೋದಯಕ್ಕೆ ಕಾರಣವಾಗುವ ಈ ಯೋಜನೆ ಕ್ರಾಂತಿಕಾರಿ ಎಂದು ಸ್ಟಾಲಿನ್ ಬಣ್ಣಿಸಿದ್ದರು.
ವಾರ್ಷಿಕ 12,000 ರೂ.ಗಳ ಆರ್ಥಿಕ ನೆರವು ಮಹಿಳೆಯರಿಗೆ ಉತ್ತಮ ಬೆಂಬಲವಾಗಿದೆ, ಇದು ಅಭಿವೃದ್ಧಿಯ ಸಂಕೇತವಾಗಿದೆ. ಇದು ಅವರ ಜೀವನ ಮಟ್ಟವನ್ನು ಸುಧಾರಿಸಲು, ಸ್ವಾಭಿಮಾನದ ಜೀವನವನ್ನು ನಡೆಸಲು ಮತ್ತು ಬಡತನವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಅಣ್ಣಾದೊರೈ ಅವರ 115ನೇ ಜನ್ಮದಿನದ ಅಂಗವಾಗಿ ಸ್ಟಾಲಿನ್ ಅವರು ದ್ರಾವಿಡ ಧುರೀಣರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯೋಜನೆಗೆ ಚಾಲನೆ ನೀಡುವ ಮುನ್ನ ಪುಷ್ಪ ನಮನ ಸಲ್ಲಿಸಿದರು.












Click it and Unblock the Notifications