ಮಕ್ಕಳಿಗೆ ಸಿಹಿಸುದ್ದಿ: ಶಾಲೆಯಲ್ಲಿ ಪ್ರತಿದಿನ ಆಟ ಆಡೋದು ಕಡ್ಡಾಯ
Recommended Video

ಬೆಂಗಳೂರು, ಆಗಸ್ಟ್ 7: ಮುಂಬರುವ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪಠ್ಯವನ್ನು ಶೇ.50ರಷ್ಟು ಕಡಿತಗೊಳಿಸಲಾಗುತ್ತಿದ್ದು, ಗೇಮ್ಸ್ ಅವಧಿ ಕಡ್ಡಾಯವಾಗಲಿದೆ.
ಈ ಕುರಿತು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ಈ ವಿಷಯವನ್ನು ತಿಳಿಸಿದ್ದಾರೆ. ಮಕ್ಕಳಿಗೆ ಪ್ರತಿ ದಿನವೂ ಗೇಮ್ಸ್ ಪೀರಿಯಡ್ ಇರಲಿದೆ. ದೇಶದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರು ಈಗ ಕ್ರೀಡೆಯುವ ಶಿಕ್ಷಣದ ಭಾಗವಲ್ಲಾ ಎಂದೇ ನಂಬಿದ್ದಾರೆ, ಆದರೆ 2019ರಿಂದ ಶಾಲಾ ಪಠ್ಯದಲ್ಲಿ ಶೇ.50ರಷ್ಟು ಕಡಿತಗೊಳಿಸಲಾಗುತ್ತಿದ್ದು, ಗೇಮ್ಸ್ ಪೀರಿಯಡ್ ಕಡ್ಡಾಯವಾಗಲಿದೆ.

ಕ್ರೀಡೆಗಳನ್ನು ದೈನಂದಿನ ಚಟುವಟಿಕೆಯ ಭಾಗವಾಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಶೇ.50ಕ್ಕೆ ಕಡಿತಗೊಳಿಸಿ ಅವರನ್ನು ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಬಳಸಿಕೊಳ್ಳಲಾಗುತ್ತದೆ. ಕ್ರೀಡಾ ಚಟುವಟಿಕೆಗಳಿಗಾಗಿ ಸಾಕಷ್ಟು ಹಣ ವಿನಿಯೋಗಿಸಲಾಗುವುದು. ದೇಶಾದ್ಯಂತ ಶೀಘ್ರದಲ್ಲೇ 20 ವಿಶೇಷ ಕ್ರೀಡಾ ಶಾಲೆಗಳು ಅಸ್ವಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.
ರಾಜ್ಯ ಕ್ರೀಡಾ ಒಕ್ಕೂಟಗಳಲ್ಲಿ ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತಗೊಳಿಸುವ ನಿಟ್ಟಿನಲ್ಲಿ 2011ರ ಕ್ರೀಡಾ ನೀತಿಯನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications