• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಭಾಷಣದ ವೇಳೆ ಕೈಕೊಟ್ಟ ಮೈಕ್: ಅಮಿತ್ ಶಾನೇ ಕಾರಣ ಎಂದ ಯುವರಾಜ!

|

ನವದೆಹಲಿ, ಆಗಸ್ಟ್ 17: ನಾಲ್ಕು ರಾಜ್ಯಗಳ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೇ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲವೇನೋ?

ರಾಜಧಾನಿಯಲ್ಲಿ ಗುರುವಾರ (ಆ 16) 'ಸಂಜಿ ವಿರಾಸತ್ ಬಚಾವೋ ಸಮ್ಮೇಳನ್' ನಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಎಂದಿನಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೇ, ಸೌಂಡ್ ಬಾಕ್ಸ್ ದೊಡ್ಡದಾಗಿ ಸದ್ದು ಮಾಡಿ, ರಾಹುಲ್ ಭಾಷಣ ಮಾಡುತ್ತಿದ್ದ ವೇದಿಕೆಯ ಮೈಕ್ ಕೈಕೊಟ್ಟಿದೆ.

3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ

ತಕ್ಷಣವೇ, ಮೈಕ್ ಸಮಸ್ಯೆಯನ್ನು ಆಯೋಜಕರು ಬಗೆಹರಿಸಿದರು. ಭಾಷಣ ಮುಂದುವರಿಸುತ್ತಾ, 'ಏ ದೇಖೋ, ಅಮಿತ್ ಶಾ ಜೀನೆ ಮೈಕ್ ಬಂದ್ ಕರ್ದಿಯಾ' (ಅಮಿತ್ ಶಾ ಮೈಕ್ ಬಂದ್ ಮಾಡಿದರು) ಎಂದು ವ್ಯಂಗ್ಯವಾಗಿ ಹೇಳಿದಾಗ, ಸಭೆ ನಗೆಗಡಲಲ್ಲಿ ತೇಲಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಮಾಡುತ್ತಿದ್ದಾಗ, ದಂಪತಿ ಸಮೇತ ಬಂದಿದ್ದ ಅಮಿತ್ ಶಾ ಜೊತೆ ರಾಹುಲ್ ಉಪಸ್ಥಿತರಿದ್ದರು. ಮೋದಿ-ರಾಹುಲ್-ಅಮಿತ್ ಶಾ ನಡುವೆ ಆರೋಪ, ಪ್ರತ್ಯಾರೋಪಗಳೇನು ಹೊಸದಲ್ಲ, ಆದರೆ ಚುನಾವಣೆಯ ವೇಳೆ ಇದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ನೋಡಬೇಕಿದೆ.

ಧ್ವಜಾರೋಹಣದ ವೇಳೆ ಅಮಿತ್ ಶಾ ಕೈಯಿಂದ ರಾಷ್ಟಧ್ವಜ ನೆಲಕ್ಕೆ ಬಿದ್ದಾಗ..

ಕಳೆದ ಮಾರ್ಚ್ ತಿಂಗಳಲ್ಲಿ, ತ್ರಿಪುರಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡ ನಂತರ, ರಾಹುಲ್ ಗಾಂಧಿ ಇಟೆಲಿಯಲ್ಲಿ ತನ್ನ ಅಜ್ಜಿಯನ್ನು ನೋಡಲು ಹೋಗಿದ್ದರು. ರಾಹುಲ್ ಇಟೆಲಿ ಪ್ರವಾಸದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನನಗೆ ವಾಟ್ಸಾಪ್ ಸಂದೇಶ ಬಂದಿದೆ. ಇಟೆಲಿಯಲ್ಲಿ ಚುನಾವಣೆ ಇದೆ ಎಂದು ಅಮಿತ್ ಶಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ, ಸಿದ್ದರಾಮಯ್ಯನವರ ಹೆಸರು ಬಳಸುವ ಬದಲು, ಯಡಿಯೂರಪ್ಪ ಒಬ್ಬ ಮಹಾನ್ ಭ್ರಷ್ಟ ಎಂದು ಅಮಿತ್ ಶಾ ಬಾಯಿತಪ್ಪಿ ಹೇಳಿದ್ದರು. ಇದರ ಲಾಭವನ್ನು ಪಡೆದುಕೊಂಡ ರಾಹುಲ್ ಗಾಂಧಿ, ಅಮಿತ್ ಶಾ ಕೊನೆಗೂ ನಿಜವನ್ನೇ ಹೇಳಿದ್ದಾರೆಂದು ಚುನಾವಣಾ ಪ್ರಚಾರದ ವೇಳೆ, ಶಾಗೆ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress President Rahul Gandhi says 'Amit Shah ji ne mic off kar diya' (Amit Shah switched off the mic) after his microphone went off during his speech at 'Sanjhi Virasat Bachao Sammelan' in Delhi on August 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more