Chandrayaan-3: ಚಂದ್ರನ ಯೋಜನೆ ಗೆಲುವು.. ಭಾರತಕ್ಕೆ ಹೊಸ ಭವಿಷ್ಯ!
ಬಾಹ್ಯಾಕಾಶ ಎಂದರೆ ಅದೊಂದು ಅನಂತ, ಯಾರ ಹಿಡಿತಕ್ಕೂ ಸಿಗದ ಪ್ರದೇಶ. ಹೀಗಾಗಿ ಜಗತ್ತಿನ ಪ್ರತಿಯೊಂದು ದೇಶವೂ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾವಿರಾರು ಕೂಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬರುತ್ತದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತ ಎಲ್ಲರನ್ನೂ ಮೀರಿಸಿ ಮುಂದಕ್ಕೆ ನುಗ್ಗುತ್ತಿದೆ. ಹೀಗಾಗಿ ಶತಕೋಟಿ ಭಾರತೀಯರು 'ಚಂದ್ರಯಾನ' ಯೋಜನೆ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ, ಶುಭ ಹಾರೈಸುತ್ತಿದ್ದಾರೆ.
ಕಲಾವಿದರ ಕುಂಚದಲ್ಲಿ 'ಚಂದ್ರಯಾನ' ವಿವಿಧ ರೀತಿಯಲ್ಲಿ ಮೂಡಿದೆ. ಅದರಲ್ಲೂ ಈ ಯತ್ನದಲ್ಲಿ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಭಾರತೀಯರ ಹೃದಯ ಗೆದ್ದಿದ್ದಾರೆ. ಕಲಾವಿದ ಸುದರ್ಶನ್ ಪಟ್ನಾಯಕ್ ವಿನೂತನ ಕಲಾಕೃತಿಯ ಮೂಲಕ ಇಸ್ರೋಗೆ ಶುಭ ಹಾರೈಸಿದ್ದಾರೆ. ಹಾಗೇ ಇವರ ಕಲಾಕೃತಿಯಲ್ಲಿ ಮೂಡಿಬಂದ ಕಲ್ಪನೆ ಭಾರತೀಯರ ಮನಸ್ಸು ಗೆದ್ದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಇಳಿಯುವ ರೀತಿ ಕಲಾಕೃತಿ ರಚಿಸಿ, ತ್ರಿವರ್ಣ ಧ್ವಜ ಚಂದ್ರನ ಮೇಲೆ ಹಾರುತ್ತಿರುವುದನ್ನು ಮರಳಿನಲ್ಲಿ ಮೂಡಿಸಲಾಗಿದೆ. ಹಾಗೇ ಆಲ್ ದಿ ಬೆಸ್ಟ್ ಚಂದ್ರಯಾನ & ಜೈ ಹೋ ಇಸ್ರೋ ಎಂದು ಬರೆಯಲಾಗಿದೆ.

ಜಗತ್ತಿನ ವಿವಿಧೆಡೆ ಭಾರತಕ್ಕೆ ಶುಭ ಹಾರೈಕೆ
ಚಂದ್ರನ ಮೇಲೆ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಅಂದರೆ ಇಂದು ಸಂಜೆ, ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಇಸ್ರೊ ಯಶಸ್ಸಿಗೆ ಭಾರತೀಯರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಹಾಗೇ ಜಗತ್ತು ಕೂಡ ಭಾರತದ ಈ ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಿದ್ದು, ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಳ್ಳೆಯ ಸುದ್ದಿ ಸಿಗುವುದು ಬಹುತೇಕ ಪಕ್ಕಾ. ಮನುಷ್ಯರ ಭವಿಷ್ಯ ಚಂದ್ರಯಾನ ಯೋಜನೆ ಮೂಲಕ ಉಜ್ವಲವಾಗುವುದು ಕೂಡ ಗ್ಯಾರಂಟಿ. ಹೀಗಾಗಿ ಜಗತ್ತಿನ ವಿವಿಧೆಡೆಯಿಂದ ಭಾರತಕ್ಕೆ ಶುಭ ಹಾರೈಕೆ ಬಂದಿದೆ.
ಚಂದ್ರನ ಮೇಲೆ ಲ್ಯಾಂಡಿಂಗ್ ಹೇಗೆ?
ಇಸ್ರೋ ಅಂತ್ಯಾಧುನಿಕ ತಂತ್ರಜ್ಞಾನ ಬಳಸಿ ಚಂದ್ರನ ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದ್ದು, ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್‌ಗೆ ಸರಿಯಾದ ಹಾಗೂ ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತದೆ. ಹೀಗೆ ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ನೋಡಬಹುದು. ಇದು ಅಪಾಯದ ಮುನ್ಸೂಚನೆ ನೀಡುವ ಜೊತೆಗೆ ಸಾಕಷ್ಟು ಸಹಕಾರಿ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ಇಸ್ರೋ
ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಈ ಕಾರಣಕ್ಕೆ ಎಚ್ಚರಿಕೆ ವಹಿಸಿದ್ದು, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗಲಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೆಲಸವು ಏನೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್ ಜತೆ ಕೆಲಸ ಮಾಡುತ್ತೆ.

ಒಟ್ನಲ್ಲಿ ಭಾರತದ ಗೆಲುವಿಗಾಗಿ ಇಡೀ ಜಗತ್ತೇ ಪ್ರಾರ್ಥಿಸುತ್ತಿದೆ, ಆದ್ರೆ ಈ ಪ್ರಾರ್ಥನೆಗೆ ಫಲ ಇನ್ನೇನು ಕೆಲ ಕ್ಷಣದಲ್ಲಿ ಸಿಗಲಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಇಸ್ರೋ ವಿಜ್ಞಾನಿಗಳು ಈಗ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದ್ದು ಇಸ್ರೋ ಯೋಜನೆ ಮೇಲೆ ಅಮೆರಿಕ ಮತ್ತು ರಷ್ಯಾ, ಚೀನಾ ಸಹಿತ ಯುರೋಪ್ ರಾಷ್ಟ್ರಗಳು & ಜಗತ್ತಿನ ಶಕ್ತಿಶಾಲಿ ದೇಶಗಳು ಕಣ್ಣಿಟ್ಟು ಕೂತಿವೆ.












Click it and Unblock the Notifications