ದೆಹಲಿಯಿಂದ-ವೈಷ್ಣೋದೇವಿಗೆ ವಿಶೇಷ ರೈಲು ಸಂಚಾರ
ನವದೆಹಲಿ, ಅಕ್ಟೋಬರ್. 30: ಪ್ರವಾಸಿಗರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ವೈಷ್ಣೋದೇವಿ ಕತ್ರಾ ನಿಲ್ದಾಣಕ್ಕೆ ನವೆಂಬರ್ 3ರಿಂದ ವಿಶೇಷ ರೈಲುಗಳು ಸಂಚರಿಸಲಿವೆ.
ನವದೆಹಲಿ-ಶ್ರೀಮಾತಾ ವೈಷ್ಣೋದೇವಿ ಕತ್ರಾ-ನ್ಯೂಡೆಲ್ಲಿ ಎಸಿ ಎಕ್ಸ್ಪ್ರಸ್ ಪ್ರತಿ ಸೋಮವಾರ ಮತ್ತು ಗುರುವಾರ ದೆಹಲಿಯಿಂದ ಬೆಳಗ್ಗೆ 7.50ಕ್ಕೆ ಹೊರಡಲಿದೆ. ಶ್ರೀಮಾತಾ ವೈಷ್ಣೋದೇವಿ ಕತ್ರಾ ನಿಲ್ದಾಣಕ್ಕೆ ಅದೇ ದಿನ ರಾತ್ರಿ 9. 20ಕ್ಕೆ ತಲುಪುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[30 ಸೆಕೆಂಡ್ ನಲ್ಲಿ ತತ್ಕಾಳ್ ಟಿಕೆಟ್ ನುಕ್ ಮಾಡಿ]

ರೈಲುಗಾಡಿಯು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶ್ರೀಮಾತಾ- ವೈಷ್ಣೋದೇವಿ ಕತ್ರಾ ನಿಲ್ದಾಣದಿಂದ ಬೆಳಗ್ಗೆ 5.40ಕ್ಕೆ ಹೊರಟು ಸಂಜೆ 5 ಗಂಟೆಗೆ ನವದೆಹಲಿ ತಲಪುವುದು ಎಂದು ತಿಳಿಸಲಾಗಿದೆ. [ಕುಳಿತಲ್ಲೇ ಶಿಮ್ಲಾ ನೋಡಿಕೊಂಡು ಬನ್ನಿ]
ಈ ವಿಶೇಷ ರೈಲುಗಳು ಪಾಣಿಪತ್, ಲೂಧಿಯಾನಾ, ಜಲಂಧರ್, ಪಠಾಣ್ ಕೋಟ್, ಜಮ್ಮು ತವಿ ಮತ್ತು ಉದ್ದಾಂಪುರ್ ನಿಲ್ದಾಣದಲ್ಲಿ ನಿಲುಗಡೆ ನೀಡಲಿವೆ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications