ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರಿಗೆ ಅಮೆರಿಕ ವೀಸಾ ಪಡೆಯಲು ವಿಶೇಷ ಆದ್ಯತೆ

|
Google Oneindia Kannada News

ನವದೆಹಲಿ, ನವೆಂಬರ್‌ 17: ''ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಿದ್ಯಾರ್ಥಿ ವೀಸಾ ಪಡೆಯುವ ದೇಶವಾಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ'' ಎಂದು ಯುಎಸ್‌ ಕಾನ್ಸುಲ್‌ ಜನರಲ್‌ ಮೈಕ್‌ ಹ್ಯಾಂಕಿ ತಿಳಿಸಿದ್ದಾರೆ.

ಭಾರತೀಯರು ಎಚ್‌1ಬಿ ವೀಸಾಗಳನ್ನು ಪಡೆಯಲು ಡಿಸೆಂಬರ್‌ ಹಾಗೂ ಜನವರಿ ವೇಳೆಗೆ ನಿರೀಕ್ಷಿಸಬಹುದು. ಎಚ್‌1ಬಿ ವೀಸಾವು ಭಾರತೀಯರಿಗೆ 1 ಲಕ್ಷ ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಇದು ಅವರಿಗೆ ಉತ್ತಮ ಸುದ್ದಿಯಾಗಿದೆ. ಅವರು ಅಮೆರಿಕಾದಲ್ಲಿ ಕೆಲಸ ಮಾಡುವ ಕನಸು ನನಸಾಗಲಿದೆ. ಇದರಿಂದ ಎಷ್ಟು ಜನರು ಮುಂದೆ ಬರುತ್ತಾರೆ ನೋಡಬೇಕಿದೆ. ಇದಕ್ಕೆ ಪೂರಕ ದಾಖಲೆಗಳನ್ನು ಅವರು ಒದಗಿಸಬೇಕಾಗುತ್ತದೆ ಎಂದು ಮೈಕ್‌ ಹೇಳಿದರು.

ಭಾರತಕ್ಕೆ 3,000 ವೀಸಾ ಅನುಮೋದಿಸಿದ ರಿಷಿ ಸುನಕ್‌ ಭಾರತಕ್ಕೆ 3,000 ವೀಸಾ ಅನುಮೋದಿಸಿದ ರಿಷಿ ಸುನಕ್‌

2021ರಲ್ಲಿ 82,000 ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿತ್ತು. ಅದು ಕೆಲವು ದಾಖಲೆಗಳನ್ನು ಕೇಳಲಾಗಿತ್ತು. ಅ ಪ್ರಕಿಯೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ಅತಿಹೆಚ್ಚು ವೀಸಾಗಳನ್ನು ನೀಡಲಾಯಿತು. ಸಂದರ್ಶಕರ ವೀಸಾ ಕಾಯುವ ಸಮಯ 100 ದಿನಗಳು ಇರುವುದಿಲ್ಲ. ನಾವು ಸಂದರ್ಶಕರ ವೀಸಾಕ್ಕಾಗಿ ಸಾಕಷ್ಟು ಅನುಕೂಲಗಳನ್ನು ಮಾಡುತ್ತಿದ್ದೇವೆ. ಇದನ್ನು ಮತ್ತಷ್ಟು ಉದಾರಿಯಾಗಿಸುವುದು ನಮ್ಮ ಗುರಿಯಾಗಿದೆ.

Special priority for Indians to get US visa says US Consul General Mike Hankey

ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ

ಸಂದರ್ಶಕರ ವೀಸಾದಲ್ಲಿ ನಮ್ಮ ಆದ್ಯತೆ ವಿದ್ಯಾರ್ಥಿಗಳು, ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ವ್ಯಾಪಾರ ವೀಸಾವಾಗಿದೆ. ನಾವು ಯಾವಾಗಲು ಮಾನವೀಯ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಇದರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಲು ಬಯಸುವವರಿಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ.ಈ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಇದಕ್ಕಾಗಿಯೇ ಹೆಚ್ಚುವರಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಂಬೈನಲ್ಲಿ ನಮ್ಮ ಸಿಬ್ಬಂದಿ ಸಂಖ್ಯೆ ಕೋವಿಡ್‌ ಸಮಯಕ್ಕಿಂತ ಈಗ ಹೆಚ್ಚಾಗಿದೆ. ನಾವು ವಾಷಿಂಗ್‌ಟನ್‌ನಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆತಂದಿದ್ದೇವೆ. ವೀಸಾ ಬೇಡಿಕೆ ಹೆಚ್ಚಿರುವುದರಿಂದ ನಾವು ಈ ಪ್ರದೇಶದಲ್ಲಿ ನಾವು ಹೆಚ್ಚುವರಿ ಸೇವಾ ಕಚೇರಿಗಳನ್ನು ಸಹ ತೆರೆದಿದ್ದೇವೆ ಎಂದು ಹ್ಯಾಂಕಿ ತಿಳಿಸಿದರು.

ಅಮೆರಿಕದ ಐಟಿ ಕಂಪೆನಿಗಳಲ್ಲಿ ವಜಾಗೊಂಡ ಎಚ್‌ಬಿ ವೀಸಾ ಪಡೆದಿರುವ ಭಾರತೀಯರಿಗೆ ಸಂಬಂಧಿಸಿದಂತೆ ಆಂಥ ವ್ಯಕ್ತಿಗಳು ತಮ್ಮ ಸ್ಥಿತಿಗತಿಗಳನ್ನು ಅವಲೋಕಿಸಬೇಕು. ತಾವು ಏನು ಮಾಡಬೇಕು ಎಂದುಕೊಂಡಿದ್ದಾರೋ ಆಲೋಚಿಸಬೇಕು. ಬಳಿಕ ತಮ್ಮ ವಲಸೆ ಸಲಹೆಗಾರರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

English summary
US Consul General Mike Hankey said that India is the country that receives the highest number of student visas in the world and this number will increase further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X