ಕೋಲ್ಕತ್ತಾ ರಸ್ತೆಯಲ್ಲಿ ಮನಕರಗುವ ದೃಶ್ಯ, ನೀರಿನ ಮಧ್ಯೆ ಅಸಹಾಯಕ ಮಹಿಳೆ

Posted By:
Subscribe to Oneindia Kannada

ಮಳೆ ಬರಲಿಲ್ಲ ಅಂದರೆ ಅದು ಖಂಡಿತಾ ಸಹನೀಯವಾದ ಸುದ್ದಿಯಲ್ಲ. ಅದೇ ಮಳೆ ವಿಪರೀತವಾಗಿ ಜನರು ಪರಿತಪಿಸುವುದನ್ನು ಕಂಡರೆ ಏನಂತೀರಾ? ಕೋಲ್ಕತ್ತಾದಲ್ಲಿ ಅಂಥದ್ದೇ ಸ್ಥಿತಿಯಿದೆ. ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದರೆ, ಅನಾರೋಗ್ಯಪೀಡಿತ ಮಹಿಳೆಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ನವಜಾತ ಶಿಶು ಅಂತೀವಲ್ಲ, ಅದೇ ಆಗ ತಾನೇ ಹುಟ್ಟಿದ ಮಗುವಿನ ಸೊಗಸಾದ ಫೋಟೋವೊಂದು ಇಲ್ಲಿದೆ. ಈ ರೀತಿಯ ಫೋಟೋಗ್ರಫಿ ಪಶ್ಚಿಮದ ದೇಶಗಳಲ್ಲಿ ಮಾಮೂಲು. ಆದರೆ ಭಾರತದಲ್ಲಿ ಇನ್ನೂ ಅಷ್ಟೊಂದು ಪ್ರಚಾರ ಪಡೆದಿಲ್ಲ. ಇನ್ನು ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ತ ಮೋದಿ ಒಳ್ಳೆ ಪುಸ್ತಕವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಗುಜರಾತ್ ನಲ್ಲಿ ಪ್ರವಾಹ: 25 ಸಾವಿರಕ್ಕೂ ಅಧಿಕ ಮಂದಿ ರಕ್ಷಣೆ

ಪಂಜಾಬ್ ನ ಅಮೃತ್ ಸರದ ಹಳ್ಳಿಯೊಂದರಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮುತ್ತಾತ ಮೊಹಮ್ಮದ್ ಬಕ್ಷ್ ಸಮಾಧಿ ಇದ್ದು, ವಿದ್ಯಾರ್ಥಿ ಸಂಘಟನೆಯೊಂದು ಅದರ ಚಾದರ ತೆಗೆದು ಆಕ್ರೋಶ ವ್ಯಕ್ತಪಡಿಸಿದೆ. ನಾನಕ್ ಸಿಂಗ್ ಪತ್ತೆಗೆ ಪಾಕಿಸ್ತಾನವನ್ನು ಆಗ್ರಹಿಸಿ ಸಂಘಟನೆಯ ಕಾರ್ಯಕರ್ತರು ಆಕ್ರೋಶ ತೋರಿಸಿದ್ದಾರೆ. ಇನ್ನಷ್ಟು ಸುದ್ದಿ-ಚಿತ್ರ ಇಲ್ಲಿದೆ.

ಬೆಂಕಿ ನಂದಿಸಲು ಸಾಹಸ

ಬೆಂಕಿ ನಂದಿಸಲು ಸಾಹಸ

ನವದೆಹಲಿಯ ಲೋಕ್ ನಾಯಕ್ ಭವನದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಪಡುತ್ತಿದ್ದ ದೃಶ್ಯ.

ರೋಗಿಗಳನ್ನು ಕರೆದೊಯ್ಯಲು ಹರಸಾಹಸ

ರೋಗಿಗಳನ್ನು ಕರೆದೊಯ್ಯಲು ಹರಸಾಹಸ

ಕೋಲ್ಕತ್ತಾದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ಅನಾರೋಗ್ಯದಿಂದ ನರಳುತ್ತಿರುವವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಪ್ರಧಾನಿಯಿಂದ ಪುಸ್ತಕ ಕೊಡುಗೆ

ಪ್ರಧಾನಿಯಿಂದ ಪುಸ್ತಕ ಕೊಡುಗೆ

"Various Reports, 4th Volume of Selected Speeches of the President" ಎಂಬ ಪುಸ್ತಕ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಆದ ನಂತರ ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ರಾಮ್ ನಾಥ್ ಕೋವಿಂದ್ ಚಿತ್ರದಲ್ಲಿದ್ದಾರೆ.

ವಿದ್ಯಾರ್ಥಿ ಸಂಘಟನೆ ಸಿಟ್ಟು

ವಿದ್ಯಾರ್ಥಿ ಸಂಘಟನೆ ಸಿಟ್ಟು

ಪಂಜಾಬ್ ನ ಅಮೃತ್ ಸರದ ಜತ್ತಿ ಉಮ್ರಾ ಹಳ್ಳಿಯಲ್ಲಿರುವ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ರ ಮುತ್ತಾತ ಮೊಹಮ್ಮದ್ ಬಕ್ಷ್ ಸಮಾಧಿಯ ಮೇಲೆ ಹೊದಿಸಿದ್ದ ಚಾದರ್ ತೆಗೆದ ವಿದ್ಯಾರ್ಥಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ಪಾಕಿಸ್ತಾನದ ಸುಪರ್ದಿಯಲ್ಲಿರುವ ನಾನಕ್ ಸಿಂಗ್ ಪತ್ತೆಗಾಗಿ ಆಗ್ರಹಿಸಿದರು.

ಬಾಲಕಿ ರಕ್ಷಣೆ

ಬಾಲಕಿ ರಕ್ಷಣೆ

ಪ್ರವಾಹ ಪೀಡಿತ ಮೊರ್ಬಿ ಹಳ್ಳಿಯಲ್ಲಿ ಬಾಲಕಿಯೊಬ್ಬಳನ್ನು ರಕ್ಷಿಸಿದ ಎನ್ ಡಿಆರ್ ಎಫ್ ಸದಸ್ಯ.

Ram Nath Kovind, 14th Indian President :Few Interesting Facts Said In The Video | Oneindia Kannada
ಪಶ್ಚಿಮ ದೇಶಗಳಲ್ಲಿ ತುಂಬ ಪ್ರಸಿದ್ದಿ

ಪಶ್ಚಿಮ ದೇಶಗಳಲ್ಲಿ ತುಂಬ ಪ್ರಸಿದ್ದಿ

ಆಗ ತಾನೆ ಹುಟ್ಟಿದ ಮಗುವಿನ ಫೋಟೋ ಇದು. ಇಂಥ ಛಾಯಾಗ್ರಹಣ ಪಶ್ಚಿಮದ ದೇಶಗಳಲ್ಲಿ ಬಹಳ ಪ್ರಸಿದ್ಧಿ. ಭಾರತದಲ್ಲಿ ಇನ್ನೂ ಪ್ರಚಲಿತದಲ್ಲಿ ಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pranab Mukherjee, Rain, Delhi fire accident and other national event represent through PTI photos.
Please Wait while comments are loading...