ಅಯೋಧ್ಯೆ ತೀರ್ಪು ಬಂದ ಕೂಡಲೇ ಉಮಾಭಾರತಿ ಮಾಡಿದ ಮೊದಲ ಕೆಲಸ
ನವದೆಹಲಿ, ನ 9: ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕಿದ್ದ ಅಡೆತಡೆ ನಿವಾರಣೆಯಾಗಿದ್ದಕ್ಕೆ, ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಉಮಾ ಭಾರತಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಉಮಾ ಭಾರತಿ, "ನಾನೀಗ ವಿಶ್ವ ಹಿಂದೂ ಪರಿಷತ್ ಕಚೇರಿಯನ್ನು ತಲುಪಿದ್ದೇನೆ ಮತ್ತು ಅಶೋಕ್ ಸಿಂಘಾಲ್ ಅವರಿಗೆ ನಮಸ್ಕರಿಸಿದ್ದೇನೆ, ಅವರನ್ನು ನೆನಪಿಸಿಕೊಂಡಿದ್ದೇನೆ, ನಮಸ್ಕರಿಸಿದ್ದೇನೆ" ಎಂದು ಹೇಳಿದ್ದಾರೆ.
ಇದಾದ ನಂತರ ಆಡ್ವಾಣಿ ಹುಟ್ಟುಹಬ್ಬದ (ನ 8) ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಾ ಟ್ವೀಟ್ ಮಾಡಿರುವ ಉಮಾ ಭಾರತಿ, "ನಾನು ಹಿಮಾಲಯ, ಉತ್ತರಾಖಂಡ, ಗಂಗಾ ತೀರದಿಂದ ದೆಹಲಿಯನ್ನು ತಲುಪಿದ್ದೇನೆ.
ಇಂದು ದೆಹಲಿಯಲ್ಲಿ ಬಿಜೆಪಿ ಅಧಿಕಾರಿಗಳ ಸಭೆ ಇದೆ. ದಾರಿಯಲ್ಲಿ, ಸುಪ್ರೀಂ ನಿರ್ಧಾರವನ್ನು ಕೇಳಿದರೆ, ಮೊದಲು ಆಡ್ವಾಣಿಯವರ ಮನೆಗೆ ತಲುಪಿ, ಅವರಿಗೆ ನಮಸ್ಕರಿಸುತ್ತೇನೆ. ಜೊತೆಗೆ, ಅವರಿಂದ ನಾನು ಕಲಿತದ್ದನ್ನು ಮುಂದುವರಿಸುತ್ತೇನೆ" ಎಂದು ಹೇಳಿದ್ದಾರೆ. ಆಡ್ವಾಣಿಯಿಂದ, ಬಿಜೆಪಿ ಬೆಳೆದು ಬಂದ ರೀತಿ ಮತ್ತು ರಾಮ ಮಂದಿರದ ವಿಚಾರದಲ್ಲಿ, ಉಮಾ ಭಾರತಿ ಸಾಲುಸಾಲು ಟ್ವೀಟ್ ಮಾಡಿದ್ದು ಹೀಗೆ..

ಭಾರತೀಯ ರಾಜಕೀಯದ ದಿಗ್ಗಜ ಆಡ್ವಾಣಿ
"ಭಾರತೀಯ ರಾಜಕೀಯದ ದಿಗ್ಗಜ ಆಡ್ವಾಣಿ ಅವರು ಹುಸಿ ಜಾತ್ಯತೀತತೆ Vs ರಾಷ್ಟ್ರೀಯತೆಯ ಚರ್ಚೆಯನ್ನು ದೇಶದ ರಾಜಕಾರಣದಲ್ಲಿ ಮುನ್ನಲೆಗೆ ತಂದಿದ್ದು. ಆ ಚರ್ಚೆಯೇ, ಅಯೋಧ್ಯೆ ಚಳುವಳಿ ಮುಂದೆ ಬರಲು ಕಾರಣವಾಯಿತು" ಎಂದು ಉಮಾ ಭಾರತಿ ಹೇಳಿದ್ದಾರೆ.

ಹುಸಿ ಜಾತ್ಯತೀತತೆಯ ವಿರುದ್ದ ನಿಂತ ಮೊದಲ ನಾಯಕ ಆಡ್ವಾಣಿ
"ದೇಶದ ರಾಜಕೀಯದಲ್ಲಿ, ಹುಸಿ ಜಾತ್ಯತೀತತೆಯ ವಿರುದ್ದ ನಿಂತ ಮೊದಲ ನಾಯಕ ಆಡ್ವಾಣಿ. ಅವರ ಕಾರಣದಿಂದಾಗಿ, ಇಂದು ಬಿಜೆಪಿ ಅಧಿಕಾರದಲ್ಲಿದೆ. ಜಾತಿ-ಪಂಥ ಮತ್ತು ವರ್ಗ ಬೇಧಕ್ಕಿಂತ ಮೇಲೇರಿ ಜನರು ಮೋದಿಜೀ ಅವರನ್ನು ಬೆಂಬಲಿಸಿದರು" ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.

ಮೋದಿ ಇಡೀ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ
"ಇಂದು ನಮ್ಮ ಪಕ್ಷ ಅಧಿಕಾರದಲ್ಲಿದೆ. ಮೋದಿ ಇಡೀ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಭಾರತ ಇಂದು ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಅಡಿಪಾಯ ಹಾಕಿದ್ದು ನಮ್ಮ ಗೌರವಾನ್ವಿತ ಆಡ್ವಾಣಿ" ಎಂದು ಉಮಾ ಭಾರತಿ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಿಮಾಲಯವನ್ನು ಬಿಟ್ಟು ಬಂದೆ ಎಂದು ನನಗೆ ಅನಿಸುವುದಿಲ್ಲ
"ನಾನು ಆಡ್ವಾಣಿಯವರ ಅವರ ಮುಂದೆ ನಿಂತಾಗ, ಹಿಮಾಲಯವನ್ನು ಬಿಟ್ಟು ಬಂದೆ ಎಂದು ನನಗೆ ಅನಿಸುವುದಿಲ್ಲ, ಏಕೆಂದರೆ ಅವರು ವ್ಯಕ್ತಿತ್ವ ಹಿಮಾಲಯದಂತೆಯೇ ಇರುತ್ತವೆ. ದೇವರು ಅವರನ್ನು ಆಶೀರ್ವದಿಸಲಿ ಮತ್ತು ಅವರಿಗೆ ಇನ್ನೂ ಆರೋಗ್ಯ, ಆಯಸ್ಸನ್ನು ನೀಡಲಿ" ಎಂದು ಅವರ ಹುಟ್ಟಿದ ಹಬ್ಬದ ಸಂದರ್ಭದಲ್ಲಿ, ರಾಮ ಮಂದಿರ ನಿರ್ಮಾಣ ಮತ್ತು ಬಿಜೆಪಿ ಬೆಳೆದು ಬಂದ ರೀತಿಯನ್ನು ಉಮಾ ಭಾರತಿ ಸ್ಮರಿಸಿಕೊಂಡಿದ್ದಾರೆ.

ಅಶೋಕ್ ಸಿಂಘಾಲ್ ಅವರನ್ನು ನೆನಪಿಸಿಕೊಂಡಿದ್ದೇನೆ, ಉಮಾ ಭಾರತಿ
ಪಕ್ಷದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದೆ, ಆದರೆ ಸಭೆ ನಡೆಯಲಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ನಂತರ, ನಾನು ಅಶೋಕ್ ಸಿಂಘಾಲ್ ಅವರನ್ನು ನೆನಪಿಸಿಕೊಂಡು ಅಡ್ವಾಣಿಯನ್ನು ಭೇಟಿಯಾದ ನಂತರ ಹಿಮಾಲಯಕ್ಕೆ ಹಿಂತಿರುಗುತ್ತಿದ್ದೇನೆ" ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications