ಆತ್ಮಚರಿತ್ರೆಯಲ್ಲಿ ಸೋನಿಯಾ ವಿರುದ್ಧ ಪವಾರ್ ಬಾಂಬ್!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 12 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 'ಸರ್ವಾಧಿಕಾರಿ' ಧೋರಣೆ ಕುರಿತಂತೆ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ನಾಯಕ ಶರದ್ ಪವಾರ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ನೀಡಿರುವ 'ಆಘಾತಕಾರಿ' ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.

"(ನನ್ನಂಥ) ಸ್ವತಂತ್ರ ಮನಸ್ಸಿನ ನಾಯಕ ಭಾರತದ ಪ್ರಧಾನಿಯಾಗುವುದು ಸೋನಿಯಾಗೆ ಬೇಕಿರಲಿಲ್ಲ. ಅದಕ್ಕಾಗಿಯೇ 1991ರಲ್ಲಿ ಅವರು ಪಿ.ವಿ. ನರಸಿಂಹ ರಾವ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು" ಎಂಬ ವಿವರಣೆಗಳನ್ನು ಡಿಸೆಂಬರ್ 12ರಂದು 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿರಿಯ ರಾಜಕಾರಣಿ ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ.

'Life on my terms-From the Grassroots and Corridors of Power' ಶೀರ್ಷಿಕೆಯ ಆತ್ಮಚರಿತ್ರೆ, ಪವಾರ್ ಅವರ 75ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಸ್ವತಃ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸಮ್ಮುಖದಲ್ಲಿ ಬಿಡುಗಡೆಯಾಗಿದೆ.

ವಿದೇಶಿಯಾಗಿದ್ದಕ್ಕಾಗಿ ಸೋನಿಯಾ ಅವರನ್ನು 1997ರಲ್ಲಿ ತೀವ್ರವಾಗಿ ವಿರೋಧಿಸಿದ್ದ ಶರದ್ ಪವಾರ್ ಅವರು ಕಾಂಗ್ರೆಸ್ ಜೊತೆಗೆ ಮತ್ತೆ ಕೈಜೋಡಿಸಿದ್ದರು. ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಹತ್ತು ವರ್ಷಗಳ ಕಾಲ ಶರದ್ ಪವಾರ್ ಅವರು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ತಮ್ಮ ಆತ್ಮಚರಿತ್ರೆಯಲ್ಲಿ ಸೋನಿಯಾ ಅವರು ಸರ್ವಾಧಿಕಾರಿ ಧೋರಣೆ ಕುರಿತು ಬರೆದಿರುವ ಅಂಶಗಳು ಕಾಂಗ್ರೆಸ್ ನಲ್ಲಿಯೇ ಅಲ್ಲೋಕಲ್ಲೋಲ ಎಬ್ಬಿಸುವ ಸಾಧ್ಯತೆಗಳಿವೆ. ಆ ಪುಸ್ತಕದಲ್ಲಿನ ಕೆಲ ಅಂಶಗಳನ್ನು ಎಂಬುದನ್ನು ಹಫಿಂಗ್ಟನ್ ಪೋಸ್ಟ್ ಇಲ್ಲಿ ತೆರೆದಿಟ್ಟಿದೆ. [ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ]

ರಾವ್ ಅವರನ್ನು ತಮ್ಮ ವಿರುದ್ಧ ಎತ್ತಿಕಟ್ಟಿದರು

ರಾವ್ ಅವರನ್ನು ತಮ್ಮ ವಿರುದ್ಧ ಎತ್ತಿಕಟ್ಟಿದರು

10 ಜನಪಥ್ ನಿಷ್ಠಾವಂತರು 1991ರಲ್ಲಿ ಪಿವಿ ನರಸಿಂಹ ರಾವ್ ಅವರೇ ಪ್ರಧಾನಿಯಾದರೆ ಒಳ್ಳೆಯದು ಎಂದು ಸೋನಿಯಾ ಅವರಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ, ತಮ್ಮ ವಿರುದ್ಧ ರಾವ್ ಅವರನ್ನು ಎತ್ತಿಕಟ್ಟಿದರು. ಯಾಕೆಂದರೆ ಗಾಂಧಿ ಕುಟುಂಬಕ್ಕೆ ತನ್ನಂಥ ಸ್ವತಂತ್ರ ಬುದ್ಧಿಯ ರಾಜಕಾರಣಿ ಬೇಕಿರಲಿಲ್ಲ ಎಂದು ಪವಾರ್ ತಮ್ಮ ಮನಸ್ಸನ್ನು ಬಿಚ್ಚಿಟ್ಟಿದ್ದಾರೆ.

ಅರ್ಜುನ್ ಸಿಂಗ್ ಜಾಣ ತಂತ್ರಗಾರಿಕೆ

ಅರ್ಜುನ್ ಸಿಂಗ್ ಜಾಣ ತಂತ್ರಗಾರಿಕೆ

ಆ ನಿಷ್ಠಾವಂತರಲ್ಲಿ ದಿವಂಗತ ಅರ್ಜುನ್ ಸಿಂಗ್ ಕೂಡ ಒಬ್ಬರು. ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದ ಅವರು, 'ಜಾಣ ತಂತ್ರಗಾರಿಕೆ' ಪ್ರಯೋಗಿಸಿ ನರಸಿಂಹ್ ರಾವ್ ಅವರನ್ನು ಪ್ರಧಾನಿ ಪಟ್ಟದ ಮೇಲೆ ಕೂರಿಸುವಲ್ಲಿ ಯಶಸ್ವಿಯಾದರು.

ರಾವ್ ಅವರನ್ನು ಬಲವಂತವಾಗಿ ಎಳೆತರಲಾಯಿತು

ರಾವ್ ಅವರನ್ನು ಬಲವಂತವಾಗಿ ಎಳೆತರಲಾಯಿತು

ಅನಾರೋಗ್ಯದ ಕಾರಣ ರಾಜಕೀಯದಿಂದಲೇ ನರಸಿಂಹ ರಾವ್ ಅವರು ಹಿಂದೆ ಸರಿದಿದ್ದರೂ, ರಾಜೀವ್ ಗಾಂಧಿ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ರಾವ್ ಅವರನ್ನು ಮತ್ತೆ ಸಕ್ರೀಯ ರಾಜಕಾರಣಕ್ಕೆ ಎಳೆದು ತರಲಾಯಿತು.

ಸೋನಿಯಾ ಕಿವಿಯೂದಿದ ನಿಷ್ಠಾವಂತರು

ಸೋನಿಯಾ ಕಿವಿಯೂದಿದ ನಿಷ್ಠಾವಂತರು

ಶರದ್ ಪವಾರ್ ಪ್ರಧಾನಿಯಾದರೆ ಗಾಂಧಿ ಕುಟುಂಬಕ್ಕೆ ಹಿನ್ನಡೆಯಾಗಬಲ್ಲದು ಎಂದು ಕೆಲ ಸ್ವಯಂಘೋಷಿತ 'ನಿಷ್ಠಾವಂತ'ರು ಖಾಸಗಿಯಾಗಿ ಮಾತುಕತೆ ನಡೆಸಿ ಸೋನಿಯಾ ಗಾಂಧಿ ಅವರ ಕಿವಿಯೂದಿದರು. ಅದರಂತೆಯೇ ಅವರು ನಡೆದುಕೊಂಡರು.

ಸುದೀರ್ಘ ರೇಸ್ ಓಡುವ ಕುದುರೆ

ಸುದೀರ್ಘ ರೇಸ್ ಓಡುವ ಕುದುರೆ

ಅವರು ಕಿರಿಯ ವಯಸ್ಸಿನವರಾಗಿದ್ದರಿಂದ ಅದು ಸುದೀರ್ಘ ರೇಸ್ ಓಡುವ ಕುದುರೆ ಎಂಬುದು ನನ್ನನ್ನು ಬದಿಗೆ ಸರಿಸಲು ಅವರು ನೀಡಿದ ಕಾರಣವಾಗಿತ್ತು. ಇಂಥ ತಂತ್ರಗಾರಿಕೆ ಮಾಡಿದವರು ಎಂಎಲ್ ಫೋತೆದಾರ್, ಆರ್ ಕೆ ಧವನ್, ಅರ್ಜುನ್ ಸಿಂಗ್ ಮತ್ತು ವಿ ಜಾರ್ಜ್.

ರಾವ್ ಪ್ರಧಾನಿಯಾಗುವುದೇ ಸುರಕ್ಷಿತ

ರಾವ್ ಪ್ರಧಾನಿಯಾಗುವುದೇ ಸುರಕ್ಷಿತ

ರಾವ್ ಅವರಿಗೆ ಸಾಕಷ್ಟು ವಯಸ್ಸಾಗಿದ್ದರಿಂದ ಮತ್ತು ಅವರ ಆರೋಗ್ಯ ಅತ್ಯುತ್ತಮ ಸ್ಥಿತಿಯಲ್ಲಿ ಇಲ್ಲದ್ದರಿಂದ ಅವರೇ ಪ್ರಧಾನಿಯಾಗುವುದು 'ಸುರಕ್ಷಿತ' ಎಂದು ಸೋನಿಯಾಗೆ ಅವರು ಮನವರಿಕೆ ಮಾಡಿಕೊಟ್ಟರು. ಸೋನಿಯಾ ಕೂಡ ಅದೇ ಮಂತ್ರ ಹೇಳಲು ಶುರುಮಾಡಿದರು.

ತದ್ವಿರುದ್ಧ ನಿರ್ಣಯ ಸೋನಿಯಾ ತೆಗೆದುಕೊಳ್ಳುತ್ತಿದ್ದರು

ತದ್ವಿರುದ್ಧ ನಿರ್ಣಯ ಸೋನಿಯಾ ತೆಗೆದುಕೊಳ್ಳುತ್ತಿದ್ದರು

ಸೋನಿಯಾ ಹೆಚ್ಚಿಗೆ ಮಾತಾಡುತ್ತಿರಲಿಲ್ಲ. ಆದರೆ, ನನ್ನ ವಿರುದ್ಧ ಅವರು ನಿಂತಿದ್ದು ಅವರ ಕ್ರಿಯೆಗಳಲ್ಲಿ ವೇದ್ಯವಾಗುತ್ತಿತ್ತು. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ತದ್ವಿರುದ್ಧವಾದ ನಿರ್ಣಯವನ್ನು ಅವರು ತೆಗೆದುಕೊಳ್ಳುತ್ತಿದ್ದರು.

ಸೋನಿಯಾ ಕನಿಷ್ಠ ಸಂಸದೆ ಕೂಡ ಆಗಿರಲಿಲ್ಲ

ಸೋನಿಯಾ ಕನಿಷ್ಠ ಸಂಸದೆ ಕೂಡ ಆಗಿರಲಿಲ್ಲ

ಮುಂದೆ ಸೋನಿಯಾಗೆ ಅನುಕೂಲವಾಗುವಂತೆ ಕಾಂಗ್ರೆಸ್ ಸಂಸದೀಯ ಪಕ್ಷಕ್ಕೆ ತಂದ ಕೆಲ ಬದಲಾವಣೆಗಳು ನನ್ನನ್ನು ಭಾರೀ ಆಘಾತಕ್ಕೆ ತಳ್ಳಿದವು. ಆಗ, ನಾನು ಸಂಸದ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನಾಗಿದ್ದಾಗಲೂ ಸೋನಿಯಾ ಕನಿಷ್ಠ ಸಂಸದೆ ಕೂಡ ಆಗಿರಲಿಲ್ಲ.

ಕಾಂಗ್ರೆಸ್ ಇತಿಹಾಸದಲ್ಲಿ ಇಂಥತ್ತು ನಡೆದಿರಲಿಲ್ಲ

ಕಾಂಗ್ರೆಸ್ ಇತಿಹಾಸದಲ್ಲಿ ಇಂಥತ್ತು ನಡೆದಿರಲಿಲ್ಲ

ಇದು (ಸೋನಿಯಾ ನಾಯಕಿ ಆಗಿದ್ದು) ನನಗೆ ಆಘಾತ ಮತ್ತು ನೋವು ತಂದಿತು. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ ಲೋಕಸಭೆ ಸದಸ್ಯನಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನನ್ನಾಗಿ ಮಾಡಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some of the revelations by Sharad Pawar in his book 'Life on my terms-From the Grassroots and Corridors of Power', which was released as part of his 75th birthday celebrations, may make the eyes of Sonia Gandhi red. Pawar has stated that Sonia never wanted an independent thinking person as prime minister. So she made PV Narasimha Rao as PM after Rajiv was assasinated.
Please Wait while comments are loading...