ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ವಿಧಿವಶ

|
Google Oneindia Kannada News

ನವದೆಹಲಿ, ಆಗಸ್ಟ್ 31: ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ವಿಧಿವಶರಾದರು. ಇಟಲಿಯಲ್ಲಿನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಸೋನಿಯಾ ಗಾಂಧಿ ತಾಯಿ, ಸಂಸದ ರಾಹುಲ್ ಗಾಂಧಿ ಅಜ್ಜಿ ಪಾವೊಲಾ ಮೈನೋ ಆಗಸ್ಟ್ 27ರಂದು ನಿಧನರಾಗಿದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆದಿದೆ.

ಎಐಸಿಸಿ ಅಧ್ಯಕ್ಷರಾಗುವಂತೆ ರಾಹುಲ್‌ ಗಾಂಧಿಯವರನ್ನು ಒತ್ತಾಯಿಸುತ್ತೇವೆ: ಮಲ್ಲಿಕಾರ್ಜುನ್‌ ಖರ್ಗೆ ಎಐಸಿಸಿ ಅಧ್ಯಕ್ಷರಾಗುವಂತೆ ರಾಹುಲ್‌ ಗಾಂಧಿಯವರನ್ನು ಒತ್ತಾಯಿಸುತ್ತೇವೆ: ಮಲ್ಲಿಕಾರ್ಜುನ್‌ ಖರ್ಗೆ

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಗಾಗಿ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ್ದು, ರಾಹುಲ್ ಗಾಂಧಿ ಸಹ ಅವರ ಜೊತೆ ಇದ್ದಾರೆ.

ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದ ಸೋನಿಯಾ ಆಪ್ತನ ಮಗಳು!ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದ ಸೋನಿಯಾ ಆಪ್ತನ ಮಗಳು!

Sonia Gandhis Mother Paola Maino No More

ತಮ್ಮ ಟ್ವೀಟ್‌ನಲ್ಲಿ ಜೈರಾಮ್ ರಮೇಶ್, 'ಶ್ರೀಮತಿ ಸೋನಿಯಾ ಗಾಂಧಿಯವರ ತಾಯಿ, ಶ್ರೀಮತಿ ಪಾವೊಲಾ ಮೈನೋ ಅವರು 27 ಆಗಸ್ಟ್ 2022 ರಂದು ಶನಿವಾರ ಇಟಲಿಯಲ್ಲಿ ತಮ್ಮ ಮನೆಯಲ್ಲಿ ನಿಧನರಾದರು. ಅಂತ್ಯಕ್ರಿಯೆ ನಿನ್ನೆ ನಡೆಯಿತು' ಎಂದು ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ನಿಗಿ ನಿಗಿ ಕೆಂಡವಾದ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ನಿಗಿ ನಿಗಿ ಕೆಂಡವಾದ ಸೋನಿಯಾ ಗಾಂಧಿ

ವಿದೇಶದಲ್ಲಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಎಂದು ನವದೆಹಲಿಗೆ ವಾಪಸ್ ಆಗಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ದೆಹಲಿಯಲ್ಲಿ ಸೆಪ್ಟೆಂಬರ್ 4ರಂದು ನಡೆಯಲಿರುವ 'ಮೆಹೆಂಗೈ ಪರ್ ಹಲ್ಲಾ ಬೋಲ್' ಜಾಥಾ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂಬ ಮಾಹಿತಿ ಇದೆ.

ಭಾನುವಾರ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ನಡೆದಿತ್ತು. ಸೋನಿಯಾ ಗಾಂಧಿ ವಿದೇಶದಿಂದಲೇ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಗತ್ಯವಿದ್ದರೆ ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್ ಪಕ್ಷ ಕಾಶ್ಮೀರದಿಂದ ಕನ್ಯಾಕುಮಾರಿ ತನಕ 'ಭಾರತ್ ಜೋಡೋ' ಯಾತ್ರೆಗೆ ತಯಾರಿ ನಡೆಸಿದೆ. ಸೆಪ್ಟೆಂಬರ್ 7ರಂದು ಈ ಯಾತ್ರೆಗೆ ಚಾಲನೆ ಸಿಗಲಿದೆ. 3500 ಕಿ. ಮೀ.ಗಳ ದೊಡ್ಡ ಪಾದಯಾತ್ರೆ ಇದಾಗಿದೆ. ಸುಮಾರು 150 ದಿನಗಳ ಕಾಲ ನಡೆಯುವ ಬೃಹತ್ ಪಾದಯಾತ್ರೆ ನಡೆಯಲಿದೆ.

English summary
AICC president Sonia Gandhi's mother Paola Maino passed away at her residence in Italy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X