ರಾಜಕೀಯವಾಗಿ ದುರ್ಬಳಕೆಯಾದ ಸರ್ಜಿಕಲ್ ಸ್ಟ್ರೈಕ್: ಮೋದಿ
ಕಳೆದ ವರ್ಷ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ವಿಚಾರವನ್ನು ಕೆಲವರು ರಾಜಕೀಯವಾಗಿ ಬಳಸಿಕೊಂಡರು ಎಂದು ಪ್ರಧಾನಿ ನರೇಂದ್ರ ಮೋದಿ ಖೇದ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜವೂನ್ ಪುರದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡವರ ತಪ್ಪು ಅಕ್ಷಮ್ಯ ಎಂದರು.
ಶುಕ್ರವಾರ ಬೆಳಗ್ಗೆಯೇ ವಾರಣಾಸಿಗೆ ಆಗಮಿಸಿದ್ದ ಮೋದಿ, ಬನಾರಸ್ ಹಿಂದೂ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದರಲ್ಲದೆ ಅಲ್ಲಿ ಸುಮಾರು 1 ಗಂಟೆಯ ಕಾಲ ವಿಶ್ರಾಂತಿ ಪಡೆದರು.
ಆನಂತರ, ಪುರಾಣ ಪ್ರಸಿದ್ಧ ಕಾಶಿ ವಿಶ್ವನಾಥೇಶ್ವರ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಆನಂತರ ರೋಡ್ ಶೋನಲ್ಲಿ ಪಾಲ್ಗೊಂಡರು. ಸುಮಾರು 10 ಕಿಮೀ.ಗಳಷ್ಟು ರೋಡ್ ಶೋ ನಡೆಸಿದ ಅವರು, ಆನಂತರ ಜವೂನ್ ಪುರದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಲ್ಲಿ ಅವರ ಮಾಡಿದ ಭಾಷಣದ ಹೈಲೈಟ್ಸ್, ರೋಡ್ ಶೋನ ಫೋಟೋಗಳೊಂದಿಗೆ ಇಲ್ಲಿ ನಿಮಗಾಗಿ....

ಅತ್ಯಂತ ಜಾಣತನ ಕಾರ್ಯಾಚರಣೆ ಅದು
- ಚರಿತ್ರೆಯನ್ನು ತನ್ನ ಗರ್ಭದಲ್ಲಿಟ್ಟುಕೊಂಡಿರುವ ಜವೂನ್ ಪುರದ ಈ ನೆಲಕ್ಕೆ ನಾನು ಶಿರಬಾಗಿಸಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
- ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರರ ನೆಲೆಗಳನ್ನು ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಧ್ವಂಸ ಮಾಡಿದ ಬಂದ ನಮ್ಮ ಸೇನೆಯ ಶೌರ್ಯವನ್ನು ಮೆಚ್ಚಲೇ ಬೇಕು.
- ಈ ಕಾರ್ಯಾಚರಣೆಯನ್ನು ಪ್ರತಿ ನಿಮಿಷದ ಪ್ಲಾನ್ ಅನ್ನೂ ಮೊದಲೇ ನಿರ್ಧರಿಸಲಾಗಿತ್ತು.

ಸೈನಿಕರ ಕನಸು ನನಸಾಗಿದೆ
- ಸರ್ಜಿಕಲ್ ಸ್ಟ್ರೈಕ್ ಅನ್ನು ಇಡೀ ವಿಶ್ವವೇ ಅಧ್ಯಯನ ಮಾಡಿ ಸೈ ಎಂದಿತು.
- ಸುಮಾರು 40 ವರ್ಷಗಳಿಂದ ಭಾರತೀಯ ಸೈನಿಕರು 'ಒನ್ ರ್ಯಾಂಕ್, ಒನ್ ಪೆನ್ಷನ್' ಗಾಗಿ ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಈವರೆಗೆ ಏನೂ ಆಗಿರಲಿಲ್ಲ. ಆದರೆ, ನಮ್ಮ ಸರ್ಕಾರ, ಸೈನಿಕರ ಆ ಕನಸನ್ನು ನನಸು ಮಾಡಿದೆ.

ವಿಶೇಷವಾಗಿರಲಿದೆಯೇ ಈ ಬಾರಿಯ ಹೋಳಿ?
- ಶೀಘ್ರದಲ್ಲೇ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆಗ, ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷಗಳ ಬಗೆಗಿನ ಜನರ ತೀರ್ಪು ಬಹಿರಂಗವಾಗಲಿದೆ. ಇದೇ ವೇಳೆ, ಬಿಜೆಪಿ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರಲಿದೆ.
- ಇದೇ 13ರಂದು ಇಡೀ ಉತ್ತರ ಪ್ರದೇಶ ಹೋಲಿ ಹಬ್ಬವನ್ನು ಆಚರಿಸುತ್ತದೆ. ನಾನು ಹೇಳುತ್ತೇನೆ, ಈ ಬಾರಿಯ ಹೋಳಿ ಹಬ್ಬ ಬಿಜೆಪಿ ಅಧಿಕಾರ ಹಿಡಿಯುವ ಸಂಕೇತವಾಗಿರುತ್ತದೆ.

ಪಾರದರ್ಶಕ ಸರ್ಕಾರಕ್ಕೆ ಆದ್ಯತೆ
- ಬಿಜೆಪಿಗೆ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ರಕ್ಷಣೆ ನೀಡುವತ್ತ ಮೊದಲ ಆದ್ಯತೆ ನೀಡುತ್ತೇವೆ.
-ಸಣ್ಣ ರೈತರ ಸಾಲ ಮನ್ನಾ ಮಾಡುತ್ತೇವೆ.
- ನೀವು ನನಗೆ (ಬಿಜೆಪಿ) ಬಹುಮತ ತಂದುಕೊಟ್ಟರೆ, ನಾನು ನಿಮಗೆ ಪಾರದರ್ಶಕ ಸರ್ಕಾರವನ್ನು ನೀಡುತ್ತೇನೆ.
- ನೀವೆಂದಾದರೂ ದಿನದ 24 ಗಂಟೆ ನಿರಂತರ ವಿದ್ಯುತ್ ನೋಡಿದ್ದೀರಾ? ಇಲ್ಲ ತಾನೇ? ಈ ಬಾರಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದರೆ ನಿರಂತರವಾಗಿ 24 ಗಂಟೆ ವಿದ್ಯುತ್ ಸರಬರಾಜು ಇರುವ ಸೌಕರ್ಯವು ನಿಮ್ಮದಾಗುತ್ತದೆ.

ದುರವಸ್ಥೆಯಿಂದ ಕಾಪಾಡುತ್ತೇನೆ
- ಜವೂನ್ ಪುರದಲ್ಲಿ ಸಂಜೆ ಕತ್ತಲಾದ ನಂತರ, ನಿಮ್ಮ ತಾಯಂದಿರು ಸೇರಿದಂತೆ ನಿಮ್ಮ ಮನೆಯ ಹೆಣ್ಣು ಮಕ್ಕಳು ನಿರ್ಭಯವಾಗಿ ಮನೆಯಿಂದ ಹೊರ ಹೋಗಿ ಬರುವ ಸ್ವಾತಂತ್ರ್ಯವನ್ನು ನಾನು ತಂದುಕೊಡುತ್ತೇನೆ.
- ನಿಮ್ಮ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭ್ರಷ್ಚಾಚಾರಿಗಳನ್ನು, ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ. ಅತ್ಯಾಚಾರದ ಆರೋಪಿಯಾದ ಸಮಾಜವಾದಿ ಪಕ್ಷದ ಶಾಸಕ ಪ್ರಜಾಪತಿಯವರ ರಕ್ಷಣೆಗೆ ನಿಂತಿದ್ದಾರೆ.
- ಇಂಥ ದುರವಸ್ಥೆಯಿಂದ ನಾನು ನಿಮ್ಮನ್ನು ಕಾಪಾಡಬಯಸುತ್ತೇನೆ.












Click it and Unblock the Notifications