ಮಹಾರಾಷ್ಟ್ರ ಚುನಾವಣೆ: ಶರದ್ ಪವಾರ್‌ಗೆ ತಲೆನೋವು ತಂದ ಪಕ್ಷದ ನಾಯಕರು!

ಮುಂಬೈ, ಸೆಪ್ಟೆಂಬರ್ 15: ಈ ವರ್ಷದ ಅಂತ್ಯದಲ್ಲಿ ನಡೆಯುವ ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ವಿವಿಧ ಕಾರಣಕ್ಕೆ ಕುತೂಹಲವನ್ನು ಮೂಡಿಸಿದೆ. 288 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಕೇಂದ್ರಬಿಂದು. ಎರಡು ಭಾಗವಾಗಿರುವ ಎನ್‌ಸಿಪಿ ಪಕ್ಷವನ್ನು ಒಗ್ಗೂಡಿಸಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲವು ಪ್ರಮುಖ ನಾಯಕರು ಅವರ ಜೊತೆ ಕೈ ಜೋಡಿಸಲು ನಿರಾಕರಿಸುತ್ತಿರುವುದು ಅವರಿಗೆ ತಲೆನೋವು ತಂದಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಸದ್ಯ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಈಗಾಗಲೇ ಮೈತ್ರಿಕೂಟ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಎಲ್ಲಾ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದು, ಶರದ್ ಪವಾರ್ ಗುಂಪಿಗೆ ಅವರು ಹೋಗದಂತೆ ತಡೆಯುತ್ತಿದ್ದಾರೆ.

Some Leaders Not Ready To Join Hands With Sharad Pawar Lead NCP

ಮತ್ತೊಂದು ಕಡೆ ಮಹಾರಾಷ್ಟ್ರದ ವಿರೋಧ ಪಕ್ಷಗಳು 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಚುನಾವಣೆ ಎದುರಿಸುವ ತಯಾರಿ ನಡೆಸಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಮೈತ್ರಿಕೂಟ ಅಧಿಕಾರ ಹಿಡಿಯಬಹುದು ಎಂದು ಅಂದಾಜಿಸಿದ್ದು, ನಾಯಕರ ವಿಶ್ವಾಸವನ್ನು ಹೆಚ್ಚಿಸಿದೆ.

ಪಕ್ಷವನ್ನು ಒಂದೂಗೂಡಿಸುವ ಪ್ರಯತ್ನ: ಎನ್‌ಸಿಪಿ ಪಕ್ಷ ಎರಡು ಭಾಗವಾಗಿದೆ. ಅಜಿತ್ ಪವಾರ್ 2023ರಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದರು. 'ಮಹಾಯುತಿ' ಮೈತ್ರಿಕೂಟದ ಸರ್ಕಾರದಲ್ಲಿ ಅವರು ಈಗ ಉಪಮುಖ್ಯಮಂತ್ರಿ. ಶಾಸಕರ ಬೆಂಬಲ ಹೆಚ್ಚಿದ್ದ ಕಾರಣಕ್ಕೆ ಚುನಾವಣಾ ಆಯೋಗ ಎನ್‌ಸಿಪಿ ಪಕ್ಷದ ಚಿಹ್ನೆಯನ್ನು ಅಜಿತ್ ಪವಾರ್ ಬಣಕ್ಕೆ ನೀಡಿದೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶರದ್ ಪವಾರ್ ಪಕ್ಷವನ್ನು ಒಂದುಗೂಡಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಅಜಿತ್ ಪವಾರ್ ಬಣದ ಪ್ರಮುಖ ನಾಯಕರು ಶರದ್ ಪವಾರ್ ಜೊತೆ ಹೋಗಲು ಒಪ್ಪುತ್ತಿಲ್ಲ. ಆದರೆ ಯಾವುದೇ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಶರದ್ ಪವಾರ್ ಬಣದಲ್ಲಿ ಟಿಕೆಟ್ ಪಡೆಯಬಹುದು ಎಂಬ ಮಾತುಗಳು ಶಾಸಕರ ವಲಯದಲ್ಲಿ ಕೇಳಿ ಬರುತ್ತಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ (ಎನ್‌ಸಿಪಿ) ಬಣದ ಐವರು ಹಿರಿಯ ನಾಯಕರು ಶರದ್ ಪವಾರ್ ಜೊತೆ ಸೇರಿದ್ದರು. ಆದ್ದರಿಂದ 'ಮಹಾಯುತಿ' ಮೈತ್ರಿಕೂಟದ ಹಲವು ನಾಯಕರು ತಮ್ಮ ಜೊತೆ ಬರಲಿದ್ದಾರೆ ಎಂಬ ನಿರೀಕ್ಷೆಯನ್ನು ಶರದ್ ಪವಾರ್ ಹೊಂದಿದ್ದರು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಜಿತ್ ಪವಾರ್ ನಾಯಕರನ್ನು ಉಳಿಸಿಕೊಳ್ಳಲು ಟಿಕೆಟ್ ಭರವಸೆಯನ್ನು ನೀಡುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದು ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಹೆಚ್ಚಿನ ನಾಯಕರು ಪಕ್ಷಕ್ಕೆ ವಾಪಸ್ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಶರದ್ ಪವಾರ್ ಇದ್ದಾರೆ. 'ಮಹಾಯುತಿ' ಮೈತ್ರಿಕೂಟದಲ್ಲಿ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ ಗೆದ್ದಿದ್ದು ಕೇವಲ ಒಂದು ಸೀಟು.

ಆದರೆ ವಿಧಾನಸಭೆ ಚುನಾವಣೆ ಲೆಕ್ಕಾಚಾರವೇ ಬೇರೆ. ಹಲವು ನಾಯಕರಿಗೆ ಅಜಿತ್ ಪವಾರ್ ಬಣದಲ್ಲಿ ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ. 'ಮಹಾಯುತಿ' ಮೈತ್ರಿಕೂಟದ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದ್ದು, ಎನ್‌ಸಿಪಿಗೆ 55 ಸೀಟು ಸಿಗುವ ನಿರೀಕ್ಷೆ ಇದೆ. ಆದ್ದರಿಂದ ಶರದ್ ಪವಾರ್ ಬಣಕ್ಕೆ ಜಿಗಿಯಲು ಶಾಸಕರು ಸಹ ಆಲೋಚಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+