ಪಾಕ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಸೈನಿಕ ಹುತಾತ್ಮ
ಜಮ್ಮು, ಜನವರಿ 24: ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಸೇನೆಯ ಜಗದೀಶ್(34) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಜಮ್ಮುವಿನ ಕೃಷ್ಣ ಘಾಟಿ ವಿಭಾಗದಲ್ಲಿ ಜ.20 ರಂದು ನಡೆಸಿದ ದಾಳಿಯಲ್ಲಿ ಜಗದೀಶ್ ಅವರು ತೀವ್ರವಾಗಿ ಗಾಯಗೊಡಿದ್ದರು. ನಂತರ ಅವರನ್ನು ಇಲ್ಲಿನ ಮಿಲಿಟರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿತ್ತು.

ಮೂಲತಃ ಚಮೋಲಿ ಜಿಲ್ಲೆಯವರಾದ ಜಗದೀಶ್, ಪತ್ನಿ ಉಷಾ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಜ.20 ರಂದು ಬೆಳಿಗ್ಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಪರಿಣಾಮ ಅಂದೇ ಓರ್ವ ಸೈನಿಕ ಹುತಾತ್ಮರಾಗಿದ್ದರು.











Click it and Unblock the Notifications