ಸೋಲಾರ್ ಹಗರಣ: ಮಾಜಿ ಸಿಎಂ ಚಾಂಡಿ ವಿರುದ್ಧ ತನಿಖೆಗೆ ಆದೇಶ

Posted By:
Subscribe to Oneindia Kannada

ಕೊಚ್ಚಿ, ಡಿಸೆಂಬರ್ 23: ಸೋಲಾರ್ ಪ್ಯಾನಲ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ವಿರುದ್ಧ ತನಿಖೆಗೆ ತಿರುವನಂತಪುರಮ್ ಜಾಗೃತಾದಳ ನ್ಯಾಯಾಲಯ (ವಿಜಿಲೆನ್ಸ್ ಕೋರ್ಟ್) ಆದೇಶ ನೀಡಿದೆ.

ಯುಡಿಎಫ್ ಸರ್ಕಾರದ ಅವಧಿಯಲ್ಲಿ ಸ್ವಜನ ಪಕ್ಷಪಾತ, ಸೋಲಾರ್ ಹಗರಣದ ಆರೋಪ ಹೊತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಮತ್ತು ಸಂಯುಕ್ತ ಪ್ರಜಾತಾಂತ್ರಿಕ ರಂಗದ (ಯುಡಿಎಫ್) 9 ನಾಯಕರ ವಿರುದ್ಧ ತನಿಖೆಗೆ ಜಸ್ಟೀಸ್ ಶಿವರಾಜನ್ ಆದೇಶ ನೀಡಿದ್ದಾರೆ. ಈಗ ಕಾಂಗ್ರೆಸ್ ನಾಯಕ ಚಾಂಡಿ ಅವರು ವಿಚಾರಣೆ ಎದುರಿಸಬೇಕಿದೆ.

Solar panel scam: Oommen Chandy to be cross examined before judicial commission

ಪಿಎಸ್ ಯುಗಳಿಗೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ಇಂತಹ ನೇಮಕಾತಿಗಳ ಬಗ್ಗೆ ಜಾಗೃತಾ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಿದ್ದು, ಅಕ್ಟೋಬರ್ 23, 2013ರಂದು ಹಗರಣದ ತನಿಖೆಗೆ ಕೇರಳದ ಹೈಕೋರ್ಟ್ ಆದೇಶಿಸಿತ್ತು.

ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್ ನಾಯರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಪತ್ನಿಯನ್ನು ಕೊಂದ ಆರೋಪದ ಮೇಲೆ ಬಿಜು ಸದ್ಯ ಜೈಲಿನಲ್ಲಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Kerala Chief Minister Oommen Chandy today(December 23) deposed before a judicial commission probing charges in the solar panel scam, allegedly linked to his staff.
Please Wait while comments are loading...