• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭವಿಷ್ಯ: ಎರಡು ಚಂದ್ರಗ್ರಹಣದ ಮಧ್ಯೆ ಸೂರ್ಯಗ್ರಹಣ, ಪ್ರಮುಖ ನಾಯಕನ ಸಾವು!

|

ಜೂನ್ 6ಕ್ಕೆ ಈಗಾಗಲೇ ಒಂದು ಚಂದ್ರ ಗ್ರಹಣ ಸಂಭವಿಸಿದೆ, ಜುಲೈ ನಾಲ್ಕಕ್ಕೆ ಇನ್ನೊಂದು ಚಂದ್ರಗ್ರಹಣ ಸಂಭವಿಸಲಿದೆ. ಇವೆರಡರ ಮಧ್ಯೆ ಅಂದರೆ ಬರುವ ಜೂನ್ 21ಕ್ಕೆ ಸೂರ್ಯಗ್ರಹಣವಿರಲಿದೆ. ಸೂರ್ಯಗ್ರಹಣ ಮಿಥುನ ರಾಶಿಯಲ್ಲಿ ಸಂಭವಿಸಲಿದೆ.

   India to witness solar eclipse on June 21 | Solar Eclipse | Oneindia Kannada

   "ಮಿಥುನ ರಾಶಿಯವರಿಗೆ ಮತ್ತು ಮೃಗಶಿರಾ ನಕ್ಷತ್ರದವರೆಗೆ ಮಾತ್ರ ಈ ಸೂರ್ಯ ಗ್ರಹಣದಿಂದ ತೊಂದರೆಯಾಗಲಿದೆ" ಎನ್ನುವುದು ತಪ್ಪು ಎಂದು ಖ್ಯಾತ ಜ್ಯೋತಿಷಿ ಮನೀಜಾ ಅಹುಜಾ ಅಭಿಪ್ರಾಯ ಪಟಿದ್ದಾರೆ.

   ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?

   ಸಾಮಾನ್ಯವಾಗಿ ಗ್ರಹಣ ಸಂಭವಿಸುವಾಗ ಆಯಾಯ ರಾಶಿ, ನಕ್ಷತ್ರದವರೆಗೆ ಇದರಿಂದ ಒಳಿತಾಗಲಿದೆಯೇ ಅಥವಾ ಕೆಡುಕಾಗಲಿದಿಯೇ ಎನ್ನುವುದಕ್ಕಿಂತ, ರಾಜ್ಯ ಮತ್ತು ದೇಶಕ್ಕೆ ಇದರ ಪರಿಣಾಮ ಏನು ಎನ್ನುವುದನ್ನು ನೋಡಬೇಕಾಗುತ್ತದೆ ಎಂದು ಅಹುಜಾ ಹೇಳುತ್ತಾರೆ.

   ಜೂನ್ 21, 2020ಕ್ಕೆ ಜಗತ್ತೇ ನಾಶ-ಮಾಯನ್ ಕ್ಯಾಲೆಂಡರ್ ಭವಿಷ್ಯ!

   "ಯಾವುದಾದರೂ ದೇಶ ಇನ್ನೊಂದು ದೇಶದ ಮೇಲೆ ಆಕ್ರಮಣ ನಡೆಸಿದರೆ, ಪ್ರತಿಯೊಬ್ಬರ ಜಾತಕವನ್ನು ನೋಡಿ ಭವಿಷ್ಯವನ್ನು ಹೇಳಲು ಸಾಧ್ಯವಿಲ್ಲ. ಬದಲಿಗೆ, ಗ್ರಹ/ರಾಶಿ ಯಾವ ಕುಂಡಲಿಯಲ್ಲಿ ಇದೆ ಎಂದು ನೋಡಿ, ಒಟ್ಟಾರೆಯಾಗಿ ಭವಿಷ್ಯ ಹೇಳಬಹುದು" ಎಂದು ಅಹುಜಾ ಹೇಳಿದ್ದಾರೆ.

   ಜೂನ್ 21 ಖಂಡಗ್ರಾಸ ಸೂರ್ಯಗ್ರಹಣ: ಮನುಕುಲಕ್ಕೆ ಮಾರಕವೇ? ಇಲ್ಲಿದೆ ಭವಿಷ್ಯ

   2020ರ ವರ್ಷದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗಲಿವೆ

   2020ರ ವರ್ಷದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗಲಿವೆ

   2020ರ ವರ್ಷದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗಲಿವೆ ಎಂದು ಹಿಂದೆನೂ ಹೇಳಿದ್ದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮಂತ್ರ, ದೇವರ ಸ್ಮರಣೆ ಯಾವತ್ತೂ ಮನುಷ್ಯನಿಗೆ ಒಳಿತನ್ನು ಮಾಡುತ್ತದೆ. ಜೂನ್ 2020 ರಿಂದ ಮಾರ್ಚ್ 2021ರವರೆಗೆ ವಿಶ್ವದಲ್ಲಿ ಹಲವು ವಿಮಾನ ಅಪಘಾತಗಳು ಆಗುವ ಸಾಧ್ಯತೆಯಿದೆ ಎಂದು ಮನೀಜಾ ಅಹುಜಾ ತಮ್ಮ ಗ್ರಹಣ ಸಂಬಂಧದ ವಿಡಿಯೋದಲ್ಲಿ ಹೇಳಿದ್ದಾರೆ.

   ದೇಶದ ಪ್ರಮುಖ ನಾಯಕರೊಬ್ಬರ ಅಕಾಲಿಕ ಮರಣ

   ದೇಶದ ಪ್ರಮುಖ ನಾಯಕರೊಬ್ಬರ ಅಕಾಲಿಕ ಮರಣ

   ಕಾಂಗ್ರೆಸ್ ಮತ್ತು ಬಿಜೆಪಿಯ ಕುಂಡಲಿಯನ್ನು ವಿಮರ್ಶಿಸಿದಾಗ, ದೇಶದ ಪ್ರಮುಖ ನಾಯಕರೊಬ್ಬರ ಅಕಾಲಿಕ ಮರಣವಾಗುವ ಸಾಧ್ಯತೆಯಿದೆ ಎಂದು ಅಹುಜಾ ಹೇಳಿದ್ದಾರೆ. ಎರಡೂ ಪಕ್ಷದ ಕುಂಡಲಿಯನ್ನು ಅವಲೋಕಿಸಿದಾಗ, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರೊಬ್ಬರು ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಜೂನ್ ನಿಂದ ಫೆಬ್ರವರಿ 2021ರ ಅವಧಿಯಲ್ಲಿ ಇದು ಸಂಭವಿಸುವ ಸಾಧ್ಯತೆಯಿದೆ ಎಂದು ಅಹುಜಾ ವಿಡಿಯೋದಲ್ಲಿ ಹೇಳಿದ್ದಾರೆ.

   ಕಮ್ಯೂನಿಸ್ಟ್ ಸರಕಾರಗಳಿಗೆ ಹಿನ್ನಡೆಯಾಗಬಹುದು

   ಕಮ್ಯೂನಿಸ್ಟ್ ಸರಕಾರಗಳಿಗೆ ಹಿನ್ನಡೆಯಾಗಬಹುದು

   ಈ ಅವಧಿಯಲ್ಲಿ ಬರೀ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಕಮ್ಯೂನಿಸ್ಟ್ ಸರಕಾರಗಳಿಗೆ ಹಿನ್ನಡೆಯಾಗಬಹುದು. ಚೀನಾ ದೇಶದ ಪ್ರಭಾವ ಮುಂದಿನ ದಿನಗಳಲ್ಲಿ ಕಮ್ಮಿಯಾಗುತ್ತಾ ಸಾಗುತ್ತದೆ. ಈ ಸಮಯದಲ್ಲಿ ಚೀನಾ ಏನೇ ಮಾಡಿದರೂ, ಅದು ತಪ್ಪನ್ನೇ ಮಾಡುತ್ತದೆ ಮತ್ತು ಮಾಡುವ ಯಾವ ಕೆಲಸದಲ್ಲೂ ಅದು ಯಶಸ್ಸನ್ನು ಪಡೆಯುವುದಿಲ್ಲ - ಮನೀಜಾ ಅಹುಜಾ.

   ಚೀನಾ, ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ

   ಚೀನಾ, ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ

   ರಾಜಧಾನಿ ದೆಹಲಿ ಸೇರಿದಂತೆ, ಆಗಸ್ಟ್ 31, 2020ರ ವರೆಗೆ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆಯಿದೆ. ಸೆಪ್ಟಂಬರ್ ಕೊನೆಯ ವಾರದಿಂದ ಗಡಿಯಲ್ಲಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಆಗಸ್ಟ್ 20 ರಿಂದ ಸೆಪ್ಟಂಬರ್ 21ರ ಅವಧಿಯಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿದೆ. ಆದರೆ, ಭಾರತದಿಂದ ಸೂಕ್ತ ಉತ್ತರ ಎರಡೂ ದೇಶಗಳಿಗೆ ಸಿಗಲಿದೆ. ಕೋಮು ಸಂಘರ್ಷವೂ ನಡೆಯಲಿದೆ - ಮನೇಜಾ ಅಹುಜಾ.

   English summary
   Solar Eclipse Prediction By Maneeza Ahuja: National Party Leader Death May Happen,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X