• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Surya Grahan 2022 Live: ಸೂರ್ಯಗ್ರಹಣ ಮುಕ್ತಾಯದ ಹಿನ್ನೆಲೆ ದೇಗುಲಗಳಲ್ಲಿ ಶುದ್ಧೀಕರಣ

|
Google Oneindia Kannada News

ನವದೆಹಲಿ, ಅ. 25: ಈ ಬಾರಿಯ ದೀಪಾವಳಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ಅಕ್ಟೋಬರ್ 25 ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಭೂಮಿಯಿಂದ ಸೂರ್ಯ ಮರೆಯಾಗುವಂತೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.

ಭಾರತದಲ್ಲಿ ಗ್ರಹಣವು ಮಧ್ಯಾಹ್ನದ ನಂತರ ಸೂರ್ಯಾಸ್ತದ ಮೊದಲು ಕಾಣಿಸಿಕೊಳ್ಳಲಿದ್ದು, ಈ ವರ್ಷದ ಕೊನೆಯ ಸೂರ್ಯ ಗ್ರಹಣ ಹೆಚ್ಚಿನ ಸ್ಥಳಗಳಲ್ಲಿ ಗೋಚರಿಸುತ್ತದೆ.

Solar Eclipse 2022: ಗ್ರಹಣ ಸಮಯದಲ್ಲಿ ಹಿಂದೂ ದೇವಾಲಯಗಳನ್ನು ಏಕೆ ಮುಚ್ಚಲಾಗುತ್ತದೆ? Solar Eclipse 2022: ಗ್ರಹಣ ಸಮಯದಲ್ಲಿ ಹಿಂದೂ ದೇವಾಲಯಗಳನ್ನು ಏಕೆ ಮುಚ್ಚಲಾಗುತ್ತದೆ?

ದೀಪಾವಳಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ ಸಂಭವಿಸಿರುವುದರಿಂದ ಪೂಜೆ-ಪುನಸ್ಕಾರಗಳಿಗೆ ಬಗ್ಗೆ ಚರ್ಚೆಗಳು ನಡೆದಿವೆ. ಹಲವೆಡೆ ಹಬ್ಬಗಳ ಕೆಲವು ವಿಧಿಗಳನ್ನು ಮುಗಿಸಿಕೊಳ್ಳಲಾಗಿದೆ. ದೇವಾಲಯಗಳಲ್ಲಿ ದರ್ಶನಕ್ಕೆ ಅವಕಾಶವಿಲ್ಲ.

Solar Eclipse 2022 Live Updates in Kannada: Timings, Visibility, Latest News & Highlights

ಈ ಬಾರಿಯ ಗ್ರಹಣದ ಗರಿಷ್ಠ ಗೋಚರತೆಯು ರಷ್ಯಾ ಮತ್ತು ಖಜಕಿಸ್ತಾನ್‌ನಲ್ಲಿ ಹೆಚ್ಚಿದ್ದು, ಶೇ 80 ರಷ್ಟು ಕಾಣಿಸಿಕೊಳ್ಳಲಿದೆ. ದೆಹಲಿ ಮತ್ತು ಮುಂಬೈನಲ್ಲಿ, ಗ್ರಹಣದ ಪರ್ವ(ಉತ್ತುಂಗ) ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿಕೊಳ್ಳುವ ಶೇಕಡಾವಾರು ಪ್ರಮಾಣ ಕ್ರಮವಾಗಿ 44% ಮತ್ತು 24% ಇರುತ್ತದೆ. ದೇಶದ ಇತರ ಭಾಗಗಳಲ್ಲಿ, ಶೇಕಡಾವಾರು ವ್ಯಾಪ್ತಿಯು ಮೇಲಿನ ಮೌಲ್ಯಗಳಿಗಿಂತ ಕಡಿಮೆ ಇರುತ್ತದೆ.

*ಸೂರ್ಯಗ್ರಹಣದ ಸೂತಕವು 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ.

*ದೀಪಾವಳಿ ಅಮಾವಾಸ್ಯೆಯಂದು ಮಧ್ಯಾಹ್ನ 2:15 ಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ.

Solar Eclipse 2022: ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ? ಕಾಲಾವಧಿ ವಿವರSolar Eclipse 2022: ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ? ಕಾಲಾವಧಿ ವಿವರ

* ಗ್ರಹಣ ಸ್ಪರ್ಶಕಾಲ: ಮಧ್ಯಾಹ್ನ 2:15

* ಗ್ರಹಣ ಮಧ್ಯಕಾಲ: ಮಧ್ಯಾಹ್ನ 4:18

* ಗ್ರಹಣ ಮೋಕ್ಷಕಾಲ: ಸಂಜೆ 6:30

Newest First Oldest First
6:46 PM, 25 Oct
ದೇಶಾದ್ಯಂತ ಗೋಚರಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದೇವಸ್ಥಾನಗಳ ಬಾಗಿಲು ಹಾಕಲಾಗಿತ್ತು. ಸೂರ್ಯಗ್ರಹಣ ಅಂತ್ಯಗೊಂಡ ನಂತರದಲ್ಲಿ ದೇವಸ್ಥಾನಗಳ ಬಾಗಿಲನ್ನು ತೆರೆದು, ಶುದ್ಧೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಜನರು ಸಹ ಸೂರ್ಯಗ್ರಹಣ ಮೋಕ್ಷ ಕಾಲದ ನಂತರದಲ್ಲಿ ಸ್ನಾನ ಮಾಡಿಕೊಂಡು ದೇವಸ್ಥಾನಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.
6:46 PM, 25 Oct
ಬೆಂಗಳೂರು, ಹಾಸನ, ಮೈಸೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಸೇರಿದಂತೆ ಎಲ್ಲ ನಗರಗಳಲ್ಲೂ ಸೂರ್ಯಗ್ರಹಣ ಗೋಚರಿಸಿತು.
6:44 PM, 25 Oct
ದೀಪಾವಳಿ ಅಮಾವಾಸ್ಯೆ ದಿನವೇ ಸಂಭವಿಸಿದ ಸೂರ್ಯಗ್ರಹಣ ಸಂಜೆ 6.30ರ ಹೊತ್ತಿಗೆ ಅಂತ್ಯಗೊಂಡಿದೆ. ಅಕ್ಟೋಬರ್ 25ರ ಮಂಗಳವಾರ ಮಧ್ಯಾಹ್ನವೇ ಪ್ರಾರಂಭಗೊಂಡ ಸೂರ್ಯಗ್ರಹಣವು ಸಂಜೆ ವೇಳೆಗೆ ಮೋಕ್ಷ ಕಾಲವನ್ನು ತಲುಪಿತು.
6:02 PM, 25 Oct
ಬೆಂಗಳೂರಿನಲ್ಲೂ ಸೂರ್ಯಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವನೆ ಮಾಡಲಾಯಿತು. ಮೂಢನಂಬಿಕೆ ವಿರೋಧಿ ವೇದಿಕೆಯಿಂದ ಹಣ್ಣು-ಹಂಪಲು ಸೇವನೆ ಮಾಡಲಾಯಿತು. ಆ ಮೂಲಕ ಮೂಢನಂಬಿಕೆಗೆ ಪ್ರಗತಿಪರರು ವಿರೋಧ ವ್ಯಕ್ತಪಡಿಸಿದರು.
5:58 PM, 25 Oct
ಕೇತುಗ್ರಸ್ಥ ಸೂರ್ಯ ಗ್ರಹಣದ ಹಿನ್ನೆಲೆ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಮಸೀದಿಯಲ್ಲಿ ನಮಾಜ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
5:55 PM, 25 Oct
ಕಲಬುರಗಿಯಲ್ಲಿ ಗ್ರಹಣದ ವೇಳೆಯೇ ಉಪಹಾರ:
ಕಲಬುರಗಿಯಲ್ಲಿ ಸೂರ್ಯಗ್ರಹಣದ ಸಂದರ್ಭದಲ್ಲಿಯೇ ಜನರು ಉಪಹಾರ ಸೇವನೆ ಮಾಡಿದರು. ಜ್ಞಾನ ವಿಜ್ಞಾನ ಸಮಿತಿಯಿಂದ ಮೌಢ್ಯ ವಿರೋಧಿ ಅಭಿಯಾನ ನಡೆಸಲಾಗುತ್ತಿದ್ದು, ನಗರದ ಜಗತ್ ವೃತ್ತದಲ್ಲಿ ಜನರು ಉಪಹಾರ ಸೇವನೆಯನ್ನು ಮಾಡಿದರು.
5:48 PM, 25 Oct
ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಬಂದ್ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ದೇವಸ್ಥಾನ ಬಂದ್ ಮಾಡಲಾಗುತ್ತಿದ್ದು, ಪುನಃ ಸಂಜೆ ಸೂರ್ಯ ಗ್ರಹಣದ ನಂತರ ದೇವಸ್ಥಾನ ಬಾಗಿಲನ್ನು ಆಡಳಿತ ಮಂಡಳಿ ತೆರೆಯಲಿದ್ದಾರೆ. ಸೂರ್ಯ ಗ್ರಹಣದ ನಂತರ ದೇವಸ್ಥಾನ ಶುದ್ಧೀಕರಣ ಮಾಡಿ ಪುನಃ ಸೋಮೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಪೂಜೆ ನಂತ್ರ ಭಕ್ತರಿಗೆ ಅವಕಾಶ ನೀಡಲಾಗುವುದು.
5:44 PM, 25 Oct
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣದ ಚಿತ್ರಣ.
5:34 PM, 25 Oct
ಬೆಂಗಳೂರಿನಲ್ಲಿ ಸೂರ್ಯಗ್ರಹಣದ ಚಿತ್ರಣ:
ಬೆಂಗಳೂರಿನಲ್ಲಿ ಸೂರ್ಯಗ್ರಹಣದ ಸಂದರ್ಭದಲ್ಲಿ ಆಕಾಶದಲ್ಲಿ ಗೋಚರಿಸಿದ ಸೂರ್ಯನ ಚಿತ್ರಣ ಹೀಗಿತ್ತು.
5:25 PM, 25 Oct
ಪಂಜಾಬ್‌ನ ಅಮೃತಸರದ ಆಕಾಶದಲ್ಲಿ ಭಾಗಶಃ ಸೂರ್ಯಗ್ರಹಣ ಕಂಡುಬಂದಿದೆ. ಖಗೋಳ ವಿದ್ಯಮಾನವು ಇಂದು ಈಶಾನ್ಯದ ಕೆಲವು ಭಾಗಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಭಾಗಗಳಲ್ಲಿ ಗೋಚರಿಸುತ್ತದೆ
5:23 PM, 25 Oct
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಕಾಣಿಸಿಕೊಂಡಂತೆ ಸೂರ್ಯಗ್ರಹಣ.
5:19 PM, 25 Oct
ಕುರುಕ್ಷೇತ್ರವು ಭಾಗಶಃ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ, ಗ್ರಹಣ ಸಮಯ ಮುಗಿದ ನಂತರದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ.
5:18 PM, 25 Oct
ಉತ್ತರ ಪ್ರದೇಶದ ಲಕ್ನೋದ ಆಕಾಶದಲ್ಲಿ ಕಾಣಿಸಿಕೊಂಡಂತೆ ಭಾಗಶಃ ಸೂರ್ಯಗ್ರಹಣ.
5:12 PM, 25 Oct
ಭಾಗಶಃ ಸೂರ್ಯಗ್ರಹಣದ ಖಗೋಳ ಅದ್ಭುತವು ಜಮ್ಮು ಮತ್ತು ಕಾಶ್ಮೀರ(ಚಿತ್ರ 1) ಮತ್ತು ಚಂಡೀಗಢದಲ್ಲಿ (ಚಿತ್ರ 2)ಕಂಡಿದ್ದು ಹೀಗೆ.
4:48 PM, 25 Oct
ಭಾಗಶಃ ಸೂರ್ಯಗ್ರಹಣ ಅಥವಾ ಸೂರ್ಯ ಗ್ರಹಣವು ಅಕ್ಟೋಬರ್ 25 ರಂದು ಸಂಭವಿಸಲಿದೆ. ಇದು ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ಪಶ್ಚಿಮ ಪ್ರದೇಶಗಳ ಹೆಚ್ಚಿನ ಭಾಗಗಳಿಂದ ಗೋಚರಿಸುತ್ತದೆ. ಭಾರತದಲ್ಲಿ, ಗ್ರಹಣವು ಮಧ್ಯಾಹ್ನ ಪ್ರಾರಂಭವಾಗುತ್ತದೆ.
4:18 PM, 25 Oct
ಶೃಂಗೇರಿಯಲ್ಲಿ ದರ್ಶನಕ್ಕೆ ಅವಕಾಶ
ಸೂರ್ಯ ಗ್ರಹಣದ ವೇಳೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೆ ಎಂದಿನಂತೆ ಶಾರದಾಂಭೆ ದರ್ಶನ ಇರಲಿದೆ. ಭಕ್ತರು ದೇವಸ್ಥಾನಕ್ಕೆ ಬಂದು-ಹೋಗುತ್ತಿದ್ದಾರೆ. ಆದರೆ ಈ ವೇಳೆ ಪ್ರಸಾದದ ಸೌಲಭ್ಯ ಇರುವುದಿಲ್ಲ.
4:03 PM, 25 Oct
ಪ್ರಮುಖ ಹಬ್ಬ ದೀಪಾವಳಿ ನಡುವೆ ಮಂಗಳವಾರ ಸೂರ್ಯಗ್ರಹಣವೂ ಇದೆ. ಈ ಹಿನ್ನೆಲೆ ದೀಪಾವಳಿ ಹಬ್ಬದ ಸಾಲು ಸಾಲು ರಜೆ ಅಂತ ದೇವಾಲಯಗಳಿಗೆ ಭೇಟಿ ನೀಡಲು ಹೊರಟಿರುವ ಭಕ್ತರಿಗೆ ಸೂರ್ಯಗ್ರಹಣದಿಂದ ನಿರಾಸೆ ಕಾದಿದೆ. ಹೌದು, ಪ್ರಮುಖ ದೀಪಾವಳಿ ಹಬ್ಬ ಇರುವುದರಿಂದ ದೇವಾಲಯಕ್ಕೆ ಭೇಟಿ ಭಕ್ತರಿಗೆ ಮಂಗಳವಾರ ಸೂರ್ಯಗ್ರಹಣ ಅಡ್ಡಿ ಪಡಿಸಿದೆ. ಸೂರ್ಯ ಗ್ರಹಣ ಇರುವುದರಿಂದ ಹುಬ್ಬಳ್ಳಿ ನಗರದಲ್ಲಿ ಹಲವು ದೇವಸ್ಥಾನಗಳು ಬಂದ್‌ ಮಾಡಲಾಗಿದೆ. ಇನ್ನು, ಕೆಲವು ದೇವಾಲಯಗಳಲ್ಲಿ ಸಮಯ ಬದಲಾವಣೆ ಮಾಡಿವೆ. ಖಂಡಗ್ರಾಸ ಕೇತು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ವಿರಳವಾಗಿದೆ.
3:51 PM, 25 Oct
'ಆಸ್ಟ್ರೋ ನೈಟ್ ಸ್ಕೈ ಟೂರಿಸಂ'
ರಾಜಸ್ಥಾನ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 'ಆಸ್ಟ್ರೋ ನೈಟ್ ಸ್ಕೈ ಟೂರಿಸಂ' ಅಡಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಲ್ಲಿ ಆಕಾಶ ನೋಡುವ ಉತ್ಸಾಹಿಗಳು ತಜ್ಞರ ಸಮ್ಮುಖದಲ್ಲಿ ಕನ್ನಡಕವನ್ನು ಬಳಸಿಕೊಂಡು ಮಂಗಳವಾರ ಭಾಗಶಃ ಸೂರ್ಯಗ್ರಹಣವನ್ನು ವೀಕ್ಷಿಸಬಹುದು ಎಂದು ಸೈನ್ಸ್ ಪಾರ್ಕ್ ಮುಖ್ಯಸ್ಥ ಕೈಲಾಶ್ ಮಿಶ್ರಾ ಹೇಳಿದ್ದಾರೆ. ಖಗೋಳ ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ ಉಚಿತವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮಿಶ್ರಾ ಹೇಳಿದರು. ಸಂಜೆ 4.30 ರಿಂದ 5.30 ರವರೆಗೆ ಗಲ್ಟಾ ಗೇಟ್ ಬೆಟ್ಟದ ಸೂರ್ಯ ಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
3:50 PM, 25 Oct
ತೆಲಂಗಾಣದ ಪ್ರಮುಖ ದೇವಾಲಯಗಳಿಗೆ ಪ್ರವೇಶ ನಿರ್ಬಂಧ
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಎಲ್ಲಾ ಪ್ರಮುಖ ದೇವಾಲಯಗಳನ್ನು ಇಂದು ಮುಚ್ಚಲಾಗಿದೆ. ಈ ದೇವಾಲಯಗಳಲ್ಲಿ ಎಲ್ಲಾ ಪೂಜಾ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಡೆಸುತ್ತಿರುವ ವೆಂಕಟೇಶ್ವರ ದೇವಸ್ಥಾನವನ್ನು ಇಂದು ಬೆಳಗ್ಗೆ 8 ಗಂಟೆಗೆ ಮುಚ್ಚಲಾಗಿದ್ದು, ರಾತ್ರಿ 7.30ಕ್ಕೆ ಮತ್ತೆ ತೆರೆಯಲಾಗುವುದು. ಮಂಗಳವಾರದ ಸೂರ್ಯಗ್ರಹಣದಿಂದಾಗಿ ಟಿಟಿಡಿ ಆಡಳಿತದಲ್ಲಿರುವ ಎಲ್ಲಾ ದೇವಾಲಯಗಳನ್ನು ಸಹ ಮುಚ್ಚಲಾಗಿದೆ.
2:48 PM, 25 Oct
ಭಾರತದಲ್ಲಿ ದೀಪಾವಳಿಯಂದು ಸೂರ್ಯಗ್ರಹಣವನ್ನು ನೋಡುವುದು ಸಾಮಾನ್ಯವಾಗಿದೆ. ಈ ಹಿಂದೆ 1762 ರ ಅಕ್ಟೋಬರ್ 17 ರಂದು ಸಂಭವಿಸಿದ ಗ್ರಹಣವು ದೀಪಾವಳಿಯ ದಿನವಾಗಿತ್ತು. 1995 ರಲ್ಲಿ ಸಹ, ಅಕ್ಟೋಬರ್ 24 ರಂದು ಸಂಪೂರ್ಣ ಸೂರ್ಯಗ್ರಹಣವು ಸಂಭವಿಸಿತು, ಇದು ಬೆಳಕಿನ ಹಬ್ಬದಂದು ಸಂಭವಿಸಿತು ಮತ್ತು ದಿನದ ಅನುಕೂಲಕರ ಸಮಯದಲ್ಲಿ ಸಮಗ್ರತೆಯ ಹಾದಿಯು ಭಾರತದ ಮೇಲೆ ಹಾದುಹೋಯಿತು" ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಮಾಜಿ ಪ್ರೊಫೆಸರ್ ಆರ್‌ಸಿ ಕಪೂರ್ ಹೇಳಿದ್ದಾರೆ.
2:13 PM, 25 Oct
ಗ್ರಹಣದ ಸಮಯದಲ್ಲಿ ಶ್ರೀ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಸ್ಥಾನವನ್ನು ಮುಚ್ಚುವುದಿಲ್ಲ. ಈ ದೇವಾಲಯವು ರಾಹು ಮತ್ತು ಕೇತುಗಳಿಗೆ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುವ ಭಾರತದ ಏಕೈಕ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ, ಹೀಗಾಗಿ, ಈ ದೇವಾಲಯವು ಗ್ರಹಣದಿಂದ ಪ್ರಭಾವಿತವಾಗುವುದಿಲ್ಲ.
1:43 PM, 25 Oct
ಈ ಶತಮಾನದ ಅತಿ ದೊಡ್ಡ ಸೂರ್ಯಗ್ರಹಣ ಇಂದು ಸಂಭವಿಸಲಿದೆ, ಇದೀಗ 'ಸೂತಕ' ನಡೆಯುತ್ತಿದೆ; ಮಕ್ಕಳು, ವೃದ್ಧರು ಮತ್ತು ರೋಗಿಗಳನ್ನು ಹೊರತುಪಡಿಸಿ ನಾವು ಅನಗತ್ಯವಾಗಿ ಪ್ರಯಾಣಿಸಬಾರದು, ತಿನ್ನಬಾರದು, ಮಲಗಬಾರದು. ನಾವು ನಮ್ಮ ಮನೆಗಳಲ್ಲಿಯೇ ಇರಬೇಕು ಮತ್ತು ಶಾಂತಿಯಿಂದ ಇರಬೇಕು ಎಂದು ಬಿರ್ಲಾ ಮಂದಿರದ ಅರ್ಚಕ ಲಾಲ್ ಚಂದ್ ಶರ್ಮಾ ಹೇಳಿದ್ದಾರೆ
12:55 PM, 25 Oct
ಗೋವರ್ಧನ ಪೂಜೆ ಸಾಮಾನ್ಯವಾಗಿ ದೀಪಾವಳಿ ಆಚರಣೆಯ ಒಂದು ದಿನದ ನಂತರ ನಡೆಯುತ್ತದೆ. ಈ ವರ್ಷ ದೀಪಾವಳಿ ಅಕ್ಟೋಬರ್ 24, ಗೋವರ್ಧನ ಪೂಜೆ ಅಕ್ಟೋಬರ್ 26ಕ್ಕೆ ಬಂದಿದೆ. ದೀಪಾವಳಿಯ ನಂತರದ ದಿನವಾದ ಅಕ್ಟೋಬರ್ 25 ರಂದು ಸಂಭವಿಸುವ ಭಾಗಶಃ ಸೂರ್ಯಗ್ರಹಣ ಇದಕ್ಕೆ ಕಾರಣ. ಗ್ರಹಣ, ಒಂದು ಆಕಾಶ ವಿದ್ಯಮಾನ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜನರ ಜೀವನದ ಮೇಲೆ ಭಾರಿ ಪ್ರಭಾವವನ್ನು ಉಂಟುಮಾಡಬಹುದು.
12:28 PM, 25 Oct
ಹಿಮಾಲಯದ ತಪ್ಪಲಿನ ಬದರಿನಾಥ, ಕೇದಾರನಾಥ ದೇಗುಲಗಳು ಕೂಡಾ ಸೂರ್ಯಗ್ರಹಣದ ನಿಮಿತ್ತ ಬಾಗಿಲು ಮುಚ್ಚಲಿವೆ. ಈ ಸಮಯದಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಇರುವುದಿಲ್ಲ.
11:59 AM, 25 Oct
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟಕ್ಕೆ ದೂರದ ಊರುಗಳಿಂದ ಸಾಕಷ್ಟು ಭಕ್ತರು ಹರಿದುಬರುತ್ತಾರೆ. ಆದರೆ ಅಕ್ಟೋಬರ್‌ 25ರಂದು ಸೂರ್ಯ ಗ್ರಹಣ ಇರುವುದರಿಂದ ಈ ಬಾರಿ ಭಕ್ತರಿಗೆ ದರ್ಶನ ಸಮಯದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
11:53 AM, 25 Oct
ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ಗ್ರಹಣದ ಸಂದರ್ಭಲ್ಲಿ ದೇವರ ದರ್ಶನ, ಪೂಜೆಗೆ ಅವಕಾಶವಿಲ್ಲ. ಈ ಬಗ್ಗೆ ಮಾತನಾಡಿದ ದೇವಸ್ಥಾನದ ಅರ್ಚಕ ರಾಮ ಪ್ರಸಾದ್ ಅವರು, 'ಗ್ರಹಣದ ಸಮಯದಲ್ಲಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಮೇಲೆ ದೇವಸ್ಥಾನದ ಆವರಣವನ್ನು ಶುಚಿಗೊಳಿಸಲಾಗುತ್ತದೆ. ಪುಣ್ಯಾಹ ಮಾಡಿ ಬಾಗಿಲು ತೆಗೆದು ಅಂಜನೇಯನಿಗೆ ಪೂಜೆ ಸಲ್ಲಿಸಲಾಗುತ್ತದೆ
11:36 AM, 25 Oct
ಅಕ್ಟೋಬರ್‌ 25ರಂದು ಸೂರ್ಯಗ್ರಹಣ ಇದ್ದು, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದು ಹೋಗಲಿದ್ದಾನೆ. ಈ ವೇಳೆ ಸೂರ್ಯನ ಬೆಳಕು ಭೂಮಿ ಮೇಲೆ ಬೀಳುವುದನ್ನು ಚಂದ್ರ ತಡೆಯಲಿದ್ದಾನೆ. ಸೂರ್ಯಗ್ರಹಣದ ಹಿನ್ನೆಲೆ ಅಕ್ಟೋಬರ್‌ 25ರಂದು ಸಿಗಂದೂರಿನ ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 'ಗ್ರಹಣದ ಪ್ರಯುಕ್ತ ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಸಾರ್ವಜನಿಕರಿಗೆ ಯಾವುದೆ ಪೂಜೆ ಮತ್ತು ದರ್ಶನಕ್ಕೆ ಅವಕಾಶ ಇರುವುದಿಲ್ಲ' ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
10:51 AM, 25 Oct
ಮಧ್ಯಾಹ್ನದ ಅನ್ನಸಂತರ್ಪಣೆ ಇರುವುದಿಲ್ಲ
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣದ ದಿನದಂದು ಸಂಜೆ 4:45ರಿಂದ 6:45ರವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6:45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಆದರೆ ಅಂದು ಮಧ್ಯಾಹ್ನ ಅನ್ನ ಪ್ರಸಾದ ಇರುವುದಿಲ್ಲ ಎಂದು ತಿಳಿಸಲಾಗಿದೆ. ಸೂರ್ಯಗ್ರಹಣದ ಹಿನ್ನೆಲೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮಧ್ಯಾಹ್ನದ ಅನ್ನಸಂತರ್ಪಣೆ ಇರುವುದಿಲ್ಲ.
10:30 AM, 25 Oct
ಕಟೀಲು ದೇವಸ್ಥಾನ
ಕಟೀಲು ದೇವಸ್ಥಾನ
ಕಟೀಲು ದೇವಸ್ಥಾನದಲ್ಲಿ ದೇವಿ ಲಿಂಗ ಸ್ವರೂಪಿ ಆಗಿರುವುದರಿಂದ ಅಕ್ಟೋಬರ್‌ 25ರಂದು ಸಂಜೆ 5:08ಕ್ಕೆ ಸೂರ್ಯಗ್ರಹಣ ಆರಂಭ ಗೊಂಡ ಅವಧಿಯಿಂದ ಮಧ್ಯಕಾಲ 5:51ರವರೆಗೆ ನಿರಂತರ ಅಭಿಷೇಕ ನಡೆಯಲಿದೆ. ಬಳಿಕ ಸಂಜೆ 6:29ರ ಮೋಕ್ಷ ಕಾಲದವರೆಗೆ ಪುನಃ ನಿರಂತರ ದೇವರಿಗೆ ಅಭಿಷೇಕ ನಡೆಯಲಿದ್ದು, ಮೋಕ್ಷದ ಬಳಿಕ ದೇವರಿಗೆ ಪೂಜೆ ಜರುಗಲಿದೆ. ಗ್ರಹಣದ ಅವಧಿಯಲ್ಲಿ ಭಕ್ತರು ದೇವರಿಗೆ ತುಪ್ಪವನ್ನು ನೀಡಬಹುದು. ಭಕ್ತಾದಿಗಳು ದೇವರ ದೀಪಕ್ಕೆ ಶುದ್ಧ ಅರಳೆಣ್ಣೆ, ತುಪ್ಪ, ಬತ್ತಿ ಸಮರ್ಪಿಸುವುದರಿಂದ ಗ್ರಹಣ ದೋಷ ತೊಲಗಿ ಅನುಗ್ರಹ ಪ್ರಾಪ್ತಿ ಆಗುತ್ತದೆ. ರಾತ್ರಿ ಅನ್ನ ಪ್ರಸಾದ ಇರುವುದಿಲ್ಲ. ಬದಲಿಗೆ ಫಲಾಹಾರ ಇರುತ್ತದೆ ಎಂದು ಅರ್ಚಕ ಶ್ರೀಹರಿನಾರಾಯಣ ತಿಳಿಸಿದ್ದಾರೆ.
10:15 AM, 25 Oct
ಧರ್ಮಸ್ಥಳ, ಕುಕ್ಕೆ ಸಹಿತ ಕರಾವಳಿ ದೇವಸ್ಥಾನಗಳ ದರ್ಶನ ಸಮಯ
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ‌. ಮಂಗಳವಾರದಂದು ಮಧ್ಯಾಹ್ನದವರೆಗೆ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿದ್ದು, ಬಳಿಕ ಮಧ್ಯಾಹ್ನ 2:30ರಿಂದ ರಾತ್ರಿ 7:30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅನ್ನಸಂತರ್ಪಣೆ ಛತ್ರದಲ್ಲಿ ಮಧ್ಯಾಹ್ನ 2:30ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆಯನ್ನು ಹೊರಡಿಸಿದೆ.
READ MORE

English summary
Solar Eclipse 2022 Live Updates in Kannada: Check Solar eclipse October 2022 date, timings in india, visibility, live streaming, latest news and highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X