ಹಸೆಮಣೆ ಏರಲು ಸಜ್ಜಾದ RCB ನಾಯಕಿ; ಮದುವೆ ಯಾವಾಗ?
ಕನ್ನಡಿಗರ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರು ತಮ್ಮ ಪ್ರಿಯಕರನೊಂದಿಗೆ ಆಗಾಗ ಕಾಣಿಸಿಕೊಂಡಿದ್ದು ಜಗತ್ತಿಗೆ ಗೊತ್ತಿದೆ. ಇದೀಗ ಸ್ಮೃತಿ ಮಂಧಾನ ಅವರು ತಮ್ಮ ಸ್ನೇಹಿತನೊಂದಿಗೆ ಮದುವೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇದಕ್ಕೆ ಪೂರಕವಾಗಿ ಅವರ ವೆಡ್ಡಿಂಗ್ ಕಾರ್ಡ್ಸ್ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಆಗಿರುವ ಸ್ಮೃತಿ ಮಂಧಾನ ಅವರು ಬಹುದಿನಗಳಿಂದ ಮ್ಯೂಸಿಕ್ ಡೈರೆಕ್ಟರ್ ಗೆಳೆಯ ಪಶಾಲ್ ಮುಚ್ಚಲ್ ಅವರೊಂದಿಗೆ ಸುತ್ತಾಡಿದ್ದು ಗುಟ್ಟಾಗೇನು ಉಳಿದಿಲ್ಲ. ಅದೆಷ್ಟೋ ಬಾರಿ ಸ್ಮೃತಿ ಆಟ ನೋಡಲು ಸ್ವತಃ ಗೆಳೆಯ ಪಶಾಲ್ ಮುಚ್ಚಲ್ ಮೈದಾನ ಬಂದಿದ್ದರು. ಅದರ ವಿಡಿಯೋ ಫೋಟೋಗಳು ವೈರಲ್ ಆಗಿದ್ದವು. ಇದೀಗ ಇವರಿಬ್ಬರು ಮದುವೆ ಆಗುತ್ತಿದ್ದಾರೆ. ಇದೇ ನವೆಂಬರ್ 23ರಂದು ಮದುವೆ ನಡೆಯಲಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಬಳಿಕ ಇವರಿಬ್ಬರ ಆ ಒಂದು ವಿಡಿಯೋ ಸಖತ್ ವೈರಲ್ ಅಗಿತ್ತು. ಇವರಿಬ್ಬರ ಮಧ್ಯೆ ಬರೀ ಸ್ನೇಹ ಮಾತ್ರವಲ್ಲದೇ ಪ್ರೀತಿ ಇದೇ ಎಂಬುದಕ್ಕೆ ಅನೇಕ ಸಂಗತಿಗಳು, ಸಾಕ್ಷ್ಯಗಳು ಇವೆ. ಹೀಗಿರುವಾಗಲೇ ಈ ಇಬ್ಬರು ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜಾಲತಾಣದಲ್ಲಿ ಮಂಧಾನ, ಮಚ್ಚಲ್ ಮದುವೆ ಕಾರ್ಡ್ ವೈರಲ್ ಆಗಿದೆ.
ಟೀಂ ಇಂಡಿಯಾದ ಆಟಗಾರರಲ್ಲಿ ಸ್ಥಾನ ಪಡೆದ ಮಹಿಳೆ ಆಟಗಾರರ ಯಾರು ಮದುವೆ ಆಗಿಲ್ಲ. ಸದ್ಯ ಈ ಸುದ್ದಿ ನಿಜವಾದಲ್ಲಿ ಸ್ಮೃತಿ ಮಂಧಾನ ಮದುವೆ ಆದ ಮೊದಲ ಮಹಿಳೆಯಾಗಲಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಇಂಡಿಯನ್ ವುಮೆನ್ಸ್ ನ್ಯಾಷನಲ್ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಟೀಂ ರೆಸ್ಟ್‌ನಲ್ಲಿದೆ. ಮುಂದೆ ನಾವು ಸಿಗುವುದಾದರೆ ಅದು ಸ್ಮೃತಿ ಮಂಧಾನ ಅವರ ಮದುವೆಯಲ್ಲಿ ಎಂದು ಹೇಳಿದ್ದರು. ಈ ಮೂಲಕ ಸ್ಮೃತಿ -ಪಶಾಲ್ ಮುಚ್ಚಲ್ ವಿವಾಹ ಬಗ್ಗೆ ಅವರು ಹಿಂಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಮದುವೆ ಬಗ್ಗೆ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.












Click it and Unblock the Notifications