ಧೂಮಪಾನ ಹೆಚ್ಚಾದ್ರೆ ಸಂಶಯದ ಗುಣ ಹೆಚ್ಚಾಗುತ್ತಂತೆ!

Posted By:
Subscribe to Oneindia Kannada

ನವದೆಹಲಿ, ಜುಲೈ 29: ಧೂಮಪಾನ ಅತಿಯಾದರೆ, ಮನುಷ್ಯನಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ, ಹೊಸ ಅಧ್ಯಯನವು, ಹೆಚ್ಚಾಗಿ ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಕ್ರಮೇಣ ಅನುಮಾನದ ಗುಣ ಪ್ರಬಲವಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದೆ.

ಹ್ಯಾಮ್ ಬರ್ಗ್ ನ ಯೂನಿರ್ವರಿಸಿ ಮೆಡಿಕಲ್ ಕಾಲೇಜ್ ನ ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ಈ ಹೊಸ ವಿಚಾರಗಳು ಬೆಳಕಿಗೆ ಬಂದಿವೆ ಎಂದು ವರದಿಯೊಂದು ಹೇಳಿದೆ.

Smoking may leave people paranoid, says study

ಅಷ್ಟೇ ಅಲ್ಲ, ಅತಿಯಾದ ಧೂಮಪಾನದಿಂದ ಮನಸ್ಸಿನಲ್ಲಿ ವಿನಾಕಾರಣ ಸುಪ್ತ ಭೀತಿಗಳು ಆವರಿಸುವ ಅಪಾಯವಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಸುಮ್ಮನೇ ಉದ್ವೇಗಗೊಳ್ಳುವುದೂ ಹೆಚ್ಚಾಗುವ ಅಪಾಯವಿರುತ್ತದೆ ಎಂದು ಹೇಳಲಾಗಿದೆ.

ತಂಬಾಕಿನ ಹೊಗೆಯು ನರಗಳ ಮೇಲೆ ಪ್ರಭಾವ ಬೀರುವುದರಿಂದ ಮೆದುಳಿನಲ್ಲಿ ಭಯವನ್ನು ನಿಯಂತ್ರಿಸುವ ಕೇಂದ್ರವು ಮಂದಗತಿಯಲ್ಲಿ ಕೆಲಸ ಮಾಡುವಂತೆ ಮಾಡುತ್ತದೆ. ಅಲ್ಲದೆ, ತರ್ಕಬದ್ಧವಾಗಿ ಯೋಚಿಸುವುದನ್ನೂ ಕ್ರಮೇಣ ಕಡಿಮೆ ಮಾಡುತ್ತದ್ದಾರಿಂದ ವರ್ಷಗಟ್ಟಲೆ ಹೆಚ್ಚೆಚ್ಚು ಧೂಮಪಾನ ಮಾಡುವ ವ್ಯಕ್ತಿಗಳಿಗೆ ಭೀತಿ, ಸಂಶಯಗ ಗುಣ ಪ್ರಬಲವಾಗುವ ಪ್ರಮೇಯವಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to a new study, smoking may leave people more vulnerable to suffering from paranoid, phobias and other types of chronic fear like post-traumatic stress disorder.
Please Wait while comments are loading...