ಜಾರ್ಖಂಡ್ ನಲ್ಲಿ ಸೆಲ್ಫೀ ಕ್ರೇಜಿಗೆ ಬಾಲಕಿ ಬಲಿ
ಬೊಕಾರೊ, (ಜಾರ್ಖಂಡ್) ನ.14 : ಸೆಲ್ಫೀ ಕ್ರೇಜ್ ಹೆಚ್ಚಾಗಿದೆ ಅದರೊಂದಿಗೆ ಯುವಕರ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆಯಾಗುತ್ತಿದೆ. ಸೆಲ್ಫೀ ತೆಗೆಯಲು ಹೋಗಿ ಬಾಲಿಕಿಯೊಬ್ಬಳು ನೀರು ಪಾಲಾಗಿರುವ ಘಟನೆ ಜಾರ್ಖಂಡ್ ನ ಬೊಕಾರೊ ಉಕ್ಕು ಘಟಕದ ಶೈತ್ಯ ಕೊಳದಲ್ಲಿ ಸೋಮವಾರ(ನ. 13)ರಂದು ಸಂಭವಿಸಿದೆ.
ಸುಲೇಖ ಕುಮಾರಿ (16) ಸೆಲ್ಫೀ ತೆಗೆಯುತ್ತಿದ್ದಾಗ ಕೊಳಕ್ಕೆ ಬಿದ್ದು, ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈಜುಗಾರರು ಆಕೆಯ ಶವವನ್ನು ಹೊರಕ್ಕೆ ತೆಗೆದಿದ್ದಾರೆ.

ಕಳೆದ ತಿಂಗಳ 27ರಂದು ಇಬ್ಬರು ಮಹಿಳಾ ಪ್ರವಾಸಿಗಳು ನೀರುಪಾಲಾಗಿರುವ ಘಟನೆ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿತ್ತು. ನಾಗಬಲಿ ನದಿಯಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಜ್ಯೋತಿ(27) ಮತ್ತು ವಿಜಯನಗರಂನ ಶ್ರೀದೇವಿ (23) ಜಲಸಮಾಧಿಯಾದರು.
Recommended Video

ವಿಶಾಖಪಟ್ಟಣಂನಿಂದ ಪ್ರವಾಸಕ್ಕೆ ತೆರಳಿದ್ದ ಒಂಭತ್ತು ಮಹಿಳೆಯರ ರಾಯಗಡ ಪಟ್ಟಣದ ಹೊರವಲಯದ ನಾಗಬಲಿ ತೂಗುಸೇತುವೆ ದಾಟಿ ನೀರಿಗೆ ಇಳಿದು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಈ ಘಟನೆ ನಡೆದಿತ್ತು. ಬಂಡೆ ಮೇಲೆ ಹತ್ತಿ ಸ್ವಯಂ ಫೋಟೊ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾಗ ಕಾಲು ಜಾರಿ ನೀರಿನ ಭೋರ್ಗರೆತದಲ್ಲಿ ಇವರಿಬ್ಬರು ಕೊಚ್ಚಿಹೋಗಿದ್ದರು. ಅವರ ಶವಗಳು ನಂತರ ಪತ್ತೆಯಾಗಿತ್ತು.












Click it and Unblock the Notifications