ಕೇರಳ: ಅತ್ಯಾಚಾರ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಕುಟುಂಬಕ್ಕೆ ಜೀವ ಬೆದರಿಕೆ

ಕೊಚ್ಚಿ, ಸೆಪ್ಟೆಂಬರ್ 24: ಬಿಷಪ್‌ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಕೇರಳದ ಕ್ರೈಸ್ತ ಸನ್ಯಾಸಿನಿಗೆ ಹಾಗೂ ಆಕೆಯ ಸಹೋದರಿ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರು ದಾಖಲಿಸಲಾಗಿದೆ.

ಅತ್ಯಾಚಾರ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿಯ ಸಹೋದರಿ ಕೇರಳ ರಾಜ್ಯ ಪೊಲೀಸ್ ಡಿಜಿಪಿ, ಕೊಟ್ಟಾಯಂ ಜಿಲ್ಲೆಯ ಎಸ್‌ಪಿ ಮತ್ತು ಕಾಲಾಡಿಯ ವೃತ್ತ ನಿರೀಕ್ಷಕ ಅವರುಗಳಿಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದು, ತಮ್ಮ ತಂಗಿ ಹಾಗೂ ತಮ್ಮ ಕುಟುಂಬಕ್ಕೆ ಸತತವಾಗಿ ಜೀವ ಬೆದರಿಕೆಗಳು ಬರುತ್ತಿವೆ ಎಂದಿದ್ದಾರೆ.

ಅತ್ಯಾಚಾರ ಆರೋಪಿ ಬಿಷಪ್‌ನ ಸಹೋದರರು, ದ್ವೇಷದಿಂದ ತನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಅಲ್ಲದೆ ನನಗೆ, ನನ್ನ ಮಗನಿಗೆ ಹಾಗೂ ನನ್ನ ಸಹೋದರಿಗೆ ತೊಂದರೆ ಕೊಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

Sister of Kerala nun rape cases victim writes petition to seeking protection

ಆರೋಪಿ ಫ್ರಾಂಕೋನ ಸಂಬಂಧಿ ಉನ್ನಿ ಎನ್ನುವನೊಬ್ಬ ನಾನು ಅತ್ಯಾಚಾರ ಸಂತ್ರಸ್ತೆ ಪರ ಮಾಡುತ್ತಿದ್ದ ಪ್ರತಿಭಟನೆಯ ಚಿತ್ರವೊಂದನ್ನು ತೆಗೆದುಕೊಂಡು ನನಗೆ ಬೆದರಿಕೆಗಳನ್ನು ಹಾಕುತಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯ ಸಹೋದರಿ ದೂರು ನೀಡಿದ್ದಾರೆ.

ಎರ್ನಾಕುಲಂನಲ್ಲಿ ಕ್ರೈಸ್ತ ಸನ್ಯಾಸಿನಿ ಲೂಸಿ ಕಲ್ಪುರ ಎಂಬುವರು ಅತ್ಯಾಚಾರ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿ ಪರ ಪ್ರತಿಭಟನೆ ಮಾಡಿದ್ದಕ್ಕೆ ಚರ್ಚ್‌ ಶಿಸ್ತುಕ್ರಮ ಜರುಗಿಸಿತ್ತು. ಆದರೆ ಪ್ರತಿಭಟನೆ ಹಾಗೂ ದೂರುಗಳ ನಂತರ ಇಂದು ಲೂಸಿ ಕಲ್ಪುರ ವಿರುದ್ಧ ಆದೇಶಿಸಿದ್ದ ಎಲ್ಲ ಶಿಸ್ತುಕ್ರಮಗಳನ್ನು ಹಿಂದಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+