ಪುರುಷ ಉದ್ಯೋಗಿಗಳಿಗೆ ದೊರೆಯಲಿದೆ ಚೈಲ್ಡ್ ಕೇರ್ ಲೀವ್
ನವದೆಹಲಿ, ಡಿಸೆಂಬರ್ 28: ಇನ್ನುಮುಂದೆ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಚೈಲ್ಡ್ ಕೇರ್ ಲೀವ್ ದೊರೆಯಲಿದೆ.
ಕೇಂದ್ರ ಸರ್ಕಾರದಲ್ಲಿರುವ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷ ಉದ್ಯೋಗಿಗಳಿಗೆ ಒಟ್ಟಾರೆ 730 ದಿನಗಳ ಚೈಲ್ಡ್ ಕೇರ್ ಲೀವ್ ದೊರೆಯಲಿದೆ. ಅವಲಂಬಿತ, ಮಗು,ಸಿಂಗಲ್ ಪೇರೆಂಟ್, ವಿಚ್ಛೇದಿತ ಪುರುಷರು ಅಥವಾ ವಿಧುರರಿಗೆ ಇದು ಅನ್ವಯವಾಗಲಿದೆ.
ಚೈಲ್ಡ್ ಕೇರ್ ಲೀವ್ ಹೊರತಾಗಿ ಮಹಿಳೆಯರು 180 ದಿನಗಳ ವೇತನ ಸಹಿತ ಹೆರಿಗೆ ರಜೆ ಪಡೆಯಬಹುದು, ಪುರುಷರು 15 ದಿನ ರಜೆ ಪಡೆಯಲು ಅವಕಾಶವಿದೆ.

ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಈ ಪ್ರಯೋಜನ ದೊರೆಯುತ್ತಿದ್ದು, ಪುರುಷರಿಗೂ ದೊರೆಯಲಿದೆ. ನೂತನ ನಿಯಮದ ಪ್ರಕಾರ ಮೊದಲ 365 ದಿನಗಳಿಗೆ ಪೂರ್ತಿ ಶೇ. 100 ವೇತನ ಪಾವತಿಯಾಗಲಿದ್ದು, ನಂತರದಲ್ಲಿ ಮುಂದಿನ 365 ದಿನಗಳಿಗೆ ಶೇ. 80 ವೇತನ ದೊರೆಯಲಿದೆ.












Click it and Unblock the Notifications