ಬಾಲಕಿಗೆ ಕಿಸ್ ವಿವಾದ : ಗಾಯಕ ಪಪೋನ್ ಗೆ ಸಂಕಷ್ಟ
ಮುಂಬೈ, ಫೆಬ್ರವರಿ 23: ಅಸ್ಸಾಂ ಮೂಲದ ಜನಪ್ರಿಯ ಗಾಯಕ ಪಪೋನ್ ಅವರು ಕಿಸ್ಸಿಂಗ್ ವಿವಾದದಲ್ಲಿ ಸಿಲುಕಿದ್ದಾರೆ. ರಿಯಾಲಿಟಿ ಶೋವೊಂದರ ನಂತರ ಫೇಸ್ ಬುಕ್ ಲೈವ್ ಬಂದಿದ್ದ ಪಪೋನ್ ಅವರು ಬಾಲಕಿಗೆ ಮುತ್ತಿಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಮ್ಯೂಸಿಕ್ ರಿಯಾಲಿಟಿ ಶೋವೊಂದರ ನಂತರ ಹೋಳಿ ಹಬ್ಬ ಆಚರಿಸಿದ ಪಪೋನ್, ಸ್ಪರ್ಧಗಳ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ.

ಆದರೆ, ಬಾಲಕಿಯ ಮುಖದಲ್ಲಿದ್ದ ಬಣ್ಣವನ್ನು ಬಳಿದು, ಆಕೆಯ ತುಟಿಗೆ ಮುತ್ತಿಡುತ್ತಾರೆ. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕವಾಗಿ ಮಾಡಿದಂತೆ ತೋರುವುದಿಲ್ಲವಾದರೂ, ಅಪ್ರಾಪ್ತರಿಗೆ ಈ ರೀತಿ ಮುತ್ತಿಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications