ಭಾರತದಲ್ಲಿ ಜನವರಿಯಲ್ಲಿ ಲಸಿಕೆ ಲಭ್ಯ: ಸೆರಮ್ ಸಂಸ್ಥೆ
ನವದೆಹಲಿ, ನವೆಂಬರ್ 6: ಜನವರಿ ತಿಂಗಳಿನಲ್ಲಿ ಭಾರತದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಎಸ್‌ಐಐ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ.
ಬ್ರಿಟನ್ ಮೂಲಕ ಔಷಧ ತಯಾರಕಾ ಸಂಸ್ಥೆ ಆಸ್ಟ್ರಾಜೆನೆಕಾ, ಕೊರೊನಾ ವೈರಸ್ ಲಸಿಕೆಯನ್ನು ಬಿಡುಗಡೆ ಮಾಡುವುದು ಸ್ವಲ್ಪ ತಡವಾಗಲಿದೆ ಎಂದು ತಿಳಿಸಿದೆ. ಅದಕ್ಕೂ ಮೊದಲು ಆಸ್ಟ್ರಾಜೆನಿಕಾ ಜಗತ್ತಿನಾದ್ಯಂತ ದೇಶಗಳಿಗೆ ಮೂರು ಬಿಲಿಯನ್ ಡೋಸ್‌ಗಳಿಗೂ ಹೆಚ್ಚು ಕೋವಿಡ್ 19 ಲಸಿಕೆಗಳನ್ನು ಪೂರೈಸುವ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿತ್ತು.
ಭಾರತದಲ್ಲಿ ಆಸ್ಟ್ರಾಜೆನೆಕಾದೊಂದಿಗೆ ಕೈಜೋಡಿಸಿರುವ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್' ಲಸಿಕೆಯನ್ನು ಉತ್ಪಾದಿಸುತ್ತಿದೆ. ಪ್ರಸ್ತುತ ಈ ಲಸಿಕೆಯು ಭಾರತದಲ್ಲಿ 2-3ನೇ ಹಂತದ ಪ್ರಯೋಗದಲ್ಲಿದೆ.

ಜಗತ್ತಿನ ವಿವಿಧೆಡೆ ಸುಮಾರು 45 ವಿವಿಧ ಬಗೆಯ ಕೋವಿಡ್ ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಇದುವರೆಗಿನ ಲಸಿಕೆಗಳಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಹೆಚ್ಚು ಪರಿಣಾಮಕಾರಿ ಎನಿಸಿದೆ. ಭಾರತ ಮತ್ತು ಬ್ರಿಟನ್‌ನಲ್ಲಿ ಲಸಿಕೆಯ ಪ್ರಯೋಗಗಳು ಯಶಸ್ವಿಯಾಗಿದ್ದು, ಅದರ ಹಿನ್ನೆಲೆಯಲ್ಲಿ 2021ರ ಜನವರಿಯಲ್ಲಿ ಭಾರದಲ್ಲಿ ಲಸಿಕೆಗಳು ಲಭ್ಯವಾಗುವ ನಿರೀಕ್ಷೆಯಿದೆ ಎಂದು ಅದಾರ್ ಪೂನಾವಾಲ ಹೇಳಿದ್ದಾರೆ.












Click it and Unblock the Notifications