ನವಜ್ಯೋತ್ ಸಿಂಗ್ ಸಿಧು ಪತ್ನಿ 'ಕಾಂಗ್ರೆಸ್' ಪಕ್ಷಕ್ಕೆ ಎಂಟ್ರಿ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24: ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ನವೆಂಬರ್ 28ರಂದು ಅಧಿಕೃತವಾಗಿ ಸೇರಲಿದ್ದಾರೆ.

ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಧು ಪತ್ನಿ ಕೌರ್ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ. ಸಿಧು ಪತ್ನಿ ಕೌರ್ ಹಾಗೂ ಪರ್ಗತ್ ಸಿಂಗ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಅಮರೀಂದರ್ ಟ್ವೀಟ್ ಮಾಡಿದ್ದಾರೆ.

Sidhu's wife to join Congress on November 28

ಸಿಧು ಅವರ ಪತ್ನಿ ಕೌರ್ ಅವರು ಪಂಜಾಬಿನ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದು ಅಕ್ಟೋಬರ್ 8ರಂದು ಬಿಜೆಪಿಯನ್ನು ಅಧಿಕೃತವಾಗಿ ತೊರೆದಿದ್ದರು.[ನವಜ್ಯೋತ್ ಸಿಧು ಹೊಸ ಇನ್ನಿಂಗ್ಸ್, ಅವಾಜ್ ಇ ಪಂಜಾಬ್ ಪಕ್ಷಕ್ಕೆ ಉದಯ]

ಸಿಧು ಅವರು ಸೆಪ್ಟೆಂಬರ್ 08 ರಂದು ಹೊಸ ರಾಜಕೀಯ ಪಕ್ಷ ಅವಾಜ್ ಇ ಪಂಜಾಬ್ ಗೆ ನಾಂದಿ ಹಾಡಿದ್ದರು. ಮಾಜಿ ಹಾಕಿ ಕ್ಯಾಪ್ಟನ್ ಪರ್ಗತ್ ಸಿಂಗ್ ಅವರು ಸಿಧು ಬೆನ್ನಿಗೆ ನಿಂತಿದ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ.

ಸಿಧು ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ತಮ್ಮ ಅಮೃತಸರ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಬಿಜೆಪಿ ಸಂಸತ್ ಸ್ಥಾನದಿಂದ ಕೆಳಗಿಳಿದಿರುವ ಸಿಧು ಅವರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಜತೆಗೆ ಕಾಂಗ್ರೆಸ್ ನಿಂದಲೂ ಸಿಧುಗೆ ಆಹ್ವಾನ ಬಂದಿತ್ತು. ಆದರೆ, ಇದೆಲ್ಲ ಸುದ್ದಿಯನ್ನು ಬದಿಗೊತ್ತಿ ಅವಾಜ್ ಇ ಪಂಜಾಬ್ ಪಕ್ಷಕ್ಕೆ ಉದಯ ಹಾಡಿದ್ದರು.ಈಗ ಪತ್ನಿ ಜತೆಗೆ ಕಾಂಗ್ರೆಸ್ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Navjot Kaur Sidhu, wife of cricketer-turned-politician Navjot Singh Sidhu, will join the Congress on November 28, Punjab Congress unit chief Captain Amarinder Singh said on Wednesday.
Please Wait while comments are loading...