ಮುಂದುವರಿದ ಕಾರ್ಯಾಚರಣೆ: ಹಿಮದಡಿ ಸಿಕ್ಕ ಸೈನಿಕರ ಪತ್ತೆ ಇಲ್ಲ

Subscribe to Oneindia Kannada

ನವದೆಹಲಿ, ಫೆಬ್ರವರಿ, 04: ನಿಜಕ್ಕೂ ದೇಶದ ಇತಿಹಾಸದಲ್ಲಿ ಇದೊಂದು ಕರಾಳ ದಿನ. ಹಿಮದಡಿ ಸಿಲುಕಿರುವ ಸೈನಿಕರ ಪತ್ತೆ ಇನ್ನು ಆಗಿಲ್ಲ. ಗಡಿ ಕಾಯುತ್ತಿದ್ದ ಯೋಧರಿಗೆ ನಿಸರ್ಗವೇ ಮಾರಕವಾಗಿದ್ದು ಸೇನೆ ಹುಡುಕಾಟದಲ್ಲಿ ನಿರತವಾಗಿದೆ.

ಭಾರತ -ಪಾಕಿಸ್ತಾನ ಗಡಿ ಸಿಯಾಚಿನ್‌ನ ಉತ್ತರ ಪ್ರಾಂತ್ಯದ ಹಿಮಪಾತದಡಿ ಸಿಲುಕಿದ 10 ಮಂದಿ ಯೋಧರ ಹುಡುಕಾಟ ಗುರುವಾರ ಮುಂದುವರಿದೆ. ಆದರೆ ಇಲ್ಲಿಯವರೆಗೆ ಯೋಧರ ಇರುವಿಕೆ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ.[ಹಿಮದಡಿ ಸಿಕ್ಕ ವೀರ ಯೋಧರ ಜೀವಕ್ಕಾಗಿ ಪ್ರಾರ್ಥಿಸಿ]

india

ಮದ್ರಾಸ್‌ ರೆಜಿಮೆಂಟ್‌ಗೆ ಸೇರಿದ 10 ಮಂದಿ ಸೈನಿಕರು ಬೆಳಗ್ಗಿನ ಜಾವ ಗಸ್ತಿನಲ್ಲಿದ್ದಾಗ ಹಿಮದ ಅಡಿ ಸಿಲುಕಿಕೊಂಡಿದ್ದರು. ಸಿಯಾಚಿನ್‌ನಲ್ಲಿ ಉಷ್ಣಾಂಶ ಮೈನಸ್‌ 60 ಡಿಗ್ರಿಗೆ ತಲುಪಿದ್ದು ಭಾರತದ ಸೇನೆ ಮತ್ತು ವಾಯುಸೇನೆ ದಿನವಿಡಿ ಹುಡುಕಾಟ ನಡೆಸಿದೆ.

ಸೈನಿಕರ ರಕ್ಷಣಾ ಕಾರ್ಯಕ್ಕೂ ತುಂಬಾ ಅಡಚಣೆಯಾಗುತ್ತಿದೆ. ಹಿಮ ಪಾತದಲ್ಲಿ ಸಿಕ್ಕ ಸೈನಿಕರು ಬದುಕುಳಿದಿರುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಎಸ್ ಡಿ ಗೋಸ್ವಾಮಿ ತಿಳಿಸಿದ್ದಾರೆ.[ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್]

india

ಆದರೆ ಸೈನ್ಯ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಸೈನ್ಯದ ಇತಿಹಾಸದಲ್ಲಿ ಇದೊಂದು ಘೋರ ದುರಂತವಾಗಿದ್ದು ಏನೂ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The rescue teams from Indian Army and Indian Air Force (IAF) are battling adverse weather conditions in search of missing soldiers in Siachen. The officials undertaking the search operations say that the chances of finding any survivors are now very remote.
Please Wait while comments are loading...