ಅಫ್ತಾಬ್‌ನನ್ನು ಪತಿ ಎಂದು ಕರೆದಿದ್ದ ಶ್ರದ್ಧಾ: ಪ್ರಮುಖ ರಹಸ್ಯ ಬಹಿರಂಗ

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಇದೀಗ ಶ್ರದ್ಧಾ ಅವರ ಮಾಜಿ ಬಾಸ್ ಕರಣ್ ಭಕ್ಕಿ ಅವರು ಶ್ರದ್ಧಾ ಮತ್ತು ಅಫ್ತಾಬ್ ಅಮೀನ್ ಪೂನಾವಾಲಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. ಶ್ರದ್ಧಾ ಅಫ್ತಾಬ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. 2020 ರ ಬಾರ್‌ನಲ್ಲಿ ಅಫ್ತಾಬ್ ಶ್ರದ್ಧಾ ಮೇಲೆ ಹಲ್ಲೆ ನಡೆಸಿದಾಗ, ಅವರು ಒಮ್ಮೆ ಅವರ ಸಹಾಯವನ್ನು ಕೇಳಿದಳು ಎಂದು ಕರಣ್ ಭಕ್ಕಿ ಹೇಳಿಕೊಂಡಿದ್ದಾರೆ. ಶ್ರದ್ಧಾ ಅಫ್ತಾಬ್ ಅವರನ್ನು ಪತಿ ಎಂದು ಕರೆಯುತ್ತಿದ್ದರು. ತಾವಿಬ್ಬರು ಮದುವೆಯಾಗಿದ್ದಾರೆ ಎಂದು ನನ್ನ ಬಳಿ ಹೇಳಿದ್ದಳು ಶ್ರದ್ಧಾ ಎಂದು ಕರಣ್ ಭಕ್ಕಿ ಹೇಳಿಕೊಂಡಿದ್ದಾರೆ.

ಇಂಡಿಯಾ ಟುಡೇ ಜೊತೆಗಿನ ಸಂಭಾಷಣೆಯ ಸಂದರ್ಭದಲ್ಲಿ, ಶ್ರದ್ಧಾ ಅವರ ಮಾಜಿ ಬಾಸ್ ಕರಣ್ ಭಕ್ಕಿ ಅವರು ನವೆಂಬರ್ 2020 ರಲ್ಲಿ ಶ್ರದ್ಧಾ ಅವರ ಮೇಲೆ ಅಫ್ತಾಬ್ ಪೂನಾವಾಲಾ ಹಲ್ಲೆ ನಡೆಸಿದ್ದರು. ಶ್ರದ್ಧಾ ಅವನೊಂದಿಗೆ ಅನೈತಿಕ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಶ್ರದ್ಧಾ ಮತ್ತು ಅಫ್ತಾಬ್ ಮದುವೆಯಾಗಿದ್ದಾರೆ ಎಂದು ನಮಗೆ ತಿಳಿಸಲಾಯಿತು ಎಂದು ಹೇಳಿದ್ದಾರೆ.

ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಅಫ್ತಾಬ್‌ನನ್ನು ನವೆಂಬರ್ 14 ರಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಶ್ರದ್ಧಾ ಮೇಲೆ ಹಲ್ಲೆ ಮಾಡಿದ್ದ ಅಫ್ತಾಬ್

ಈ ಹಿಂದೆ ಶ್ರದ್ಧಾ ಮೇಲೆ ಹಲ್ಲೆ ಮಾಡಿದ್ದ ಅಫ್ತಾಬ್

ಶ್ರದ್ಧಾ ಅವರ ಮಾಜಿ ಬಾಸ್ ಕರಣ್ ಭಕ್ಕಿ ಈ ಹಿಂದೆ ಅಫ್ತಾಬ್ ಹಲ್ಲೆ ಬಗ್ಗೆ ಶ್ರದ್ಧಾ ತಮ್ಮ ಬಳಿ ಹೇಳಿಕೊಂಡಿದ್ದಳು ಎಂದು ಹೇಳಿದ್ದಾರೆ. "ನವೆಂಬರ್ 2020 ರಲ್ಲಿ ನಡೆದ ಘಟನೆಯ ಬಗ್ಗೆ ಶ್ರದ್ಧಾ ನನಗೆ ಹೇಳಿದಾಗ, ಅವಳು (ಅಫ್ತಾಬ್) ಅವನನ್ನು ಪತಿ ಎಂದು ಕರೆದಳು. ಇದರಿಂದ ಅವಳು ಮದುವೆಯಾಗಿದ್ದಾಳೆಂದು ನಮಗೆ ಅನಿಸಿತು" ಎಂದಿದ್ದಾರೆ. 2020 ರಲ್ಲಿ ನಡೆದ ಘಟನೆಯೊಂದರ ಕುರಿತು ಮಾತನಾಡಿದ ಕರಣ್, "ಶ್ರದ್ಧಾ ಅವರ ಮೂಗಿನ ಮೇಲೆ ಏಟುಗಳು ಇದ್ದವು, ಆಕೆಯ ಕುತ್ತಿಗೆಯ ಮೇಲೆ ದೊಡ್ಡ ಗಾಯದ ಗುರುತುಗಳಿದ್ದವು. ಅಫ್ತಾಬ್ ಆಕೆಯ ಮೇಲೆ ಹಲ್ಲೆ ಮಾಡಿದ್ದನು ಘಟನೆಯ ನಂತರ ಶ್ರದ್ಧಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಂತರ ಅಫ್ತಾಬ್ ಶ್ರದ್ಧಾಗೆ ಕ್ಷಮೆಯಾಚಿಸಿದ್ದಾರೆ'' ಎಂದು ಅವರು ನನ್ನ ಬಳಿ ಹೇಳಿದರು. ಇನ್ನು ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಅಫ್ತಾಬ್ ಹೇಳಿದ್ದಾನೆ ಎಂದು ಅಂದು ನನಗೆ ಶ್ರದ್ಧಾ ಹೇಳಿದ್ದರು ಎಂದಿದ್ದಾರೆ.

ಬಾಸ್ ಸಹಾಯ ಕೇಳಿದ್ದ ಶ್ರದ್ಧಾ

ಬಾಸ್ ಸಹಾಯ ಕೇಳಿದ್ದ ಶ್ರದ್ಧಾ

ಮತ್ತೊಂದು ವಿಚಾರ ಅಂದರೆ ಅಫ್ತಾಬ್ ಪೋಷಕರೂ ಈ ವಿಚಾರ ತಿಳಿದಿತ್ತು ಎನ್ನಲಾಗುತ್ತಿದೆ. ಹಲ್ಲೆ ಘಟನೆ ನಡೆದಾಗ ಅಫ್ತಾಬ್‌ನ ಪೋಷಕರೂ ಮಧ್ಯಪ್ರವೇಶಿಸಿ ಇಬ್ಬರು ವಾಸವಿದ್ದ ಫ್ಲಾಟ್‌ನಿಂದ ಇಬ್ಬರನ್ನು ಹೊರಹಾಕುವಂತೆ ಮಾಲೀಕರಿಗೆ ಹೇಳಿದ್ದರಂತೆ. ಹೀಗಾಗಿ ಶ್ರದ್ಧಾ ಮಾಜಿ ಬಾಸ್‌ ಬಳಿ ಬಂದು ಸಹಾಯ ಮಾಡಲು ಕೇಳಿಕೊಂಡಿದ್ದರಂತೆ. ಮಾಜಿ ಬಾಸ್ ಶ್ರದ್ಧಾ ಅವರಿಗೆ ವಸತಿ ಹುಡುಕಲು ಸಹಾಯ ಮಾಡಲು ಪ್ರಯತ್ನಿಸಿದ್ದರು. ಕರಣ್ ಭಕ್ಕಿ ಅವರ ಮನೆಯಲ್ಲಿ ಕೆಲಕಾಲ ಇರಲು ಕೂಡ ಮುಂದಾಗಿದ್ದರು ಎಂದು ಹೇಳಿದ್ದಾರೆ.

ಶ್ರದ್ಧಾ ತುಂಬಾ ಸಂತೋಷವಾಗಿ ಇರುತ್ತಿದ್ದ ಹುಡುಗಿ

ಶ್ರದ್ಧಾ ತುಂಬಾ ಸಂತೋಷವಾಗಿ ಇರುತ್ತಿದ್ದ ಹುಡುಗಿ

ಕರಣ್ ಅವರು 2020 ರಿಂದ ಮಾರ್ಚ್ 2021 ರವರೆಗೆ ಶ್ರದ್ಧಾ ಅವರೊಂದಿಗೆ ಕೆಲಸ ಮಾಡಿದ್ದಾರೆ. ಶ್ರದ್ಧಾ ತುಂಬಾ ಸಂತೋಷದ ಹುಡುಗಿ ಎಂದು ಅವರು ಹೇಳಿದ್ದಾರೆ. ಅವಳು ಯಾವಾಗಲೂ ಆಫೀಸಿನ ಕೆಲಸಕ್ಕಾಗಿ ಇಲ್ಲಿಂದ ಅಲ್ಲಿಗೆ ಹೋಗುತ್ತಿದ್ದಳು. ಈ ಹಿಂದೆ, ಶ್ರದ್ಧಾ ಅವರ ಅನೇಕ ಸ್ನೇಹಿತರು ಅಫ್ತಾಬ್‌ನ ಹಲ್ಲೆಯ ಬಗ್ಗೆ ಹೇಳಿದ್ದಾರೆ. ಈ ಹಿಂದೆ, ಶ್ರದ್ಧಾ ಮತ್ತು ಅಫ್ತಾಬ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಶ್ರದ್ಧಾ ಸ್ನೇಹಿತ ಲಕ್ಷ್ಮಣ್ ನಾಡಾರ್ ಕೂಡ ಇಂಡಿಯಾ ಟುಡೇಗೆ ತಿಳಿಸಿದ್ದರು.

ರಜೆಗಾಗಿ ಆಗಾಗ ಬಾಸ್‌ಗೆ ಕರೆ ಮಾಡುತ್ತಿದ್ದ ಶ್ರದ್ಧಾ

ರಜೆಗಾಗಿ ಆಗಾಗ ಬಾಸ್‌ಗೆ ಕರೆ ಮಾಡುತ್ತಿದ್ದ ಶ್ರದ್ಧಾ

ಎರಡು ವರ್ಷಗಳ ಹಿಂದೆ ಪ್ರಿಯಕರ ಅಫ್ತಾಬ್ ಪೂನಾವಾಲಾ ನಡೆಸಿದ ಹಲ್ಲೆಯ ಬಗ್ಗೆ ಶ್ರದ್ಧಾ ವಾಕರ್ ಪ್ರಸ್ತಾಪ ಮಾಡಿದ್ದರು. ಪೊಲೀಸರು ಮತ್ತು ಅಫ್ತಾಬ್ ಪೋಷಕರ ಮಧ್ಯಸ್ಥಿಕೆಯ ನಂತರ ಅವರು ಬೇರ್ಪಟ್ಟಿದ್ದರು. ಆಕೆಯ ಮೇಲೆ ಆಫ್ತಾಬ್ ಹಲ್ಲೆ ಮಾಡಿದ್ದನು. ಅದರ ಫೋಟೋಗಳನ್ನು ಶ್ರದ್ಧಾ ಶೇರ್ ಮಾಡಿದ್ದರು. ಆಗ ಕರಣ್ ಅವರು ಆಕೆಗೆ ಸಹಾಯ ಮಾಡಲು ಪ್ರಯತ್ನಿಸಿದರು.

"ನವೆಂಬರ್ 2020 ರಲ್ಲಿ ನಾನು ಕೌಟುಂಬಿಕ ದೌರ್ಜನ್ಯದ ಬಗ್ಗೆ ಮೊದಲ ಬಾರಿಗೆ ತಿಳಿದುಬಂತು. ಅದಕ್ಕೂ ಮೊದಲು ಅವಳು ಆಗಾಗ್ಗೆ ಅನಾರೋಗ್ಯಕ್ಕೆ ರಜೆಗಾಗಿ ಕರೆ ಮಾಡುತ್ತಿದ್ದಳು" ಎಂದು ಮುಂಬೈನ ತನ್ನ ತವರು ವಸಾಯಿ ಬಳಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವಾಗ ಆಕೆಯ ತಂಡದ ಮ್ಯಾನೇಜರ್ ಕರಣ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+